Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಸೊಳ್ಳೆಗಳಿಂದ ಮಲೇರಿಯಾ ರೋಗ ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಿಸಿ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿಗಳಾದ ಅರ್ಚನಾ ಕುಲಕರ್ಣಿ ಹೇಳಿದರು.ಅವರು ಪಟ್ಟಣದ ಏಂಜೆಲ್ಸ್ ಆಂಗ್ಲ ಮಾಧ್ಯಮ ಹಾಗೂ ಅನುದಾನಿತ ಕ್ರೈಸ್ತ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂಡಿ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆಯ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.ಪರಿಸರ ಸ್ವಚ್ಛತೆ ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಸ್ವಚ್ಛತೆ ಇಲ್ಲದೇ ಇದ್ದರೆ ಸೊಳ್ಳೆಗಳ ಉತ್ಪತ್ತಿಯಿಂದ ಮಾರಣಾಂತಿಕ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಎಲ್ಲರೂ ಸ್ವಚ್ಚತೆಯ ಬಗ್ಗೆ ಗಮನಹರಿಸಿದಾಗ ಮಾತ್ರ ನಿಯಂತ್ರಣ ಸಾಧ್ಯವೆಂದು ತಿಳಿಸಿದರು.ಶಿಕ್ಷಣ ಸಂಯೋಜಕರಾದ ಮಹೇಶ ಡೇoಬ್ರೆ ಮಾತನಾಡಿದರು.ಆರ್ ಡಿ ಈ ಸಂಸ್ಥೆಯ ಅಧ್ಯಕ್ಷೆ ಡಿ ಶಿರೋಮಣಿ ಅಧ್ಯಕ್ಷತೆ ವಹಿಸಿದ್ದರು.ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಸ್ ಎಸ್ ಪತ್ತಾರ,ಏಂಜೆಲ್ಸ್ ಶಾಲೆಯ…
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,- ವಿವೇಕಾನಂದ. ಎಚ್.ಕೆ, ಬೆಂಗಳೂರು ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರ ಪ್ರೀತಿಯ ಒತ್ತಾಯಪೂರ್ವಕ ಆಹ್ವಾನದ ಮೇರೆಗೆ ಶ್ರೀಶೈಲದ ಸುಮಾರು 60 ಕಿಲೋಮೀಟರ್ ದೂರದ ಶಿವರಾತ್ರಿ ಹಬ್ಬದ ನಲ್ಲಮಲ್ಲ ಕಾಡಿನ ಪಾದಯಾತ್ರೆ ಒಪ್ಪಿಕೊಂಡು ಹೋಗಿದ್ದೆನು. ಬೆಂಗಳೂರಿನಿಂದ ಬೆಳಗ್ಗೆ ವಾಹನದಲ್ಲಿ ಹೊರಟು ಸಂಜೆ 7 ಗಂಟೆಗೆ ಆಂಧ್ರಪ್ರದೇಶದ ನಲ್ಲ ಮಲ್ಲ ಅರಣ್ಯದ ಹೆಬ್ಬಾಗಿಲು ಆತ್ಮಕೂರು ತಲುಪಿದೆವು. ಅಲ್ಲಿಂದ ಪ್ರಾರಂಭವಾದ ಪಾದಯಾತ್ರೆ ಕೊನೆಯ ಹಂತ ತಲುಪಿ ಮುಖ್ಯ ದೇವಸ್ಥಾನ ತಲುಪುವವರಿಗೆ ಸುಮಾರು ಬೆಳಗ್ಗೆ 11 ಗಂಟೆ ಆಗಿತ್ತು. ದಟ್ಟ ಕಾಡಿನ ನಡುವೆ ಸಾಕಷ್ಟು ಬೆಟ್ಟಗುಡ್ಡಗಳ ಏರಿಳಿತಗಳ ನಡುವೆ ಮತ್ತೆ ಈ ಬೇಸಿಗೆಯಲ್ಲಿ ಮತ್ತು ಆ ರಾತ್ರಿಯ ಕಾಡಿನ ಸ್ವಲ್ಪ ತಂಪು ಹವೆಯ ವಾತಾವರಣದಲ್ಲಿ ಜೊತೆಗೆ ಬೆಳಗಿನ 40 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ನಿರಂತರ 16 ಗಂಟೆಗಳ ಈ ಯಾತ್ರೆ ಒಂದು ದೊಡ್ಡ ಸವಾಲಿನಿಂದ ಕೂಡಿರುತ್ತದೆ. ಅದು ದೇಹ ಮತ್ತು ಮನಸ್ಸಿನ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಸ್ವಲ್ಪ ಪೂರ್ವ ತಯಾರಿಯು ಬೇಕಾಗುತ್ತದೆ..…
ಸಿಂದಗಿ: ತನ್ನ ನಂಬಿ ಬಂದ ಭಕ್ತರ ಇಷ್ಟಾರ್ಥಗಳಿಗೆ ಎಂದಿಗೂ ನಿರಾಸೆ ಮಾಡದ ದಯಾಮಯಿ ಶಿವನ ಜಯಂತಿ ಮಹಾಶಿವರಾತ್ರಿ ಗೊಂದು ವಿಶೇಷ ಅರ್ಥವಿದೆ ಎಂದು ನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಂಚಾಲಕಿ ಪವಿತ್ರಾಜಿ ಹೇಳಿದರು.ನಗರದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡ 88ನೇ ತ್ರಿಮೂರ್ತಿ ಶಿವಜಯಂತಿ ಹಾಗೂ ಮಹಾಶಿವರಾತ್ರಿಯ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಶಿವನೆಂದರೆ ಸರಳತೆ, ಪ್ರಾಮಾಣಿಕತೆ ಮತ್ತು ನಿಷ್ಕಲ್ಮಶ ಮನಸ್ಸುಗಳ ಪ್ರತೀಕ. ಛಲಬಿಡದ ಸಾಧನೆಯ ದ್ಯೋತಕ. ಧ್ಯಾನಪ್ರಿಯನಾದ ಶಿವ ಭಕ್ತರಿಂದ ಬಯಸುವುದು ನಿಶ್ಕಲ್ಮಶ ಮತ್ತು ಪ್ರಾಮಾಣಿಕ ಭಕ್ತಿ ಮಾತ್ರ. ತೋರಿಕೆಯ ಮತ್ತು ಆಡಂಬರದ ಪೂಜೆಯನ್ನು ಬಯಸದ ಮಹಾದೇವನನ್ನು ಇಂದ್ರಿಯ ನಿಗ್ರಹ, ಧ್ಯಾನ, ಸಂಯಮ ಮತ್ತು ವಿಶ್ವಾಸ ಭರಿತರಾಗಿ ಶಿವರಾತ್ರಿ ಯಂದು ಧ್ಯಾನಿಸಿದರೆ ಆತ ಪ್ರಸನ್ನಗೊಳ್ಳುತ್ತಾನೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಮನಗೂಳಿ ಕಾಲೇಜಿನ ಪ್ರಾಚಾರ್ಯ ಡಾ ಬಿ ಜಿ ಪಾಟೀಲ, ಸರಳತೆ, ಪ್ರಾಮಾಣಿಕತೆಯಿಂದ ಶಿವರಾತ್ರಿಯಂದು ದೇಶಾದ್ಯಂತ ವಿಶೇಷ ಪೂಜೆಗಳು ನೆರವೇರುತ್ತವೆ. ಇಡೀ ಭಾರತದಾದ್ಯಂತ ಬಹುತೇಕ ಎಲ್ಲಾ ಭಾಗಗಳಲ್ಲೂ ಆಚರಿಸುವ…
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರದಾನ | ಚಿತ್ರಕಲಾ ಪ್ರದರ್ಶನ | ಕೃತಿ ಬಿಡುಗಡೆ ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ರಿ), ಬೆಂಗಳೂರು ಸಹಯೋಗದಲ್ಲಿ ಸಹಯೋಗದಲ್ಲಿ ಮಾ.೦೮ ರಂದು ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನ, ಹಾಗೂ ಡಾ. ಎಸ್.ಟಿ. ಮೇರವಾಡೆ ರಚಿಸಿದ “ಆಭರಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬೀಡಿಕರ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಸಂಪತ್ತಿಗಿಂತಲು ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ ಅತ್ಯಂತ ಪವಿತ್ರವಾದುದ್ದು.ಮಅದರಲ್ಲೂ ವಿಶೇಷವಾಗಿ ಛಾಯಾಗ್ರಹಣ ಕ್ಷೇತ್ರ ಅತ್ಯಂತ ಆಸಕ್ತಿದಾಯಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಪುರುಷರಷ್ಟೆ ಸರಿಸಮಾನರಾಗಿ ಮಹಿಳೆಯರು ಅಂತರರಾಷ್ಟ್ರಿಯವಾಗಿ ಗುರುತಿಸಿಕೊಳ್ಳುವಷ್ಟು ಮಟ್ಟಿಗೆ ಬೆಳೆಯುತಿದ್ದಾರೆ. ಅದರಲ್ಲಿ ಐತಿಹಾಸಿಕ ನಗರ ವಿಜಯಪುರದಲ್ಲಿ ಇಷ್ಟೊಂದು ಮಹಿಳೆಯರು ಛಾಯಾಗ್ರಹಣ ಕ್ಷೇತ್ರದಲ್ಲಿದ್ದು ಅವರನ್ನು ಜಿಲ್ಲಾ ಸಂಘದಿಂದ ಮಹಿಳಾ ದಿನಾಚರಣೆಯ…
ವಿಜಯಪುರ: ವಿಜಯಪುರದಲ್ಲಿ ಶನಿವಾರ ಮಾ.9 ರಂದು 11 ಗಂಟೆಗೆ ಪಂಚಗಂಗಾ ಒಣದ್ರಾಕ್ಷಿ ಸಂಸ್ಕರಣಘಟಕವನ್ನುಯೋಗಾಶ್ರಮದ ಶ್ರೀಬಸವಲಿಂಗಮಹಾಸ್ವಾಮೀಜಿ ಉದ್ಘಾಟಿಸಲಿದ್ದಾರೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಉದ್ಯಮಿ ಅಣ್ಣಾರಾಯ ಬಿರಾದಾರ ಹೇಳಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಜಿಲ್ಲೆಯಸಚಿವರುಗಳಾದ ಎಂ ಬಿ ಪಾಟೀಲ್ ಮತ್ತು ಶಿವಾನಂದ ಪಾಟೀಲ್, ಸಂಸದ ರಮೇಶ್ ಜಿಗಜಿಣಿಗಿ ಅಲ್ಲದೆ ಶಾಸಕರುಗಳಾದ ಬಸವರಾಜಪಾಟೀಲ್ ಯತ್ನಾಳ್, ಯಶವಂತರಾಯಗೌಡ ಪಾಟೀಲ್, ಅಪ್ಪಾಜಿ ಪಾಟೀಲ್, ವಿಠಲ ಕಟಕದೊಂಡ, ರಾಜುಗೌಡಪಾಟೀಲ್, ಅಶೋಕ್ ಮನಗೂಳಿ, ಮಾಜಿ ದೆಹಲಿ ಪ್ರತಿನಿಧಿ ಶಂಕರಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯ ಸುನಿಲಗೌಡಪಾಟೀಲ್, ದೆಹಲಿಯ ರಾಷ್ಟ್ರೀಯತೋಟಗಾರಿಕಾ ಬೋರ್ಡ್ ನಿರ್ದೇಶಕ ಭೀಮಸೇನ್ ಲೋಕರೆ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಪಶ್ಚಿಮ ಬಂಗಾಳದ ನಿವೃತ್ತ ಡಿಜಿಪಿ ಜಿಎಂಪಿ ರೆಡ್ಡಿ ಅವರುಗಳುಆಗಮಿಸಲಿದ್ದಾರೆ ಎಂದು ಹೇಳಿದರು.ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ಮತ್ತು ಅಥಣಿ ಪರಿಸರದ ಲಕ್ಷಾಂತರ ಎಕರೆಯಲ್ಲಿ ದ್ರಾಕ್ಷಿಬೆಳೆಯಲಾಗುತ್ತಿದ್ದುದೇಶದ ಒಣ ದ್ರಾಕ್ಷಿ ಮಾರುಕಟ್ಟೆಯ ಒಟ್ಟು 60% ಒಣದ್ರಾಕ್ಷಿ ಬೇಡಿಕೆಯನ್ನು ಈ ಎರಡು ಜಿಲ್ಲೆಗಳಿಂದ ಪೂರೈಸಲಾಗುತ್ತಿದೆ ಎನ್ನುವುದು ಹೆಮ್ಮೆಯ ವಿಷಯ. ಆದರೆ…
ವಿಜಯಪುರ: ಶ್ರೇಷ್ಠ, ಬಹುಮುಖ ವ್ಯಕ್ತಿತ್ವ ಹಾಗೂ ಪ್ರತಿಭಾ ಸಂಪನ್ನರಾದ ಶ್ರೀಮತಿ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದು ಅತ್ಯಂತ ಶ್ರೇಷ್ಠ ಹಾಗೂ ಸಂತಸದ ಸಂಗತಿ, ಈ ನಿರ್ಧಾರದ ಮೂಲಕ ಮಹಿಳಾ ದಿನಾಚರಣೆಗೆ ಮತ್ತಷ್ಟು ಮೆರಗು ಬಂದಿದೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಉಮೇಶ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಧಾಮೂರ್ತಿ ಸಮಾಜ ಸುಧಾರಕಿಯೂ ಹೌದು, ಕರುಣಾಮೂರ್ತಿಯೂ ಹೌದು. ಇನ್ಫೋಸಿಸ್ ಎಂಬ ಬೃಹತ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ, ಪ್ರಕೃತಿ ವಿಕೋಪ ಬಂದಾಗ ತಮ್ಮ ತಂಡದೊಂದಿಗೆ ನೆರವು, ಸಂತ್ರಸ್ತರಿಗೆ ಅಭಯ, ಕೋವಿಡ್ ಕಾಲಘಟ್ಟದಲ್ಲಿ ಮನುಕುಲದ ಸೇವೆ ಮಾಡಿದ್ದು ಜನರಿಗೆ ಮಾದರಿ.ಸಮಾಜ ಸೇವೆಯ ಜೊತೆಗೆ ಸಾಹಿತ್ಯಿಕವಾಗಿಯೂ ಅವರು ನೀಡಿದ ಕೊಡುಗೆ ಅನನ್ಯ, ಕಂಪ್ಯೂಟರ್ ಸಾಕ್ಷರತೆ ಸೇರಿದಂತೆ ಹಲವಾರು ರೀತಿಯ ಪುಸ್ತಕವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.ದೊಡ್ಡ ಉದ್ಯಮಿಯಾದರೂ ಸಹ ಅತ್ಯಂತ ಸರಳ ಜೀವನ ನಡೆಸುವ ಸುಧಾಮೂರ್ತಿ ಅವರ ಜೀವನ ಪ್ರತಿಯೊಬ್ಬರಿಗೂ…
ಬಿಎಲ್ಡಿಇ ವತಿಯಿಂದ ರೂ.1.51 ಕೋಟಿ ವೆಚ್ಚದಲ್ಲಿ ನವೀಕರಿಸಲಾದ 770 ಲಿಂಗಗಳ ದೇವಸ್ಥಾನ ಉದ್ಘಾಟನೆ ವಿಜಯಪುರ: ನಗರದ ಭಕ್ತಿಕೇಂದ್ರವಾದ 770 ಅಮರಗಣಂಗಳರ ಸ್ಮಾರಕ ಲಿಂಗ ದೇವಾಲಯ ನವೀಕರಣ ಮತ್ತು ಮಂದಿರದಲ್ಲಿರುವ ಎಲ್ಲ ಲಿಂಗಗಳನ್ನು ಪುನರುಜ್ಜೀವನ ಮಾಡುವ ಅವಕಾಶ ನಮ್ಮ ಬಿ.ಎಲ್.ಡಿಇ ಸಂಸ್ಥೆಗೆ ಒದಗಿ ಬಂದಿರುವುದು ಸುದೈವ. ಈ ಮೂಲಕ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಮಹನೀಯರಿಗೆ ಹಾಗೂ 12ನೇ ಶತಮಾನದ 770 ಶಿವಶರಣರಿಗೆ ನಾವು ಅಳಿಲು ಸೇವೆಯ ರೂಪದಲ್ಲಿ ಗೌರವ ಸಲ್ಲಿಸಿದ್ದೇವೆ ಎಂದು ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ವತಿಯಿಂದ ರೂ. 1.51 ಕೋಟಿ ವೆಚ್ಚದಲ್ಲಿ ನವೀಕರಿಸಲಾದ 770 ಲಿಂಗಗಳ ದೇವಸ್ಥಾನ ಹಾಗೂ ಪುನರುಜ್ಜೀವನ ಮಾಡಲಾದ ಲಿಂಗಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಿಂದ ರೂ. 1.51 ಕೋ. ವೆಚ್ಚದಲ್ಲಿ ನಗರದ 770 ಅಮರಗಳಂಗಳರ ಲಿಂಗದ ಗುಡಿ ನವೀಕರಣ ಮತ್ತು ಈ ಹಿಂದೆ ಶೆಲ್ಲಿಕೇರಿ ಶಿಲೆಗಳಿಂದ ತಯಾರಿಸಲಾಗಿದ್ದ ಎಲ್ಲ ಲಿಂಗಗಳನ್ನು ಈಗ ಕೃಷ್ಣ ಶಿಲೆಯಿಂದ…
Udayarashmi kannada daily newspaper
ಡಾ.ಪೂರ್ಣಿಮಾ ಧಾಮಣ್ಣವರ ಕನ್ನಡ ಉಪನ್ಯಾಸಕರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಡಾ. ಫ, ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಿಜಯಪುರ ಮಾರ್ಚ ೮ ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಯ ಶುಭಾಶಯಗಳನ್ನ ತಿಳಿಸುತ್ತಾ ಮಹಿಳಾಪರ ಚಿಂತನೆ ಕುರಿತು ಅವಳ ಪರವಾದ ನಿಲುವುಗಳ ಕುರಿತಾಗಿ ಹಾಗೂ ಅವಳ ಹಕ್ಕು ಬಾದ್ಯತೆಗಳ ಕುರಿತು ಅವಳೆಷ್ಟು ತಿಳಕೊಂಡಿದ್ದಾಳೆ. ಅವು ಸಂವಿಧಾನದಲ್ಲಿ ಉಲ್ಲೇಖಕೊಂಡಿರುವುದರ ಬಗ್ಗೆ ಮಹಿಳೆಯರಿಗೆ ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.೧೯೫೦ ಜನವರಿ ೨೬ರಂದು ಭಾರತ ದೇಶಕ್ಕೆ ಸಂವಿಧಾನ ಜಾರಿಗೆ ಬಂತು. ಅವತ್ತಿನಿಂದ ಮಹಿಳೆಯರ ಸ್ಥಿತಿಗತಿಗಳ ಕುರಿತು ಹೇಳುವುದಾದರೆ ಆಕೆಯ ಮೇಲೆ ದೌರ್ಜನ್ಯಗಳನ್ನು, ಶೋಷಣೆಗಳು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಹಿತದೃಷ್ಟಿಯಿಂದಲೂ ಸಂವಿಧಾನದ ಮೂಲಕ ಹಲವು ವಿಧಿಗಳ ಆಕೆಗಾಗಿಯೇ ಮೀಸಲಿಟ್ಟಿವೆ. ಹೀಗಾಗಿ ಸ್ತ್ರೀ ಪುರುಷರು ಸಮಾನರಾಗಿ ಬದುಕಲು ದಾರಿ ಸಹ ಮಾಡಿಕೊಟ್ಟಿದೆ.ಸ್ತ್ರೀ – ಪುರುಷರಷ್ಟೆ ಸಮಾನಳು. ಶಿಕ್ಷಣ ಪಡೆಯಲು, ವಿವಿಧ ಹುದ್ದೆಗಳ ಪಡೆಯಲು, ಸಂವಿಧಾನವು ಪ್ರಮುಖ ಪಾತ್ರವನ್ನು ವಹಿಸಿದೆ. ಇದರಿಂದ ನಮ್ಮ ದೇಶದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಜಗತ್ಪ್ರಸಿದ್ದರಾಗಲೂ…
ವಿಜಯಪುರ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿನ ನಯನ ರಂಗಮಂದಿರದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಪತ್ರಕರ್ತ, ಸಾಹಿತಿ ಕಲ್ಲಪ್ಪ ಶಿವಶರಣ ವಿರಚಿತ ‘ಕಲ್ಲು ಮನಸ್ಸು’ ಕಲ್ಲರಳಿ ಹೂಮಸು ಕೃತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಬಿಡುಗಡೆಗೊಳಿಸಿದರು.ಇದೇ ಸಂದರ್ಭದಲ್ಲಿ ‘ಕಲ್ಲು ಮನಸ್ಸು’ ಕಲ್ಲರಳಿ ಹೂಮಸು ಕೃತಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಶಿವರಾಜ ಎಸ್. ತಂಗಡಗಿ, ಹೆಸರಾಂತ ಸಾಹಿತಿ ಜೋಗಿ (ಗಿರೀಶ್‌ರಾವ್ ಹತ್ವಾರ್), ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಧರಣಿದೇವಿ ಅವರು ಮುಖ್ಯ ವೇದಿಕೆಯ ಮೇಲೆ ಪ್ರಶಸ್ತಿ ಫಲಕಗಳನ್ನು ಸಾಹಿತಿ, ಪತ್ರಕರ್ತ ಕಲ್ಲಪ್ಪ ಶಿವಶರಣ ಅವರಿಗೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಸೇರಿದಂತೆ ಅನೇಕರು ಇದ್ದರು.
