Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಾ ಡಿ.ಎನ್.ಧರಿಗೆ ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ
(ರಾಜ್ಯ ) ಜಿಲ್ಲೆ

ಡಾ ಡಿ.ಎನ್.ಧರಿಗೆ ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರ: ನಗರದ ಡಾ ಡಿ.ಎನ್. ಧರಿ ಇವರಿಗೆ ಭಾರತ ಯುವ ವೇದಿಕೆ ಸಂಸ್ಥೆಯಿಂದ ವೈದ್ಯಕೀಯ ಸೇವೆಗಾಗಿ ಪ್ರಸಕ್ತ ಸಾಲಿಗೆ “ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ” ನೀಡಿ ಗೌರವಿಸಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುನೀಲ್ ಜೈನಾಪೂರ ತಿಳಿಸಿದ್ದಾರೆ.
ಮೂಲತಃ ಬಸವ ನಾಡಿನ ಎಂಭತನಾಳ ಗ್ರಾಮದ ರೈತಾಪಿ ಕುಟುಂಬದ ಡಾ.ಧರಿ ಅವರು 1994 ರಿಂದ ಇಲ್ಲಿಯವರೆಗೆ 30 ವರ್ಷಗಳ ಕಾಲ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವರು ವೃತ್ತಿ ಜೀವನ ಆರಂಭಿಸಿ 25 ವರ್ಷಗಳಿಂದ ವಿಜಯಪುರ ಮಹಾನಗರದ ಆದರ್ಶ ನಗರ ಬಡಾವಣೆಯಲ್ಲಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಅವರ ದವಾಖಾನೆಯ ಸರಳತೆ ಸೌಜನ್ಯತೆ ಅಂಗವಿಕಲರಿಗೆ ಅಂದರಿಗೆ ಅನಾಥರಿಗೆ ಉಚಿತವಾಗಿ ಸೇವೆ ಮಾಡುತ್ತಿರುವುದು ಅವರ ಗುರುಗಳು ಅವರಿಗೆ ನೀಡಿದ ಮಾರ್ಗದರ್ಶನ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳ ವಿಜಯಪುರದ ಗಾನ ಬನದ ಸಂಗೀತ ಶಾಲೆಯ ಎಲ್ಲ ಮಕ್ಕಳಿಗೆ ಇಂದಿನವರೆಗೂ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧ ಉಪಚಾರ ಮಾಡುತ್ತಿದ್ದಾರೆ. ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ಪರಮ ಭಕ್ತರಾದ ಇವರು ಅಪ್ಪಗಳ ಪ್ರೇರಣೆಯಿಂದ ಆಶ್ರಮದ ಸಮಸ್ತ ವಟುಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಾ ಸಂಸ್ಕಾರ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಗ್ರಾಮೀಣ ಭಾಗದ ಜಾತ್ರಾ ಉತ್ಸವಗಳಲ್ಲಿ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಆರೋಗ್ಯ ಜಾಗೃತಿ ಮೂಡಿಸಿದ್ದಾರೆ. ವೈದ್ಯಕವಿ ಸಾಹಿತಿ ನಾಟಕಗಾರರು ನಟರಾಗಿ ಓರ್ವ ಕ್ರೀಡಾಪಟುವಾಗಿ ವಿಜಯಪುರದ ಸೈಕಲಿಸ್ಟ್ ವಸತಿ ಶಾಲೆಯ ಕ್ರೀಡಾಪಟುಗಳಿಗೆ ಉಚಿತ ವೈದ್ಯಕೀಯ ಸೇವೆ ಜೊತೆಜೊತೆಗೆ ಆಹಾರ ಮತ್ತು ಆರೋಗ್ಯದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರೈತರ ಶರೀರದ ಕಾಳಜಿಯಿಂದ ಆರೋಗ್ಯ ತಪಾಸಣಾ ಶಿಬಿರಗಳನ್ನು ಪ್ರತಿ ವರ್ಷಕ್ಕೆ ಕನಿಷ್ಠ 10 ಶಿಬಿರಗಳನ್ನು ಹಮ್ಮಿಕೊಂಡು ಮುಗ್ಧ ರೈತರ ಆರೋಗ್ಯದ ಬದುಕು ಕಟ್ಟಿಕೊಡುತ್ತಿದ್ದಾರೆ. ಅಲ್ಪಸಂಖ್ಯಾತ ಹಿಂದುಳಿದ ವರ್ಗದ ಶಾಲೆಗಳಲ್ಲಿ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಮತ್ತು ಆರೋಗ್ಯದ ಬಗ್ಗೆ ತಿಳುವಳಿಕೆ ನೀಡುವ ಉಪನ್ಯಾಸಮಾಲಿಕೆಗಳನ್ನು ಯಶಸ್ವಿಯಾಗಿ ಸಂಘಟಿಸುತ್ತಾ ಪಠ್ಯ ಸಲಕರಣೆಗಳನ್ನು ಉಚಿತವಾಗಿ ನೀಡುತ್ತಿದ್ದಾರೆ .ಅನೇಕ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಸಯೋಗದೊಂದಿಗೆ ರಕ್ತದಾನ ಶಿಬಿರ ನೇತೃದಾನ ಶಿಬಿರ ಅಂಗಾಂಗ ದಾನ ಶಿಬಿರಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಂಡು ಅನಾರೋಗ ಪೀಡಿತರಿಗೆ ಅನುಕೂಲವಾಗಲು ಶಮಿಸುತ್ತಿದ್ದಾರೆ. “ಹಸಿರೇ ಉಸಿರು” ಎನ್ನುವಂತೆ ಉತ್ತರ ಕರ್ನಾಟಕದ ಬಿಸಿಲಿನಾಡಿನಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವ ಔಷಧಿ ಗಿಡಮರಗಳನ್ನು ದೇವಾಲಯದ ಪ್ರಂಗಣದಲ್ಲಿ ಶಾಲಾ ಆವರಣದಲ್ಲಿ ನಗರದ ಹಾಗು ಹಳ್ಳಿಗಳ ಖಾಲಿ ಜಾಗಗಳಲ್ಲಿ ಸಾವಿರಾರು ಮರಗಳನ್ನು ನೆಟ್ಟು ಪ್ರಕೃತಿಯ ಸಿರಿಯನ್ನು ಹೆಚ್ಚಿಸಲು ಸಹಕರಿಸಿದ್ದಾರೆ. ರಾಷ್ಟ್ರೀಯ ಕುಷ್ಟ ರೋಗ ನಿವಾರಣಾ ಕೇಂದ್ರ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಯೋ ವೃದ್ಧರಿಗೆ ಮಾರಕ ರೋಗ ಪೀಡಿತರಿಗೆ ಚಿಕಿತ್ಸೆಗೆ ಸಹಕಾರಿಯಾಗಿ ಸೇವೆ ಮಾಡುತ್ತಿದ್ದಾರೆ. ರಾಷ್ಟ್ರೀಯ ಸೇವಾ ಯೋಜನೆಯ ಸೇವಾ ದಾಸರಾಗಿ ಅನೇಕ ಶಿಕ್ಷಣ ಸಂಸ್ಥೆಗಳಲ್ಲಿ, ಸ್ವಸಹಾಯ ತಂಡಗಳೊಂದಿಗೆ ನಿರಾಶ್ರಿತರಿಗೆ ಆಶ್ರಯದಾತನಾಗಿ ಗ್ರಾಮೀಣ ಜನರ ಆರೋಗ್ಯ ಸುಧಾರಣೆಗಾಗಿ ಪ್ರಾತ್ಯಕ್ಷಿಕೆ ಕಿರು ನಾಟಕಗಳನ್ನು ರಂಗಗೀತೆಗಳನ್ನು ಸ್ವತಹ ತಾವೇ ರಚಿಸಿ ನಿರ್ದೇಶಿಸಿ ನಟಿಸಿ ಸಮಾಜದ ಸ್ವಾಸ್ಥ ಸಂವರ್ಧನೆಗೆ ಸಾಕ್ಷಿಯಾಗಿದ್ದಾರೆ. ಕೊರೋನ ಎಂಬ ಭಯಂಕರ ಮಹಾಮಾರಿ ಸಮಯದಲ್ಲಿ ಸ್ವತಹ ಕರೋನ ಪೀಡಿತರಾದರೂ ತಮ್ಮ ಆರೋಗ್ಯದ ಬಗ್ಗೆ ಯೋಚಿಸದೆ ತಮ್ಮನ್ನೇ ನಂಬಿದ ಎಲ್ಲ ರೋಗಿಗಳಿಗೆ ಆಯುರ್ವೇದದ ಭಾಷ್ಪ ಶ್ವೇದ ಆಹಾರ ಪದ್ಧತಿ ಮನೆಯಲ್ಲಿಯೇ ಯೋಗ ಪ್ರಾಣಯಾಮ ಮಾಡುವ ವಿಧಿ ವಿಧಾನಗಳನ್ನು ಎಲ್ಲರಿಗೂ ತಿಳಿಸಿಕೊಟ್ಟು ಮನೋ ಧೈರ್ಯ ಹೆಚ್ಚಿಸಿ ಕೊರೊನ ಗೆಲ್ಲೋಣ ಎಂಬ ಕವಿತೆ ರಚಿಸಿ ಮನೋಸ್ಥೈರ್ಯ ತುಂಬಿ ಕೋರೊನ ರೋಗದಿಂದ ಪಾರು ಮಾಡಿದ ಕರುಣಾಳು. ಒಟ್ಟಿನಲ್ಲಿ ಸಶಕ್ತ ಭಾರತ ಆರೋಗ್ಯ ಭಾರತ ನಿರ್ಮಿಸುವಲ್ಲಿ ಸನಾತನ ಸಂಸ್ಕೃತಿಯ ಆಯುರ್ವೇದ ವೈದ್ಯನಾಗಿ ಯಾವುದೇ ಅಡ್ಡ ಪರಿಣಾಮಗಳಿಲದ ಆಯುರ್ವೇದ ಔಷಧಗಳನ್ನು ನೀಡಿ ಉಪಚರಿಸುತ್ತಾ ಆರೋಗ್ಯದ ರಕ್ಷಕರಾಗಿದ್ದಾರೆ. ಹೀಗೆ ನಿರಂತರ ವಿವಿಧ ಆಯಾಮಗಳಲ್ಲಿ 30 ವಸಂತಗಳ ಇವರ ವೈದ್ಯಕೀಯ ಸೇವೆ ಜನಸಾಮಾನ್ಯರ ಸಂಜೀವಿನಿ ಯಾಗಿದೆ.
ಇಂತಹ ಸರಳ ಸಜ್ಜನಿಕೆಯ ಅಪರೂಪದ ವೈದ್ಯರನ್ನು “ವೈದ್ಯೋ ನಾರಾಯಣ ಹರಿ “ಎಂದು ಪರಿಗಣಿಸಿ ಭಾರತ ಯುವ ವೇದಿಕೆಯ ಸಂಸ್ಥೆಯಿಂದ ಪ್ರಸಕ್ತ ಸಾಲಿಗೆ” ಜಿಲ್ಲಾ ಸದ್ಭೂಷಣ ರತ್ನ ಪ್ರಶಸ್ತಿ “ವೈದ್ಯಕೀಯ ಸೇವೆಗಾಗಿ ನೀಡಿ ಗೌರವಿಸುತ್ತಿದ್ದೇವೆ. ಇದು ನಮ್ಮ ಹೆಮ್ಮೆ ನಮ್ಮ ಗರಿಮೆ.
ನಿಸ್ವಾರ್ಥ ಸೇವೆಗೆಯುತ್ತಿರುವ ಸಾಧಕರಿಗೆ ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸೇವೆ ಮಾಡಲು ಭಗವಂತ ಶಕ್ತಿ ತುಂಬಲಿ ಎಂದು ಭಾರತ ಯುವ ವೇದಿಕೆ ಚಾರಿಟೇಬಲ್ ಟ್ರಸ್ಟ್ ಫೌಂಡೇಶನ್ ಅಧ್ಯಕ್ಷ ಸುನೀಲ್ ಜೈನಾಪುರ ಹಾರೈಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ

ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ

ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ
    In (ರಾಜ್ಯ ) ಜಿಲ್ಲೆ
  • ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಪ್ರವಾಸಗಳು :ಹಿರೇಮಠ
    In (ರಾಜ್ಯ ) ಜಿಲ್ಲೆ
  • ಸಾತಿಹಾಳ-ರಬಿನಾಳ ಸಂಪರ್ಕ ರಸ್ತೆ ಸುಧಾರಣೆಗೆ ಗ್ರಾಮಸ್ಥರಿಂದ ಮನವಿ
    In (ರಾಜ್ಯ ) ಜಿಲ್ಲೆ
  • ಹಿಂದುತ್ವದ ಮೂಲಕ ದೇಶ, ಸಂವಿಧಾನವನ್ನು ಗೌರವಿಸೋಣ
    In (ರಾಜ್ಯ ) ಜಿಲ್ಲೆ
  • ಶಾಸಕ ಮನಗೂಳಿ ಯಿಂದಅಹವಾಲು ಸ್ವೀಕಾರ
    In (ರಾಜ್ಯ ) ಜಿಲ್ಲೆ
  • ಇಂದು ವ್ಯಸನಮುಕ್ತ ಶಿಬಿರದ ಸಮಾರೋಪ :ಅಲ್ಲಾಪೂರ
    In (ರಾಜ್ಯ ) ಜಿಲ್ಲೆ
  • ಸಿಂದಗಿ: ಇಂದು ವಿದ್ಯುತ್ ವ್ಯತ್ಯೆಯ
    In (ರಾಜ್ಯ ) ಜಿಲ್ಲೆ
  • ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಈ ಜಗವೆಲ್ಲ..
    In ವಿಶೇಷ ಲೇಖನ
  • ಕುಡಿವ ನೀರಿನ ಕಾಮಗಾರಿಗಳನ್ನು ತೀವ್ರಗತಿಯಲ್ಲಿ ಪೂರ್ಣಗೊಳಿಸಿ
    In (ರಾಜ್ಯ ) ಜಿಲ್ಲೆ
  • ಶರಣ ಭೋಗಣ್ಣನವರ ಕುರಿತು ಸಂಶೋಧನೆ ಅಗತ್ಯ :ಗೋಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.