ಮುದ್ದೇಬಿಹಾಳ: ಸಾಹಿತಿಗಳು ಇಷ್ಟಪಟ್ಟು ಬರೆದು, ಕಷ್ಟಪಟ್ಟು ಮುದ್ರಸಿ ಪುಸ್ತಕಗಳನ್ನು ಹೊರತರುತ್ತಾರೆ. ಆದರೆ ಆ ಪುಸ್ತಕಗಳನ್ನು ಕೊಂಡು ಓದುವ ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವುದು ಸಾಹಿತಿಗಳ ಆತಂಕಕ್ಕೆ ಕಾರಣವಾಗಿದೆ ಎಂದು ಹಿರಿಯ ಸಾಹಿತಿ ಡಾ.ಸತ್ಯಾನಂದ ಪಾತ್ರೋಟ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಅಮರಗೋಳ ಗ್ರಾಮದಲ್ಲಿ ಬಾವೈಕ್ಯ ಸಾಹಿತ್ಯ ವೇದಿಕೆ, ಡಾ.ಸಿಂಪಿಲಿಂಗಣ್ಣ ಸಾಹಿತ್ಯ ವೇದಿಕೆ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ದಿ.ಮಲಕಣ್ಣ ಮಾಸ್ತರ ಇವರ ೭ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ದತ್ತಿ ಕಾರ್ಯಕ್ರಮದಲ್ಲಿ “ಸಾಹಿತ್ಯ ರತ್ನ” ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.
ಇಂದಿನ ಮೊಬೈಲ್ ಹಾಗೂ ಟಿ.ವ್ಹಿ.ಹಾವಳಿಗೆ ಸಿಲುಕಿ ಪುಸ್ತಕಗಳು ಓದುಗರ ಕೈಯಲ್ಲಿರದೆ ಗೆದ್ದಲು ಹತ್ತುತ್ತಿರುವುದು ವಿಷಾದನೀಯ. ಬಡತನದ ಬವಣೆಯಲ್ಲಿ ನೊಂದು ಬೆಂದು ಕಷ್ಟದಲ್ಲಿಯೇ ಕೈತೊಳೆದುಕೊಂಡು ಜೀವನ ಸಾಗಿಸಿದ್ದ ಅದೆಷ್ಟೋ ಸಾಹಿತಿಗಳಿಗೆ ಕೈ ಹಿಡಿದದ್ದೇ ಸಾಹಿತ್ಯ ಕ್ಷೇತ್ರ. ಇತ್ತೀಚಿನ ದಿನಮಾನಗಳಲ್ಲಿ ಪುಸ್ತಕಗಳನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವದರಿಂದ ಬಡಸಾಹಿತಿಗಳ ಬದುಕು ಗಂಭೀರ ಹಂತ ತಲುಪಿದೆ. ಪುಸ್ತಕಗಳನ್ನು ಕೊಂಡುಕೊಂಡು ಓದುವ ಹವ್ಯಾಸವನ್ನು ಪ್ರತಿಯೊಬ್ಬ ಓದುಗರು ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಅಶೋಕ ಮಣಿ ಮಾತನಾಡಿದರು.
ಮಲಕಣ್ಣ ಮಾಸ್ತರರ ಬದುಕು ಬರಹ ಕುರಿತು ವಿಜಯಪುರದ ಉಪನ್ಯಾಸಕ ಪ್ರೊ. ಯು.ಎನ್.ಕುಂಟೋಜಿ ಮಾತನಾಡಿದರು.
ತಂಗಡಗಿಯ ಪೂಜ್ಯ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದರು, ಯರಝರಿಯ ಪೂಜ್ಯ ಮಲ್ಲಾರಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಾನಿಧ್ಯವನ್ನು ವೇ.ಶ್ರೀ ದೊಡ್ಡಯ್ಯ ಹಿರೇಮಠ, ಹಾಗೂ ವೇ.ಶ್ರೀ ವಿನೋದ ಹಿರೇಮಠ ಅವರು ವಹಿಸಿದ್ದರು. ಕಾಶಿಂಬಿ ನದಾಫ, ಸಾಹಿತಿ ಸಿದ್ಧನಗೌಡ ಬಿಜ್ಜೂರ, ರವಿಗೌಡ ಪಾಟೀಲ ಸೇರಿದಂತೆ ಗ್ರಾಮದ ಗಣ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ಶಿಕ್ಷಕ ಸಮೂಹ ಪಾಲ್ಗೊಂಡಿದ್ದರು. ಗ್ರಾಮದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಟಿ.ಎನ್.ರೂಢಗಿ ಶಿಕ್ಷಕರು ಸ್ವಾಗತಿಸಿದರು, ಪ್ರಾಚಾರ್ಯ ಎಸ್.ಕೆ.ಹಡಲಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಹಾಂತೇಶ ಪಟ್ಟಣದ ವಂದಿಸಿದರು. ಶಿಕ್ಷಕಿ ಸರೋಜಿನಿ ಕೋರಿ ನಿರೂಪಿಸಿದರು. ಸಂಗಮೇಶ ಶಿವಣಗಿ, ಮಹಾಗುಂಡಪ್ಪ ಹೂಗಾರ ತಂಡದವರು ಸಂಗೀತ ಸೇವೆ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment

