ವಿಜಯಪುರ: ಶ್ರೇಷ್ಠ, ಬಹುಮುಖ ವ್ಯಕ್ತಿತ್ವ ಹಾಗೂ ಪ್ರತಿಭಾ ಸಂಪನ್ನರಾದ ಶ್ರೀಮತಿ ಸುಧಾಮೂರ್ತಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮ ನಿರ್ದೇಶನ ಮಾಡಿರುವುದು ಅತ್ಯಂತ ಶ್ರೇಷ್ಠ ಹಾಗೂ ಸಂತಸದ ಸಂಗತಿ, ಈ ನಿರ್ಧಾರದ ಮೂಲಕ ಮಹಿಳಾ ದಿನಾಚರಣೆಗೆ ಮತ್ತಷ್ಟು ಮೆರಗು ಬಂದಿದೆ ಎಂದು ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಕಾರ್ಯದರ್ಶಿ ಉಮೇಶ ಕಾರಜೋಳ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸುಧಾಮೂರ್ತಿ ಸಮಾಜ ಸುಧಾರಕಿಯೂ ಹೌದು, ಕರುಣಾಮೂರ್ತಿಯೂ ಹೌದು. ಇನ್ಫೋಸಿಸ್ ಎಂಬ ಬೃಹತ್ ಪ್ರತಿಷ್ಠಾನದ ಮೂಲಕ ಸುಧಾಮೂರ್ತಿ ಅವರು ಸಲ್ಲಿಸುತ್ತಿರುವ ಸೇವೆ ಅನನ್ಯ, ಪ್ರಕೃತಿ ವಿಕೋಪ ಬಂದಾಗ ತಮ್ಮ ತಂಡದೊಂದಿಗೆ ನೆರವು, ಸಂತ್ರಸ್ತರಿಗೆ ಅಭಯ, ಕೋವಿಡ್ ಕಾಲಘಟ್ಟದಲ್ಲಿ ಮನುಕುಲದ ಸೇವೆ ಮಾಡಿದ್ದು ಜನರಿಗೆ ಮಾದರಿ.
ಸಮಾಜ ಸೇವೆಯ ಜೊತೆಗೆ ಸಾಹಿತ್ಯಿಕವಾಗಿಯೂ ಅವರು ನೀಡಿದ ಕೊಡುಗೆ ಅನನ್ಯ, ಕಂಪ್ಯೂಟರ್ ಸಾಕ್ಷರತೆ ಸೇರಿದಂತೆ ಹಲವಾರು ರೀತಿಯ ಪುಸ್ತಕವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.
ದೊಡ್ಡ ಉದ್ಯಮಿಯಾದರೂ ಸಹ ಅತ್ಯಂತ ಸರಳ ಜೀವನ ನಡೆಸುವ ಸುಧಾಮೂರ್ತಿ ಅವರ ಜೀವನ ಪ್ರತಿಯೊಬ್ಬರಿಗೂ ಸ್ಪೂರ್ತಿ.
ಸುಧಾಮೂರ್ತಿ ಅವಿಭಜಿತ ವಿಜಯಪುರ ಜಿಲ್ಲೆಯವರು ಎಂಬುದೇ ಹೆಮ್ಮೆ ಹಾಗೂ ಅಭಿಮಾನದ ಸಂಗತಿ, ನಮ್ಮ ನೆಲದ ಮಹಿಳೆ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವುದು ನಮಗೆಲ್ಲರಿಗೂ ಅಭಿಮಾನದ ಸಂಗತಿ, ಈಗ ಅವರ ಸಾಧನೆಗೆ ಮತ್ತೊಂದು ಗರಿ ಎಂಬಂತೆ ಸೇವೆಗೆ ಮತ್ತಷ್ಟು ಬಲ ತುಂಬಲು ಸಾಧ್ಯವಾಗಿಸುವ ವೇದಿಕೆಯಾಗಿ
ರಾಜ್ಯಸಭೆ ಸದಸ್ಯರಾಗಿ ನಾಮ ನಿರ್ದೇಶನ ಮಾಡಿರುವುದು ಸಂತೋಷ ತಂದಿದೆ ಎಂದು ಕಾರಜೋಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

