ಇಂಡಿ: ವಿದ್ಯಾರ್ಥಿಗಳು ವಿಜ್ಞಾನದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿ, ಮೂಲ ವಿಜ್ಞಾನಕ್ಕೆ ಆಧ್ಯತೆ ನೀಡಬೇಕು. ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸುವುದರಿಂದ ವೈಜ್ಞಾನಿಕ ಹಾಗೂ ಸಂಶೋಧನ ಮನೋಭಾವ ಬೆಳೆಯಲಿದೆ ಎಂದು ವಿಜ್ಞಾನ ಶಿಕ್ಷಕಿ ನಂದಾ ಎಸ್.ಚವ್ಹಾಣ ಹೇಳಿದರು.
ಅವರು ತಾಲೂಕಿನ ಮಿರಗಿ ಗ್ರಾಮದ ಶ್ರೀ ಯಲ್ಲಾಲಿಂಗೇಶ್ವರ ಪ್ರೌಢ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನವು ಜ್ಞಾನದ ವಿಸ್ತಾರವನ್ನು ಹೆಚ್ಚಿಸುತ್ತದೆ. ನಮ್ಮಲ್ಲಿರುವ ಅಂಧಕಾರವನ್ನು ತೊಲಿಸುತ್ತದೆ. ಹೀಗಾಗಿ ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲತೆಯನ್ನು ರೂಢಿಸಿಕೊಂಡು ಜೀವನದಲ್ಲಿ ಯಶಸ್ವಿಯಾಗಬೇಕು ಎಂದು ಹೇಳಿದರು.
ವಿಜ್ಞಾನಿಗಳು ಸತತ ಪರಿಶ್ರಮ ತಾಳ್ಮೆಗಳಿಂದ ಸಂಶೋಧನಗಳನ್ನು ಕೈಗೊಂಡು ಸಮಾಜಕ್ಕೆ ಉಪಯುಕ್ತ ಸೇವೆಗಳನ್ನು ಸಲ್ಲಿಸಿದ್ದಾರೆ. ವಿದ್ಯಾರ್ಥಿಗಳು ವಿಜ್ಞಾನಿಗಳ ಜೀವನಶೈಲಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಸರ್ ಸಿವಿ ರಾಮನ್ ಅವರ ಸಾಧನೆಗಳನ್ನು ಮಾತ್ರವಲ್ಲದೆ ಇತರ ವಿಜ್ಞಾನಿಗಳನ್ನೂ ಗೌರವಿಸುವ ದೃಷ್ಟಿಯಿಂದ, ವಿಜ್ಞಾನ ಕ್ಷೇತ್ರದಲ್ಲಿ ಅವರ ಸಾಧನೆಗಳನ್ನು ಮೆಲಕು ಹಾಕಲು ವಿಜ್ಞಾನ ದಿನವನ್ನು ಶಾಲೆ, ಕಾಲೇಜುಗಳು, ವಿಶ್ವವಿದ್ಯಾಲಯಗಳ ಇತರೆ ಸಂಸ್ಥೆಗಳು ಫೆ.೨೮ ರಂದು ಆಚರಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಸಿದ್ದಪ್ಪ ಖೇಡ ಮಾತನಾಡಿದರು.
ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಜೆ.ಎಸ್.ದೇವರಮನಿ, ಆರ್.ಎಂ. ನಾದ, ಬಿ.ಎಸ್. ವಾಲೀಕಾರ, ಅಶ್ವಿನಿ ನಡುವಿನಕೇರಿ, ಸೇರಿದಂತೆ ಪ್ರೌಢ ಶಾಲೆಯ ಶಿಕ್ಷಕರಾದ ವೈ.ಜಿ. ಬಿರಾದಾರ, ಜೆ.ಸಿ. ಗಬಸಾವಳಗಿ, ಬಿ.ಎಸ್. ಕುಲಕರ್ಣಿ, ಹಾಗೂ ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

