ಅತ್ಯಾಚಾರ ಯತ್ನದ ಆರೋಪಿಗಳ ಬಂಧನಕ್ಕೆ ಮಾದಿಗರ ಸಂಘ ಆಗ್ರಹ
ವಿಜಯಪುರ: ಕರ್ನಾಟಕ ಮಾದಿಗರ ಸಂಘ ವಿಜಯಪುರ ವತಿಯಿಂದ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮದ ದಲಿತ ಯುವತಿ ದುರ್ಗಮ್ಮ ಮಾದರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಮಾಡಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿಗಳನ್ನು ಬಂದಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಘದ ವಿಜಯಪುರ ಜಿಲ್ಲಾಧ್ಯಕ್ಷ ಶ್ರೀಶೈಲ ರತ್ನಾಕರ್ ಮಾತನಾಡಿ ಕವಡಿಮಟ್ಟಿ ಗ್ರಾಮದ ಯುವತಿ ದುರ್ಗಮ್ಮ ಮಾದರ ಬಡ ಕೂಲಿ ಕಾರ್ಮಿಕರಾಗಿದ್ದು ಅದೇ ಗ್ರಾಮದ ಹೊಲದಲ್ಲಿ ಕಬ್ಬು ಕಡಿಯಲು ಕೂಲಿಗೆ ಕೆಲಸಕ್ಕೆ ಹೋದಾಗ ಹೊಲದ ಮಾಲೀಕನ ಸೊಸೆ ಸಾಬವ್ವ ಮಂಜುನಾಥ್ ವಾಲಿಕಾರ, ಸಂಗಪ್ಪ ವಾಲಿಕಾರ, ಬಸಪ್ಪ ಸಂಗಪ್ಪ ವಾಲಿಕಾರ್, ಇವರು ಕ್ಷುಲ್ಲಕ ಕಾರಣಕ್ಕೆ ಯುವತಿಯ ಮೇಲೆ ಹಲ್ಲೆ ಮಾಡಿ ಜಾತಿನಿಂದನೆ ಮಾಡಿರುತ್ತಾರೆ. ಸುರೇಶನು ಕೂಲಿ ಕಾರ್ಮಿಕರ ಎದುರಿನಲ್ಲಿಯೇ ಯುವತಿಯ ಮೇಲೆ ಬಿದ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಇದಕ್ಕೆ ಅವನ ಸೋದರಿ ಸಾಬವ್ವ ವಾಲಿಕಾರ್ ಸಹಕರಿಸಿರುತ್ತಾಳೆ. ಯುವತಿಯನ್ನು ಅವರ ಸಂಬಂಧಿಕರು ಆಸ್ಪತ್ರೆಗೆ ದಾಖಲಿಸಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದರೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರವರು ಯಾವುದೇ ಕ್ರಮ ಕೈಗೊಳ್ಳದೆ ದರ್ಪದಿಂದ ಇವರನ್ನೇ ಬೆದರಿಸಿರುತ್ತಾರೆ. ಕಾರಣ ಇವರನ್ನು ಕೂಡಲೇ ಅಮಾನತ್ತು ಮಾಡಬೇಕು ಇಲ್ಲದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು
ಭಾಗವಹಿಸಿದ್ದ ಮಲ್ಲು ಶೇಷಗಿರಿ, ಪರಶುರಾಮ್ ದೊಡ್ಡಮನಿ, ಸೋಮನಾಥ ದೊಡ್ಡಮನಿ, ವಿಜಯ್ ಮಾದರ ಜಂಬಿಗಿ, ಪರಶುರಾಮ್ ಮಾದರ ಕವಡಿಮಟ್ಟಿ, ಶಿವಾನಂದ್ ನಂದಿಹಾಳ, ಶಶಿಧವಳಗಿ ಮುಂತಾದವರು ಭಾಗವಹಿಸಿದ್ದರು
