ಆಲಮೇಲದ ವಿಶ್ವೇಶ್ವರ ಪ್ರಾಥಮಿಕ ಶಾಲೆಯ ಸ್ನೇಹ ಸಮ್ಮೇಳನ & ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ
ಆಲಮೇಲ: ಪಟ್ಟಣದ ಶ್ರೀ ವಿಶ್ವೇಶ್ವರ ಬಾಲಭಾರತಿ ಪೂರ್ವ ಪ್ರಾಥಮಿಕ ಹಾಗೂ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ 34ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಡಿಜಿಟಲ್ ಬೋರ್ಡಗಳ ಲೋಕಾರ್ಪಣೆ ಸಮಾರಂಭ ವಿಜ್ರಂಭಣೆಯಿಂದ ಜರುಗಿತು.
ಸಮಾರಂಭವನ್ನು ಝೀ ಕನ್ನಡ ಸರಿಗಮಪ ಲಿಟಲ್ ಚಾಂಪ್ಸ ಸೀಜನ್ ೧೯ರ ಫೈನಲಿಸ್ಟ ಕು.ರೇವಣಸಿದ್ದ ಫುಲಾರಿ ಉದ್ಘಾಟಿಸಿದರು .
ಕಾರ್ಯಕ್ರಮವನ್ನು ದಾನಯ್ಯ ಕವಟಗಿಮಠ ೬೫ ಸೆಟ್, ನೆಟ್,ಟಿ.ಇ.ಟಿ ,ಪರೀಕ್ಷೆಗಳನ್ನು ಉತ್ತೀರ್ಣ ಮಾಡಿ ಇಂಗ್ಲೆಂಡ್ ಹಾಗೂ ಭಾರತ ದೇಶಗಳ ವಿಶ್ವದಾಖಲೆ ಮಾಡಿರುವ ಅಕ್ಕಲಕೋಟ ನ ಕೆ.ಎಲ್.ಇ ಸೊಸೈಟಿನ ಪ್ರಾಧ್ಯಾಪಕರು ಜ್ಯೋತಿ ಬೆಳಗಿಸಿದರು.
ಬಳಿಕ ಮಾತನಾಡಿದ ಅವರು, ಇಂದಿನ ಪಾಲಕರು ಮಕ್ಕಳ ಮೇಲೆ ಒತ್ತಡ ಹೇರದೆ ಅವರ ಅಭಿರುಚಿಗೆ ತಕ್ಕಂತೆ ಅವರ ಇಷ್ಟವಾದ ಕಲಿಕೆ ಪ್ರೋತ್ಸಾಹ ನೀಡಬೇಕು. ಇಂತಹ ಗ್ರಾಮೀಣ ಮಟ್ಟದ ಬಡ ಮಕ್ಕಳಿಗೆ ಈ ಶಾಲಾ ಆಡಳಿತ ಮಂಡಳಿಯವರು ಅಂದಾಜು ೬ ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಡಿಜಿಟಲ್ ಬೋರ್ಡಗಳನ್ನು ಅಳವಡಿಸಿ ಈ ವರ್ಷ ಮಕ್ಕಳ ಕಲಿಕೆಗೆ ಆಧುನಿಕ ಕಲಿಕಾ ಕೌಶಲ್ಯ ಬೆಳೆಸಿರುವುದು ಶ್ಲಾಘನೀಯ ಕಾರ್ಯ. ಮಕ್ಕಳನ್ನು ಅಂಕಗಳ ಮೇಲೆ ಅಳಿಯದೆ ಅವರ ಸಾಮರ್ಥ್ಯದ ಮೇಲೆ ಅಳಿಯಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಝೀ ಕನ್ನಡ ಸರಿಗಮಪ ಗಾಯಕ ರೇವಣಸಿದ್ದ ಫುಲಾರಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವರ್ಷವಿಡೀ ಹಮ್ಮಿಕೊಂಡಿರುವ ಸ್ಪರ್ಧಾತ್ಮಕ ಪರೀಕ್ಷೆ ಗಳಲ್ಲಿ ಉತ್ತಮ ರ್ಯಾಂಕ್ ಪಡೆದಿರುವ ಮಕ್ಕಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಜಗದೇವ ಮಲ್ಲಿಬೊಮ್ಮಯ್ಯ ಮಹಾಸ್ವಾಮಿಗಳು ವಿರಕ್ತ ಮಠ ಆಲಮೇಲ, ಶ್ರೀಶೈಲಯ್ಯ ಸ್ವಾಮಿಗಳು ಅಳ್ಳೋಳಿ ಹಿರೇಮಠ ಆಲಮೇಲ, ಸಮ್ಮುಖವನ್ನು ಡಾ.ಸಂದೀಪ ಪಾಟೀಲ ವಹಿಸಿದ್ದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಎಸ್.ಆಯ್.ಜೋಗೂರ, ಮುಖ್ಯ ಅತಿಥಿಗಳಾಗಿ ಶರಣಪ್ಪ ಫುಲಾರಿ, ಶಿವಶರಣ ಗುಂದಗಿ, ಡಾ.ಪ್ರಭು ಕೆ.ಭೈರಜಿ, ಬಿ.ಆರ್.ಪಿ ಗಳಾದ ಎಸ್.ಎಮ್.ಪಾಟೀಲ, ಶಂಕರ ತಾರಾಪೂರ, ಬುಳ್ಳಪ್ಪ ಡಿ, ಶಿವಲಿಂಗ ಉಮ್ಮರಗಿ, ಅರವಿಂದ ಕುಲಕರ್ಣಿ, ಅಲೋಕ ಬಡದಾಳ, ರವಿ ಬಡದಾಳ, ಅವಧೂತ ಬಂಡಗರ, ನಬಿ ಜಮಾದಾರ, ಯಲ್ಲಾಲಿಂಗ ತಳವಾರ, ಶಿಕ್ಷಕರಾದ ಈರಣ್ಣ ಕಲಶೆಟ್ಟಿ, ಸುವರ್ಣ ಸಾರಂಗಮಠ, ಲಕ್ಷ್ಮೀಬಾಯಿ ಹಳೇಮನಿ, ಸೀತಾ ಆರೇಶಂಕರ, ವೀಣಾ ಗುಡಿಮಠ, ಜಗದೇವಿ ಇಟಗಿ, ಸರುಬಾಯಿ ಬಂಡಗರ, ಸುನೀತಾ ಗುಂಡದ, ಐಶ್ವರ್ಯ ಕೋಳಾರಿ, ಪುಂಡಲೀಕ ಸುರಗಿಹಳ್ಳಿ, ಯಲ್ಲಾಲಿಂಗ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ನಿರೂಪಿಸಿದರು, ಚಂದ್ರಕಾಂತ ದೇವರಮನಿ ವಂದಿಸಿದರು

