ಮುದ್ದೇಬಿಹಾಳ: ಸಮಾಜದಲ್ಲಿ ತಮ್ಮ ಕಷ್ಟಗಳನ್ನು ಮರೆತು, ತನಗಾಗಿ ಅಲ್ಲದೇ ತಮ್ಮವರಿಗೋಸ್ಕರ ಬದುಕುವವಳು ಹೆಣ್ಣು ಅವಳು ಮನಸ್ಸು ಮಾಡಿದಲ್ಲಿ ಇಡೀ ಜಗತ್ತನ್ನೇ ಆಳಬಲ್ಲಳು ಎಂದು ವಿಜಯಪುರದ ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.
ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ನಡೆದ ಮಹಿಳಾ ಸಂಪದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಧ್ಯದ ಕಾಲಘಟ್ಟದಲ್ಲಿ ಹಣಕ್ಕೆ, ಆಸ್ತಿಗೆ ಇರುವ ಮೌಲ್ಯಕ್ಕಿಂತ ಹೆಚ್ಚಿಗೆ ವಿದ್ಯೆಗೆ ಬೆಲೆ ಇದೆ. ಗಳಿಸಿದ ಹಣ, ಆಸ್ತಿ, ಸಂಪತ್ತು ಹಾಳಾಗಬಹುದು ಆದರೆ ವಿದ್ಯೆ ಯಾವತ್ತೂ ಹಾಳಾಗಲಾರದು. ಪ್ರತಿಯೊಬ್ಬರೂ ನಿಮ್ಮ ಮಕ್ಕಳಿಗೆ ವಿದ್ಯೆ ಕೊಡಿಸಬೇಕು. ಗಂಡು ಮಕ್ಕಳಷ್ಟೇ ಹೆಣ್ಣು ಮಕ್ಕಳಿಗೂ ಸಮಾನತೆ ಇರುವ ಸಧ್ಯದ ಬೆಳವಣಿಗೆಯಲ್ಲಿ ನಿಮ್ಮ ಮಗು ಹೆಣ್ಣು ಅಂತಾ ವಿದ್ಯೆಯಿಂದ ವಂಚಿತರಾಗಿ ಮಾಡಿದಲ್ಲಿ ಆ ಮಗು ಮುಂದೆ ಕಣ್ಣೀರಿಡುವ ಪರಿಸ್ಥಿತಿ ಎದುರಾಗಬಹುದು ಎಂದರು.
ಸ್ವಯಂಭೂ ಆರ್ಟ್ ಫೌಂಡೇಶನ್ ನ ಸಂಸ್ಥಾಪಕಿ ದೀಕ್ಷಾ ಬಿಸೇ ಮಾತನಾಡಿ, ಪ್ರತೀ ಹೆಣ್ಣು ಮಗುವಿಗೆ ವಿದ್ಯೆಯ ಜೊತೆಗೆ ಕಲೆ ಸಂಸ್ಕೃತಿಯನ್ನೂ ಕಲಿಸಬೇಕು. ನಮ್ಮ ಸಂಸ್ಥೆಯಲ್ಲಿ ಬಡ ಮತ್ತು ಅನಾಥ ಮಕ್ಕಳಿಗೆ ಉಚಿತ ನೀಡುವ ಸೇವೆ ನೀಡುತ್ತಿರುವದಾಗಿ ತಿಳಿಸಿದರು.
ಸುಗೂರಿನ ರುದ್ರಮುನೀಶ್ವರಮಠದ ಚನ್ನರುದ್ರಮುನಿ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಗಡಿ ಗೌಡಗಾಂವದ ಹಾವಗಿ ಶಾಂತಲಿಂಗೇಶ್ವರಮಠದ ಶಾಂತವೀರ ಶಿವಾಚಾರ್ಯ ಸ್ವಾಮಿಗಳು ಪುರಾಣ ನುಡಿಗಳನ್ನಾಡಿದರು.
ಸಾಧನಾ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗಿರಿಜಾ ಕಡಿ, ಗ್ರಾ.ಪಂ ಉಪಾಧ್ಯಕ್ಷ ನಂದಾ ಬಾಗೇವಾಡಿ, ಮಾಜಿ ಅಧ್ಯಕ್ಷೆ ಇಂದ್ರಭಾಯಿ ಪಾಟೀಲ, ಯಶಸ್ವಿನಿ ಮಹಿಳಾ ಸಂಘದ ಅಧ್ಯಕ್ಷೆ ಸಿದ್ದಮ್ಮ ಒಣರೊಟ್ಟಿ ಸೇರಿದಂತೆ ಇತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

