ವಿಜಯಪುರ: ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ಐ ಕ್ಯೂ ಎ ಸಿ ಹಾಗೂ ರೆಡ್ ಕ್ರಾಸ್ ಘಟಕ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ನವಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಸದರಿ ಶಿಬಿರವನ್ನು ಉದ್ಘಾಟಿಸಿದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಆರ್ ಎಸ್ ಕಲೂರಮಠ ಮಾತನಾಡಿ, ಇಂದಿನ ಒತ್ತಡ ಜೀವನದಲ್ಲಿ ಎಲ್ಲರೂ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಂಡು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಿನಜಾ ಕಾಗದಕೋಟಿ ಮಾತನಾಡಿ, ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯಂತೆ ಎಲ್ಲರೂ ಪೌಷ್ಟಿಕ ಆಹಾರವೇ ಸೇವಿಸಬೇಕು. ಶುಚಿತ್ವ ದೊಂದಿಗೆ ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳುವಂತೆ ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಚಿದಾನಂದ ಎಸ್ ಆನೂರ್,ಪ್ರೊ ರಮೇಶ್ ಬಳ್ಳೊಳ್ಳಿ,ಪ್ರೊ ಆಸಿಫ್ ರೋಜನ್ದಾರ್,ಡಾ. ಅಸಾದುಲ್ಲ, ಡಾ ಎಂ ಆರ್ ಕೆಂಭಾವಿ, ಡಾ ದಾವಲ ಸಾಬ್ ಪಿಂಜಾರ್, ಪ್ರೊ ಪಿ ಬಿರಾದಾರ, ಪ್ರೊ ಸವಿತಾ ಪಾಟೀಲ್, ಪ್ರೊ ನಿಲೋಫರ್ ಕಲಾದಾಗಿ, ಪ್ರೊ ಲಕ್ಷ್ಮಿ ಮೋರೆ, ಡಾ ಭಾರತಿ ಹೊಸಟ್ಟಿ, ಪ್ರೊ ಎಂ ಆರ್ ಜೋಶಿ, ಪ್ರೊ ರೇಶ್ಮಿ ರೊಟ್ಟಿ, ಪ್ರೊ ಮಂಜುನಾಥ್ ಗಾಣಗೇರ್, ಪ್ರೊ ರಶ್ಮಿ ಹೊನಕೇರಿ, ಪ್ರೋ ತನ್ವೀರ್ ಅಬ್ಬಾಸ್, ಶೃತಿ ಕಾದಮ್, ಶಿವಾನಂದ ಸಂಗೋಲಿ, ನವೀನ್ ಗೌಡ ಬಿರಾದಾರ್ ವೀರನಗೌಡ ಪಾಟೀಲ, ಸುಜಾತ ಬಿರಾದಾರ್, ಪ್ರೊ ನಾತುರಾಮ್ ಜಾದವ್, ಡಾ ಆನಂದ್ ಕುಲಕರ್ಣಿ, ಬೋರಮ್ಮ ಗಂಜಿಹಾಳ, ಶೋಭಾ ರುದ್ರಗೌಡ, ಪ್ರೊ ನೀಲಕಂಠ ಹಳ್ಳಿ, ಡಾ ರಾಘವೇಂದ್ರ, ಡಾ ರಾಜೇಶ್ವರಿ ಪುರಾಣಿ, ಪ್ರೊ ರಾಮಣ್ಣ ಕಳ್ಳಿ, ರಾಮಪ್ಪ ಕುಮಟಗಿ, ಡಾ ಶಕೀರಾ ಬಾನು ಕಿತ್ತೂರ್, ಡಾ ಕುದುಸ್ ಪಾಟೀಲ್ , ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ನಿಂಗನಗೌಡ ಬಿರಾದಾರ, ಆರೋಗ್ಯ ಕೇಂದ್ರದ ಸಿಬ್ಬಂದಿ ರಜಿಯಾ ಮನಿಯರ್, ಜಾಧವ್ ನದಾಫ್, ಸರೋಜಿನಿ ಗೋಲನಾಯಕ, ಗೀತಾ ಲಮಾಣಿ, ದ್ರಾಕ್ಷಾಯಿಣಿ ಹೊಸಮನಿ, ಹಾಗೂ ಕಾಲೇಜಿನ ಬೋಧಕ ಬೋಧಕರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರೊ ಪಿ ಬಿ ಬಿರಾದಾರ ಸ್ವಾಗತಿಸಿದರು. ಪ್ರೊ ಎಂ ಆರ್ ಜೋಶಿ ಪ್ರಾಸ್ತಾವಿಕ ಮಾತನಾಡಿದರು.
ಡಾ ಚಿದಾನಂದ ಆನೂರ್ ನಿರೋಪಿಸಿದರು ಹಾಗೂ ಪ್ರೊ ರಮೇಶ್ ಬಳ್ಳೊಳ್ಳಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

