ಇಂಡಿ: ಕೃಷಿ,ತೋಟಗಾರಿಕೆ, ಉದ್ದಿಮೆ,ಕೈಗಾರಿಕೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ವಿಜ್ಞಾನ ಮುಂದುವರೆದಿದ್ದು ದೇಶ ಪ್ರಗತಿ ಸಾಧಿಸುತ್ತಿದೆ ಎಂದು ಹತ್ತಳ್ಳಿಯ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಿ.ಎಸ್.ಕಾಂಬಳೆ ಹೇಳಿದರು.
ಪಟ್ಟಣದ ಗುರುಬಸವ ಶಿಕ್ಷಣ ಸಂಸ್ಥೆಯಿಂದ ಆಯೋಜಿಸಿದ ವಿಜ್ಞಾನ ಪ್ರದರ್ಶನ,ಇಂಡಿ ತಾಲೂಕ ಬಾಲ ವಿಜ್ಞಾನ ಘಟಕ ಸಮಿತಿ ಮತ್ತು ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ರಮೇಶ ನಾಯಕ ಮಾತನಾಡಿ, ಇಂದು ಭಾರತದ ಇಸ್ರೋ ಸಾಧನೆ ಜಗತ್ತು ಮೆಚ್ಚುತ್ತಿದೆ. ಎಲ್ಲ ಕ್ಷೇತ್ರಗಳಲ್ಲಿ ಭಾರತೀಯ ವಿಜ್ಞಾನಿಗಳು ಸಾಧನೆ ಮಾಡುತ್ತಿದ್ದು ಭಾರತ ವಿಜ್ಞಾನ ಪ್ರಗತಿಯಿಂದ ಶಕ್ತಿಶಾಲಿಯಾಗಿ ಹೊರಹೊಮ್ಮುತ್ತಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿ ಎ.ಎಸ್.ಪಾಟೀಲ, ಪ್ರಾಚಾರ್ಯ ಎಸ್.ಆರ್.ರಾಠೋಡ, ನಿವೃತ್ತ ಪ್ರಾಚಾರ್ಯ ಉಮೇಶ ಕೋಳೆಕರ, ಸತೀಶ ವಾಲಿಕಾರ, ಅಶೋಕ ನಾಯಿಕೊಡಿ, ಸಂಜೀವಕುಮಾರ, ಯಾಸ್ಕಿನ, ಎಸ್.ಎಂ.ಬಿರಾದಾರ, ವೇದಾ ತುಪ್ಪದ, ಜೆ.ಪಿ.ಪಾಟೀಲ ಮಾತನಾಡಿದರು.
ವಿದ್ಯಾರ್ಥಿಗಳು ಇಸ್ರೋ ಸಾಧನೆ, ಚಂದ್ರಯಾನ, ಸೋಲಾರ ವಿದ್ಯುತ್ ಸೇರಿದಂತೆ ಹಲವಾರು ವಿಜ್ಞಾನ ಪ್ರದರ್ಶನ ಮಾಡಿದರು.
ಇದೇ ವೇಳೆ ಜಿ.ಎಸ್.ಕಾಂಬಳೆಯವರು ಪವಾಡ ಬಯಲು ರಹಸ್ಯ ಕಾರ್ಯಕ್ರಮ ನಡೆಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

