ಆಲಮಟ್ಟಿ: ಪ್ರಯಾಸದ ಪ್ರಯಾಣವಾಗಿದ್ದ ರೈಲು ಈಗ ಆರಾಮದಾಯಕ ಪ್ರಯಾಣವಾಗುತ್ತಿದೆ. ಇದಕ್ಕೆ ಕಾರಣ ದೇಶದ ಪ್ರಧಾನಿ ನರೇಂದ್ರ ಮೋದಿ ಎಂದು ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.
ಆಲಮಟ್ಟಿ ರೈಲು ನಿಲ್ದಾಣದಲ್ಲಿ ಸೋಮವಾರ ನಡೆದ, 15.21 ಕೋಟಿ ರೂ ವೆಚ್ಚದಲ್ಲಿ ಆಲಮಟ್ಟಿ ರೈಲು ನಿಲ್ದಾಣದ ಆಧುನೀಕರಣದ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಡ, ಮಧ್ಯಮ ವರ್ಗದವರೇ ಹೆಚ್ಚಿನ ಪ್ರಮಾಣದಲ್ಲಿ ಪ್ರಯಾಣಿಸುವ ರೈಲ್ವೆ ಸಾರಿಗೆಯೂ ವಿಮಾನ ಸಾರಿಗೆಯಷ್ಟೇ ಸುಖಕರವಾಗಿರಲಿ ಎನ್ನುವ ಉದ್ದೇಶದಿಂದ ದೇಶಾದ್ಯಂತ ರೈಲು ನಿಲ್ದಾಣ ಹಾಗೂ ರೈಲ್ವೆಯ ಸ್ವರೂಪವನ್ನೇ ಬದಲಾವಣೆ ಮಾಡಲಾಗುತ್ತಿದೆ ಎಂದರು.
ಇಡೀ ದೇಶಾದ್ಯಂತ ಬಹುತೇಕ ರೈಲ್ವೆ ಮಾರ್ಗಗಳು ಡಬಲಿಂಗ್ ಜತೆಗೆ ವಿದ್ಯುದೀಕರಣಗೊಂಡಿವೆ ಎಂದರು. ಸಾಗರಮಾಲಾ, ಪರ್ವತಮಾಲಾ, ಭಾರತಮಾಲಾ ಯೋಜನೆಯಿಂದ ಇಡೀ ದೇಶಾದ್ಯಂತ ಸಾರಿಗೆ ಕ್ಷೇತ್ರದಲ್ಲಿ ಭಾರಿ ಬದಲಾವಣೆಯಾಗಿದೆ ಎಂದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಕವಿತಾ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು.
ರೈಲ್ವೆ ಅಧಿಕಾರಿ ಎಂ. ಚೇತನಕುಮಾರ, ರೈಲ್ವೆ ಇಲಾಖೆಯ ಹಿರಿಯ ಹಣಕಾಸು ವ್ಯವಸ್ಥಾಪಕ ಜಿ.ಬೂ.ಝಕಾಬ್, ಎಂ.ಚೇತನಕುಮಾರ, ಚಂದ್ರಹಾಸ್, ಜಯಶ್ರೀ ರಾಠೋಡ, ಲಕ್ಷ್ಮೀ ರಾಠೋಡ, ರಮೇಶ ಆಲಮಟ್ಟಿ, ಕಲ್ಲು ಸೊನ್ನದ, ಎನ್.ಎ. ಪಾಟೀಲ, ವಿ.ಎಂ. ಯಾಳವಾರ, ವಸಂತ ಬಳ್ಳೊಳ್ಳಿ, ಮಹಾಂತೇಶ ಹಿರೇಮಠ, ದಶರಥ ಬಂಡಿವಡ್ಡರ, ಪ್ರಶಾಂತ ಗಣಿ, ಪದ್ಮಾವತಿ ಗುಡಿ, ಸಂತೋಷ ಕಡಿ, ಶಿವಾನಂದ ಕೋಳಿ, ಶೇಖರ ಗೂಗಿಹಾಳ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

