ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ | ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರದಾನ | ಚಿತ್ರಕಲಾ ಪ್ರದರ್ಶನ | ಕೃತಿ ಬಿಡುಗಡೆ
ವಿಜಯಪುರ: ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಮತ್ತು ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘ (ರಿ), ಬೆಂಗಳೂರು ಸಹಯೋಗದಲ್ಲಿ ಸಹಯೋಗದಲ್ಲಿ ಮಾ.೦೮ ರಂದು ನಗರದ ಸರಕಾರಿ ಆರ್ಟ ಗ್ಯಾಲರಿಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಚಿತ್ರಕಲಾ ಪ್ರದರ್ಶನ, ಹಾಗೂ ಡಾ. ಎಸ್.ಟಿ. ಮೇರವಾಡೆ ರಚಿಸಿದ “ಆಭರಣ” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉಪವಿಭಾಗಾಧಿಕಾರಿ ಶ್ವೇತಾ ಮೋಹನ ಬೀಡಿಕರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಸಂಪತ್ತಿಗಿಂತಲು ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರ ಅತ್ಯಂತ ಪವಿತ್ರವಾದುದ್ದು.ಮಅದರಲ್ಲೂ ವಿಶೇಷವಾಗಿ ಛಾಯಾಗ್ರಹಣ ಕ್ಷೇತ್ರ ಅತ್ಯಂತ ಆಸಕ್ತಿದಾಯಕ ಕ್ಷೇತ್ರ. ಈ ಕ್ಷೇತ್ರದಲ್ಲಿ ಪುರುಷರಷ್ಟೆ ಸರಿಸಮಾನರಾಗಿ ಮಹಿಳೆಯರು ಅಂತರರಾಷ್ಟ್ರಿಯವಾಗಿ ಗುರುತಿಸಿಕೊಳ್ಳುವಷ್ಟು ಮಟ್ಟಿಗೆ ಬೆಳೆಯುತಿದ್ದಾರೆ. ಅದರಲ್ಲಿ ಐತಿಹಾಸಿಕ ನಗರ ವಿಜಯಪುರದಲ್ಲಿ ಇಷ್ಟೊಂದು ಮಹಿಳೆಯರು ಛಾಯಾಗ್ರಹಣ ಕ್ಷೇತ್ರದಲ್ಲಿದ್ದು ಅವರನ್ನು ಜಿಲ್ಲಾ ಸಂಘದಿಂದ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಗುರುತಿಸಿ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿನೀಡಿ ಗೌರವಿಸಿದ್ದು ಅತ್ಯಂತ ಮಹತ್ವದ ಕೆಲಸವಾಗಿದೆ. ಇದರಿಂದ ಸಂಸ್ಥೆಯ ಗೌರವ ಹೆಚ್ಚಾಗಿದ್ದು ಸಾಮಾಜಿಕವಾಗಿ ಸಂಘ ಸಂಸ್ಥೆಗಳು ಈ ರೀತಿಯ ಜವಾಬ್ದಾರಿ ನಿರ್ವಹಿಸಿದ್ದು ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ ಶಶಿಕಲಾ ರಮೇಶ. ಮೈದರಗಿ, ಶಾರದಾ ಹಣಮಂತ. ನಂದವಾಡಗಿ, ಅಶ್ವಿನಿ ಮೋಹನ. ಉಪಾಧ್ಯೆ ಗೀತಾ ಕೃಷ್ಣಾ. ರಾಠೋಡ, ಚಂದ್ರಕಲಾ ಮಂಜುನಾಥ. ತುಕೋಳ, ಶ್ವೇತಾ ಪರಶುರಾಮ. ಅರಕೇರಿ, ಶೋಭಾ ಅನಿಲ್. ಹಿರೋಳ್ಳಿ ಇವರಿಗೆ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಕಲಾವಿದರಾದ ಡಾ. ಶಶಿಕಲಾ ಹೂಗಾರ, ದಾಕ್ಷಾಯಣಿ ಇಮನಾದ, ಗಿರಿಜಾ ಬಿರಾದಾರ ಇವರ ಕಲಾಕೃತಿಯನ್ನು ಪ್ರದರ್ಶಿಸಲಾಗಿ ಅದನ್ನು ಶ್ವೇತಾ ಮೋಹನ ಬೀಡಿಕರರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಕಲಾವಿದ ವಿದ್ಯಾಧರ ಸೋ. ಸಾಲಿಯವರು, ಚಿತ್ರಕಲಾ ಪ್ರದರ್ಶನದ ಕಲಾಕೃತಿಗಳ ಬಗ್ಗೆ ಮತ್ತು ಛಾಯಾಗ್ರಹಣದ ಬಗ್ಗೆ ಮಾತನಾಡುತ್ತ, ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬಂದು ಕೆಲಸ ಮಾಡುತಿದ್ದಾರೆ. ಛಾಯಾಗ್ರಹಣ ಕ್ಷೇತ್ರದಲ್ಲೂ ಮಹಿಳೆಯರು ತಮ್ಮದೆ ಆದ ರೀತಿಯಲ್ಲಿ ಬೆಳೆದಿದ್ದಾರೆ. ಈ ಸೇವೆಯನ್ನು ಗಮನಿಸಿ ವಿಜಯಪುರ ಜಿಲ್ಲಾ ಸಂಘದವರು ಅವರನ್ನು ಗೌರವಿಸಿದ್ದು ಅತ್ಯಂತ ಶ್ಲಾಘನೀಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎಸ್. ಟಿ. ಮೇರವಾಡೆಯವರು ತಮ್ಮ ಅಧ್ಯಕ್ಷೀಯ ಬಾಷಣದಲ್ಲಿ, ಮಹಿಳೆಯು ಇಂದು ಆಧುನಿಕವಾಗಿ ಯಾವುದೆ ಕ್ಷೇತ್ರದಲ್ಲಿ ಪುರುಷರಿಗಿಂತ ತಾನು ಕಡಿಮೆ ಇಲ್ಲದಂತೆ ತನ್ನ ಸಾಮರ್ಥ್ಯವನ್ನು ತೋರುತಿದ್ದಾರೆ. ಇವರಿಂದ ನಮ್ಮ ದೇಶ ಜಗತ್ತಿನ ಗಮನ ಸೆಳೆಯುವಂತಾಗಿದೆ ಎಂದರು.
ಎಲ್ಲ ಗಣ್ಯರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸಂಘದ ಅಧ್ಯಕ್ಷ ರಮೇಶ ಚವ್ಹಾಣ ಅವರು, ಸಂಘದ ಕಾರ್ಯಕ್ರಮ ಮತ್ತು ಇದೆ ಮೊದಲಬಾರಿಗೆ ಛಾಯಾಗ್ರಹಣ ಕ್ಷೇತ್ರದಲ್ಲಿರುವ ಮಹಿಳೆಯರನ್ನು ಗುರುತಿಸಿ ಜಿಲ್ಲಾ ಮಟ್ಟದ ಜಿಲ್ಲಾ ಛಾಯಾಸಾಧಕಿ ಪ್ರಶಸ್ತಿಯನ್ನು ನೀಡುತಿದ್ದು ಇದು ನನ್ನ ಸಂಸ್ಥಗೆ ಹೆಮ್ಮೆಯ ವಿಷಯವಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಡಾ. ಎಸ್.ಟಿ. ಮೇರವಾಡೆ ರಚಿಸಿದ “ಆಭರಣ” ಪುಸ್ತಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹೋಟೆಲ ಉದ್ಯಮಿ ನಾಗೇಶ ಶೆಟ್ಟಿ, ಪ್ರೊ. ಯು.ಎಸ್. ಪುಜೇರಿ, ಪ್ರೊ. ಈ.ಆರ್. ಅಂಬಲಿ ಮತ್ತು ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳಾದ ಪ್ರಶಾಂತ ಪಟ್ಟಣಶೆಟ್ಟಿ, ಸುರೇಶ ರಾಠೋಡ, ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕಾರ್ಜುನ ಪಾರ್ವತಿ, ಪವನಕುಮಾರ ಅಂಗಡಿ, ಸಂಜೀವ ಕುಂಬಾರ. ಜಂಗಲಿಬಾಷಾ ಮುಜಾವರ, ಮೌನೇಶ ಬಡೆಗೇರ, ಛಾಯಾಗ್ರಾಹಕರಾದ ಅನಂತ ಭೋಸಲೆ, ಪ್ರಮೋದ ಕಾಜಗಾರ, ಕಿಶೋರ ಖಂಡಾಗಳೆ, ಸುಗುರೇಶ ಗಲ್ಪಿ, ಮೋಹನಸಿಂಗ ರಜಪೂತ, ಸುನೀಲ ಬಿರಾದಾರ, ಗುರು ಪಲ್ಲೇದ, ನಾಗಯ್ಯಾ ಗಣಾಚಾರಿ, ಗೌಡಪ್ಪಗೌಡ ಬಿರಾದಾರ, ಚಂದ್ರಕಾಂತ ವಡ್ಡರ, ಶಶಿ ಕುಂಬಾರ, ಪಿಂಟು ಕರ್ವಾ ಝಾಕೀರ ಹುಸೇನ ಗುಂದಗಿ, ಶಿವಾನಂದ ಅಥಣಿ, ರೋಹಿತ ಬಾಳಿಗೇರಿ, ಮಹಾಂತೇಶ ದಿಂಡವಾರ, ಕಲಾವಿದರಾದ ಮಂಜುನಾಥ ಮಾನೆ, ಬಸವರಾಜ ಪಾಟೀಲ್, ಮಹಾದೇವ ಕೋರಿಶೆಟ್ಟಿ, ಹಣಮಂತ ನಂದವಾಡಗಿ, ರಮೇಶ ಮೈದರಗಿ, ಸಹಿತ ಜಿಲ್ಲೆಯ ಛಾಯಾಗ್ರಾಹಕರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಕಾರ್ಯಕ್ರಮವನ್ನು ಸ್ನೇಹಾ ಸತೀಶ ಕಲಾಲ ನಿರೂಪಿಸಿದರು. ಕಾರ್ಯದರ್ಶಿ ಸತೀಶ ವಂದಿಸಿದರು.

