ವಿಜಯಪುರ: ಬಿಜಾಪುರ ಲಿಂಗಾಯತ ಡೆವಲೆಪಮೆಂಟ್ ಸೌಹಾರ್ದ ಸಹಕಾರಿ ಸಂಘ ನಿ. ಗ್ರಾಹಕರ ವಿಶ್ವಾಸ ಗಳಿಸಿ, ಇದೀಗ ಇಂಡಿ ಮತ್ತು ತಾಳಿಕೋಟೆಗಳಲ್ಲಿ ದಿ.4 ಸೋಮವಾರರಂದು ನೂತನ ಶಾಖೆಗಳು ಆರಂಭವಾಗಲಿವೆ ಎಂದು ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಸುನೀಗೌಡ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಬಿ.ಎಲ್.ಡಿ ಸೌಹಾರ್ದವು ಕಳೆದ ಒಂದುವರೆ ವರ್ಷದಲ್ಲಿ ರೂ. 225 ಕೋಟಿಗೂ ಅಧಿಕ ವಹಿವಾಟು ನಡೆಸಿದೆ. ಆಕರ್ಷಕ ಬಡ್ಡಿ ದರಗಳೊಂದಿಗೆ ರೂ. 100 ಕೋಟಿಗೂ ಅಧಿಕ ಸಾಲಗಳನ್ನು ನೀಡಲಾಗಿದೆ. ಹಿರಿಯ ನಾಗರಿಕರಿಗೆ, ಮಾಜಿ ಸೈನಿಕರಿಗೆ, ಅಂಗವಿಕಲರಿಗೆ ಹಾಗೂ ವಿಧವೆಯರಿಗೆ 0.5% ಹೆಚ್ಚಿನ ಬಡ್ಡಿದರ ನೀಡಲಾಗುತ್ತಿದೆ. ಅಲ್ಲದೇ, ವಿಶೇಷವಾಗಿ ಹಿರಿಯ ನಾಗರಿಕರಿಗೆ ಮನೆ ಬಾಗಿಲಿಗೆ ಸೇವೆ ಒದಗಿಸುವ ಯೋಜನೆ ರೂಪಿಸಲಾಗಿದೆ ಮತ್ತು ರಾಷ್ಟ್ರೀಕೃತ ಸೇವೆಗಳಾದ ಆರ್.ಟಿ.ಜಿ.ಎಸ್ / ಎನ್.ಇ.ಎಫ್.ಟಿ ಸೌಲಭ್ಯಗಳನ್ನು ಆರಂಭಿಸಲಾಗಿದೆ ಎಂದು ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.
ಪಾಟೀಲ ಹೊಂಡಾ ಶೋರೂಂ ಕಟ್ಟಡ, ವಿಜಯಪುರ ರಸ್ತೆ, ಇಂಡಿಯಲ್ಲಿ ಬೆ.10ಗಂ. ಆರಂಭವಾಗಲಿರುವ ಶಾಖೆಯಲ್ಲಿ ಬಂಥನಾಳ ಸಂಸ್ಥಾನ ಮಠದ ಮ.ನಿ.ಪ್ರ ಡಾ.ವೃಷಭಲಿಂಗೇಶ್ವರ ಮಹಾಶಿವಯೋಗಿಗಳು ಸಾನಿಧ್ಯ ವಹಿಸಲಿದ್ದು, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟಿಸಲಿದ್ದಾರೆ.
ನಂತರ ಸಂ. 5ಗಂ. ದೊಡಮನಿ ಕಾಂಪ್ಲೆಕ್ಸ್ ಮೊದಲನೇ ಮಹಡಿ, ಬಸವೇಶ್ವರ ವೃತ್ತ, ಹುಣಸಗಿ ರಸ್ತೆ ತಾಳಿಕೋಟೆಯಲ್ಲಿ ಆರಂಭವಾಗಲಿರುವ ಶಾಖೆಯಲ್ಲಿ ಖಾಸ್ಗತೇಶ್ವರ ಮಠದ ಪ.ಪೂ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಲಿದ್ದು, ಮುದ್ದೇಬಿಹಾಳ ಶಾಸಕ, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಉದ್ಘಾಟಿಸಲಿದ್ದಾರೆ ಎಂದು ಸುನೀಲಗೌಡ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಮಾ.೪ರಂದು ಇಂಡಿ-ತಾಳಿಕೋಟೆ ಯಲ್ಲಿ ಬಿಎಲ್ಡಿ ಸೌಹಾರ್ದ ಶಾಖೆಗಳ ಆರಂಭ
Related Posts
Add A Comment

