Author: editor.udayarashmi@gmail.com

ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ಗ್ರಾಹಕರ ವಿಶ್ವಾಸ ಗಳಿಸಿ, ಇದೀಗ ಇಂಡಿ ಮತ್ತು ತಾಳಿಕೋಟೆಗಳಲ್ಲಿ ದಿ.4 ಸೋಮವಾರರಂದು ನೂತನ ಶಾಖೆಗಳು ಆರಂಭವಾಗಲಿವೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಿ.ಎಲ್.ಡಿ ಸೌಹಾರ್ದವು ಕಳೆದ ಒಂದುವರೆ ವರ್ಷದಲ್ಲಿ ರೂ. 225 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ಆಕರ್ಷಕ ಬಡ್ಡಿ ದರಗಳೊಂದಿಗೆ ರೂ. 100 ಕೋಟಿಗೂ ಅಧಿಕ ಸಾಲಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ 0.5% ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಅಲ್ಲದೇ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಮತ್ತು ರಾಷ್ಟ್ರೀಕೃತ ಸೇವೆಗಳಾದ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ ಸೌಲಭ್ಯಗಳನ್ನು ಆರಂಭಿಸಲಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.ಪಾಟೀಲ ಹೊಂಡಾ ಶೋರೂಂ ಕಟ್ಟಡ, ವಿಜಯಪುರ ರಸ್ತೆ, ಇಂಡಿಯಲ್ಲಿ ಬೆ.10ಗಂ. ಆರಂಭವಾಗಲಿರುವ ಶಾಖೆಯಲ್ಲಿ ಬಂಥನಾಳ ಸಂಸ್ಥಾನ ಮಠದ ಮ.ನಿ.ಪ್ರ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಸಾನಿಧ್ಯ…

Read More

ಆಲಮೇಲದ ವಿಶ್ವೇಶ್ವರ ಪ್ರಾಥಮಿಕ ಶಾಲೆಯ ಸ್ನೇಹ ಸಮ್ಮೇಳನ & ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 34ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ ಸಮಾರಂಭ ವಿಜ್ರಂಭಣೆಯಿಂದ ಜರುಗಿತು.ಸಮಾರಂಭವನ್ನು ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ ಸೀಜನ್ ೧೯ರ ಫೈನಲಿಸ್ಟ ಕು.ರೇವಣಸಿದ್ದ ಫುಲಾರಿ ಉದ್ಘಾಟಿಸಿದರು .ಕಾರ್ಯಕ್ರಮವನ್ನು ದಾನಯ್ಯ ಕವಟಗಿಮಠ ೬೫ ಸೆಟ್, ನೆಟ್,ಟಿ.ಇ.ಟಿ ,ಪರೀಕ್ಷೆಗಳನ್ನು ಉತ್ತೀರ್ಣ ಮಾಡಿ ಇಂಗ್ಲೆಂಡ್ ಹಾಗೂ ಭಾರತ ದೇಶಗಳ ವಿಶ್ವದಾಖಲೆ ಮಾಡಿರುವ ಅಕ್ಕಲಕೋಟ ನ ಕೆ.ಎಲ್.ಇ ಸೊಸೈಟಿನ ಪ್ರಾಧ್ಯಾಪಕರು ಜ್ಯೋತಿ ಬೆಳಗಿಸಿದರು.ಬಳಿಕ ಮಾತನಾಡಿದ ಅವರು, ಇಂದಿನ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿರುಚಿಗೆ ತಕ್ಕಂತೆ ಅವರ ಇಷ್ಟವಾದ ಕಲಿಕೆ ಪ್ರೋತ್ಸಾಹ ನೀಡಬೇಕು. ಇಂತಹ ಗ್ರಾಮೀಣ ಮಟ್ಟದ ಬಡ ಮಕ್ಕಳಿಗೆ ಈ ಶಾಲಾ ಆಡಳಿತ ಮಂಡಳಿಯವರು ಅಂದಾಜು ೬ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಿಜಿಟಲ್ ಬೋರ್ಡಗಳನ್ನು ಅಳವಡಿಸಿ…

Read More

ವಿಜಯಪುರ: ನಗರದ ಡಾ ಡಿ.ಎನ್. ಧರಿ ಇವರಿಗೆ ಭಾರತ ಯುವ ವೇದಿಕೆ ಸಂಸ್ಥೆಯಿಂದ ವೈದ್ಯಕೀಯ ಸೇವೆಗಾಗಿ ಪ್ರಸಕ್ತ ಸಾಲಿಗೆ “ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಜೈನಾಪೂರ ತಿಳಿಸಿದ್ದಾರೆ.ಮೂಲತಃ ಬಸವ ನಾಡಿನ ಎಂಭತನಾಳ ಗ್ರಾಮದ ರೈತಾಪಿ ಕುಟುಂಬದ ಡಾ.ಧರಿ ಅವರು 1994 ರಿಂದ ಇಲ್ಲಿಯವರೆಗೆ 30 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವರು ವೃತ್ತಿ ಜೀವನ ಆರಂಭಿಸಿ 25 ವರ್ಷಗಳಿಂದ ವಿಜಯಪುರ ಮಹಾನಗರದ ಆದರ್ಶ ನಗರ ಬಡಾವಣೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರ ದವಾಖಾನೆಯ ಸರಳತೆ ಸೌಜನ್ಯತೆ ಅಂಗವಿಕಲರಿಗೆ ಅಂದರಿಗೆ ಅನಾಥರಿಗೆ ಉಚಿತವಾಗಿ ಸೇವೆ ಮಾಡುತ್ತಿರುವುದು ಅವರ ಗುರುಗಳು ಅವರಿಗೆ ನೀಡಿದ ಮಾರ್ಗದರ್ಶನ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ವಿಜಯಪುರದ ಗಾನ ಬನದ ಸಂಗೀತ ಶಾಲೆಯ ಎಲ್ಲ ಮಕ್ಕಳಿಗೆ ಇಂದಿನವರೆಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ಉಪಚಾರ ಮಾಡುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪರಮ ಭಕ್ತರಾದ ಇವರು…

Read More

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟವನ್ನು ‘ಬಾಂಬ್ ಸ್ಫೋಟ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.ಕೆಫೆಯೊಳಗೆ ಅನುಮಾನಾಸ್ಪದ ವ್ಯಕ್ತಿಯೊಬ್ಬ ಬ್ಯಾಗ್ ಇಟ್ಟು ಹೋಗಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.‘ಇದು ಭಾರೀ ಸ್ಫೋಟಕವಲ್ಲ. ಆದರೆ ಅದನ್ನು ಸುಧಾರಿತಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕೆಫೆಯೊಳಗೆ ಬ್ಯಾಗ್ ಇಟ್ಟ ವ್ಯಕ್ತಿ ಕ್ಯಾಶ್ ಕೌಂಟರ್‌ನಿಂದ ಟೋಕನ್ ತೆಗೆದುಕೊಂಡಿದ್ದಾನೆ. ಕ್ಯಾಷಿಯರ್ ವಿಚಾರಣೆ ನಡೆಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.ಗಾಯಗೊಂಡವರಲ್ಲಿ ಮೂವರು ಸಿಬ್ಬಂದಿ ಮತ್ತು ಒಬ್ಬ ಗ್ರಾಹಕ ಸೇರಿದ್ದಾರೆ; ಗಾಯಗಳು ಗಂಭೀರವಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

Read More

9 ಮಂದಿಗೆ ಗಂಭೀರ ಗಾಯ | ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬ್ಯಾಗ್‌ನಲ್ಲಿ ಇರಿಸಿದ್ದ ನಿಗೂಢ ವಸ್ತು ಸ್ಫೋಟ ಬೆಂಗಳೂರು: ಇಲ್ಲಿನ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಎಚ್ ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ದಿಢೀರ್ ಸ್ಫೋಟ ಸಂಭವಿಸಿದ ಪರಿಣಾಮ ಕೆಫೆಯಲ್ಲಿ ಕೆಲಕಾಲ ಗೊಂದಲ ಉಂಟಾದ ಪರಿಣಾಮ ಗ್ರಾಹಕರು ಪ್ರಾಣ ಉಳಿಸಿಕೊಳ್ಳಲು ಓಡಿದರು. ವರದಿಗಳ ಪ್ರಕಾರ, ಕೆಫೆಯಲ್ಲಿ ಗ್ರಾಹಕನ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ಬ್ಯಾಗ್‌ನಲ್ಲಿ ಇರಿಸಿದ್ದ ನಿಗೂಢ ವಸ್ತು ಸ್ಫೋಟಗೊಂಡಿದೆ.ಘಟನೆಯಲ್ಲಿ 9 ಮಂದಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು, ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿದೆ. ಕೆಫೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.ಒಂಬತ್ತು ಜನ ಗಾಯಾಳುಗಳಲ್ಲಿ ಒಬ್ಬರಿಗೆ ಶೇಕಡಾ 40ರಷ್ಟು ಸುಟ್ಟ ಗಾಯಗಳಾಗಿದ್ದು,…

Read More

ಇಂಡಿ: ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ, ಮೂಲ ವಿಜ್ಞಾನಕ್ಕೆ ಆಧ್ಯತೆ ನೀಡಬೇಕು. ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವೈಜ್ಞಾನಿಕ ಹಾಗೂ ಸಂಶೋಧನ ಮನೋಭಾವ ಬೆಳೆಯಲಿದೆ ಎಂದು ವಿಜ್ಞಾನ ಶಿಕ್ಷಕಿ ನಂದಾ ಎಸ್.ಚವ್ಹಾಣ ಹೇಳಿದರು.ಅವರು ತಾಲೂಕಿನ ಮಿರಗಿ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಜ್ಞಾನವು ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿರುವ ಅಂಧಕಾರವನ್ನು ತೊಲಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.ವಿಜ್ಞಾನಿಗಳು ಸತತ ಪರಿಶ್ರಮ ತಾಳ್ಮೆಗಳಿಂದ ಸಂಶೋಧನಗಳನ್ನು ಕೈಗೊಂಡು ಸಮಾಜಕ್ಕೆ ಉಪಯುಕ್ತ ಸೇವೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಸರ್ ಸಿವಿ ರಾಮನ್ ಅವರ ಸಾಧನೆಗಳನ್ನು ಮಾತ್ರವಲ್ಲದೆ ಇತರ ವಿಜ್ಞಾನಿಗಳನ್ನೂ ಗೌರವಿಸುವ ದೃಷ್ಟಿಯಿಂದ, ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳನ್ನು ಮೆಲಕು ಹಾಕಲು ವಿಜ್ಞಾನ ದಿನವನ್ನು ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳ ಇತರೆ ಸಂಸ್ಥೆಗಳು ಫೆ.೨೮ ರಂದು ಆಚರಿಸಲಾಗುತ್ತದೆ…

Read More

ಇಂಡಿ: ಕೃಷಿ,ತೋಟಗಾರಿಕೆ, ಉದ್ದಿಮೆ,ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಜ್ಞಾನ ಮುಂದುವರೆದಿದ್ದು ದೇಶ ಪ್ರಗತಿ ಸಾಧಿಸುತ್ತಿದೆ ಎಂದು ಹತ್ತಳ್ಳಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಸ್.ಕಾಂಬಳೆ ಹೇಳಿದರು.ಪಟ್ಟಣದ ಗುರುಬಸವ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ ವಿಜ್ಞಾನ ಪ್ರದರ್ಶನ,ಇಂಡಿ ತಾಲೂಕ ಬಾಲ ವಿಜ್ಞಾನ ಘಟಕ ಸಮಿತಿ ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ರಮೇಶ ನಾಯಕ ಮಾತನಾಡಿ, ಇಂದು ಭಾರತದ ಇಸ್ರೋ ಸಾಧನೆ ಜಗತ್ತು ಮೆಚ್ಚುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಭಾರತೀಯ ವಿಜ್ಞಾನಿಗಳು ಸಾಧನೆ ಮಾಡುತ್ತಿದ್ದು ಭಾರತ ವಿಜ್ಞಾನ ಪ್ರಗತಿಯಿಂದ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ ಎಂದರು.ಸಂಸ್ಥೆಯ ಆಡಳಿತಾಧಿಕಾರಿ ಎ.ಎಸ್.ಪಾಟೀಲ, ಪ್ರಾಚಾರ್ಯ ಎಸ್.ಆರ್.ರಾಠೋಡ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ, ಸತೀಶ ವಾಲಿಕಾರ, ಅಶೋಕ ನಾಯಿಕೊಡಿ, ಸಂಜೀವಕುಮಾರ, ಯಾಸ್ಕಿನ, ಎಸ್.ಎಂ.ಬಿರಾದಾರ, ವೇದಾ ತುಪ್ಪದ, ಜೆ.ಪಿ.ಪಾಟೀಲ ಮಾತನಾಡಿದರು.ವಿದ್ಯಾರ್ಥಿಗಳು ಇಸ್ರೋ ಸಾಧನೆ, ಚಂದ್ರಯಾನ, ಸೋಲಾರ ವಿದ್ಯುತ್ ಸೇರಿದಂತೆ ಹಲವಾರು ವಿಜ್ಞಾನ ಪ್ರದರ್ಶನ ಮಾಡಿದರು.ಇದೇ ವೇಳೆ ಜಿ.ಎಸ್.ಕಾಂಬಳೆಯವರು ಪವಾಡ ಬಯಲು ರಹಸ್ಯ ಕಾರ್ಯಕ್ರಮ ನಡೆಸಿದರು.

Read More

ಇಂಡಿ: ಪಟ್ಟಣದ ಪುರಸಭೆಯ ೨೦೨೪-೨೫ ನೆಯ ಸಾಲಿನ ೪ ಲಕ್ಷ ರೂ ಉಳಿತಾಯ ಬಜೆಟ್‌ನ್ನು ಪುರಸಭೆ ಆಡಳಿತಾಧಿಕಾರಿ ಮತ್ತು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ಬುಧವಾರ ಮಂಡಿಸಿದರು.ಸ್ವೀಕೃತಿಗಳಲ್ಲಿ ರಾಜಸ್ವ ೧೬ ಕೋಟಿ ೦೬ ಲಕ್ಷ ರೂ, ಬಂಡವಾಳ ಸ್ವೀಕೃತಿ ೧೬ ಕೋಟಿ ೮೨ ಲಕ್ಷ ರೂ ಅಸಾಧಾರಣ ಸ್ವೀಕೃತಿಗಳು ೧೩ ಕೋಟಿ ೭೦ ಲಕ್ಷ ರೂ ಹೀಗೆ ಒಟ್ಟು ಸ್ವೀಕೃತಿಗಳು ೪೬ ಕೋಟಿ ೫೯ ಲಕ್ಷ ರೂ ಬಜೆಟ್ ಮಂಡಿಸಿದರು.ವೆಚ್ಚಗಳಲ್ಲಿ ರಾಜಸ್ವ ಪಾವತಿಗಳು ೧೫ ಕೋಟಿ ೧೮ ಲಕ್ಷ ರೂ, ಬಂಡವಾಳ ಪಾವತಿಗಳು ೧೭ ಕೋಟಿ ೬೬ ಲಕ್ಷ ರೂ, ಅಸಾಧಾರಣ ಪಾವತಿಗಳು ೧೩ ಕೋಟಿ ೭೦ ಲಕ್ಷ ರೂ ಹೀಗೆ ಒಟ್ಟು ೪೬ ಕೋಟಿ ೫೫ ಲಕ್ಷ ರೂ ವೆಚ್ಚಗಳ ಬಜೆಟ್ ಮಂಡಿಸಿದರು.ಒಟ್ಟು ೪ ಲಕ್ಷ ರೂ ಉಳಿತಾಯದ ಬಜೆಟ್‌ನ್ನು ಮಂಡಿಸಿದ್ದಾರೆ.ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಅಕೌಟಂಟ ಅಸ್ಲಂ ಖಾದಿಮ, ಕಂದಾಯ ನಿರೀಕ್ಷಕ ಸದಾಶಿವ ನಿಂಬಾಳಕರ, ಸುಭಾನಿ ಖಸಾಬ, ಪ್ರವೀಣ…

Read More

ವಿಜಯಪುರ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ಐ ಕ್ಯೂ ಎ ಸಿ ಹಾಗೂ ರೆಡ್ ಕ್ರಾಸ್ ಘಟಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನವಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.ಸದರಿ ಶಿಬಿರವನ್ನು ಉದ್ಘಾಟಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆರ್ ಎಸ್ ಕಲೂರಮಠ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಿನಜಾ ಕಾಗದಕೋಟಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಎಲ್ಲರೂ ಪೌಷ್ಟಿಕ ಆಹಾರವೇ ಸೇವಿಸಬೇಕು. ಶುಚಿತ್ವ ದೊಂದಿಗೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಹೇಳಿದರು.ಕಾರ್ಯಕ್ರಮದಲ್ಲಿ ಡಾ. ಚಿದಾನಂದ ಎಸ್ ಆನೂರ್,ಪ್ರೊ ರಮೇಶ್ ಬಳ್ಳೊಳ್ಳಿ,ಪ್ರೊ ಆಸಿಫ್ ರೋಜನ್ದಾರ್,ಡಾ. ಅಸಾದುಲ್ಲ, ಡಾ ಎಂ ಆರ್ ಕೆಂಭಾವಿ, ಡಾ ದಾವಲ ಸಾಬ್ ಪಿಂಜಾರ್, ಪ್ರೊ ಪಿ ಬಿರಾದಾರ, ಪ್ರೊ ಸವಿತಾ ಪಾಟೀಲ್, ಪ್ರೊ ನಿಲೋಫರ್…

Read More