ವಿಜಯಪುರ: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿನ ನಯನ ರಂಗಮಂದಿರದಲ್ಲಿ ಕರ್ನಾಟಕ ಸರಕಾರ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ವಿಜಯಪುರ ಜಿಲ್ಲೆಯ ಪತ್ರಕರ್ತ, ಸಾಹಿತಿ ಕಲ್ಲಪ್ಪ ಶಿವಶರಣ ವಿರಚಿತ ‘ಕಲ್ಲು ಮನಸ್ಸು’ ಕಲ್ಲರಳಿ ಹೂಮಸು ಕೃತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ಎಸ್. ತಂಗಡಗಿ ಅವರು ಬಿಡುಗಡೆಗೊಳಿಸಿದರು.
ಇದೇ ಸಂದರ್ಭದಲ್ಲಿ ‘ಕಲ್ಲು ಮನಸ್ಸು’ ಕಲ್ಲರಳಿ ಹೂಮಸು ಕೃತಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸಚಿವ ಶಿವರಾಜ ಎಸ್. ತಂಗಡಗಿ, ಹೆಸರಾಂತ ಸಾಹಿತಿ ಜೋಗಿ (ಗಿರೀಶ್‌ರಾವ್ ಹತ್ವಾರ್), ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ. ಧರಣಿದೇವಿ ಅವರು ಮುಖ್ಯ ವೇದಿಕೆಯ ಮೇಲೆ ಪ್ರಶಸ್ತಿ ಫಲಕಗಳನ್ನು ಸಾಹಿತಿ, ಪತ್ರಕರ್ತ ಕಲ್ಲಪ್ಪ ಶಿವಶರಣ ಅವರಿಗೆ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
ಪತ್ರಕರ್ತ ಕಲ್ಲಪ್ಪ ಶಿವಶರಣರ ‘ಕಲ್ಲು ಮನಸ್ಸು’ ಕೃತಿ ಬಿಡುಗಡೆ
Related Posts
Add A Comment

