ಡಾ.ಪೂರ್ಣಿಮಾ ಧಾಮಣ್ಣವರ ಕನ್ನಡ ಉಪನ್ಯಾಸಕರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಡಾ. ಫ, ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಿಜಯಪುರ

ಮಾರ್ಚ ೮ ಅಂತರಾಷ್ಟ್ರೀಯ ಮಹಿಳಾ ದಿನಚಾರಣೆಯ ಶುಭಾಶಯಗಳನ್ನ ತಿಳಿಸುತ್ತಾ ಮಹಿಳಾಪರ ಚಿಂತನೆ ಕುರಿತು ಅವಳ ಪರವಾದ ನಿಲುವುಗಳ ಕುರಿತಾಗಿ ಹಾಗೂ ಅವಳ ಹಕ್ಕು ಬಾದ್ಯತೆಗಳ ಕುರಿತು ಅವಳೆಷ್ಟು ತಿಳಕೊಂಡಿದ್ದಾಳೆ. ಅವು ಸಂವಿಧಾನದಲ್ಲಿ ಉಲ್ಲೇಖಕೊಂಡಿರುವುದರ ಬಗ್ಗೆ ಮಹಿಳೆಯರಿಗೆ ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವೇ ಈ ಲೇಖನದ ಮುಖ್ಯ ಉದ್ದೇಶವಾಗಿದೆ.
೧೯೫೦ ಜನವರಿ ೨೬ರಂದು ಭಾರತ ದೇಶಕ್ಕೆ ಸಂವಿಧಾನ ಜಾರಿಗೆ ಬಂತು. ಅವತ್ತಿನಿಂದ ಮಹಿಳೆಯರ ಸ್ಥಿತಿಗತಿಗಳ ಕುರಿತು ಹೇಳುವುದಾದರೆ ಆಕೆಯ ಮೇಲೆ ದೌರ್ಜನ್ಯಗಳನ್ನು, ಶೋಷಣೆಗಳು ಕಡಿಮೆ ಮಾಡುವ ನಿಟ್ಟಿನಲ್ಲಿ ಹಾಗೂ ಹಿತದೃಷ್ಟಿಯಿಂದಲೂ ಸಂವಿಧಾನದ ಮೂಲಕ ಹಲವು ವಿಧಿಗಳ ಆಕೆಗಾಗಿಯೇ ಮೀಸಲಿಟ್ಟಿವೆ. ಹೀಗಾಗಿ ಸ್ತ್ರೀ ಪುರುಷರು ಸಮಾನರಾಗಿ ಬದುಕಲು ದಾರಿ ಸಹ ಮಾಡಿಕೊಟ್ಟಿದೆ.
ಸ್ತ್ರೀ – ಪುರುಷರಷ್ಟೆ ಸಮಾನಳು. ಶಿಕ್ಷಣ ಪಡೆಯಲು, ವಿವಿಧ ಹುದ್ದೆಗಳ ಪಡೆಯಲು, ಸಂವಿಧಾನವು ಪ್ರಮುಖ ಪಾತ್ರವನ್ನು ವಹಿಸಿದೆ. ಇದರಿಂದ ನಮ್ಮ ದೇಶದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಜಗತ್ಪ್ರಸಿದ್ದರಾಗಲೂ ಸಾಧ್ಯವಾಗಿದೆ.
ತಂದೆ ಆಸ್ತಿಯಲ್ಲಿ ಆಸ್ತಿಯ ಹಕ್ಕು, ಹಿಂದೂ ಕೋಡ್ ಬಿಲ್ ಜಾರಿಗೆ ತರುವಲ್ಲಿ ಶ್ರಮಿಸಿದವರು ಡಾ. ಅಂಬೇಡ್ಕರ ಅವರು. ಇವು ಜಾರಿಗೆ ಬರದೆ ಕಾರಣ ತಮ್ಮ ಕಾನೂನು ಮಂತ್ರಿಗೆ ರಾಜೀನಾಮೆ ನೀಡಿದ ಏಕೈಕ ವ್ಯಕ್ತಿ ಡಾ. ಅಂಬೇಡ್ಕರ. ಇದಕ್ಕೆ ಸೂಕ್ಷ್ಮವಾಗಿ ಗಮನಿಸದ ಡಾ. ಅಂಬೇಡ್ಕರ ಅವರು ಕಾರಣ ಹುಡಕಿದಾಗ ಮನುಸ್ಮೃತಿ ಗ್ರಂಥದ ಮೇಲೆ ನಮ್ಮ ದಿವ್ಯ ಭಾರತ ನಿಂತಿದೆ ಎಂಬುವುದನ್ನ ಅರಿತು ಅವರು ಆ ಗ್ರಂಥವನ್ನು ಸುಟ್ಟು ಹಾಕುತ್ತಾರೆ. ನಂತರ ಅವರು ಪ್ರತಿ ಹೆಣ್ಣು ಮಕ್ಕಳಿಗೆ ಶಿಕ್ಷಣ ಹಕ್ಕು, ಮತದಾನದ ಹಕ್ಕು, ಆಸ್ತಿಯ ಹಕ್ಕು. ಕೈಗಾರಿಕೆಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ರಜೆಯ ಹಕ್ಕು ಹೀಗೆ ಸಾಲುಸಾಲು ಹಕ್ಕುಗಳ ನೀಡುವುದರ ಮೂಲಕ ಅವಳನ್ನ ಈ ಜಗತ್ತಿನಲ್ಲಿ ದ್ವಿತೀಯ ದರ್ಜೆಯಲ್ಲ ಅವಳು ಮನುಷ್ಯಳೆಂದು ಸಾರಿ ಸಾರಿ ಹೇಳುವಂತೆ ಮಾಡಿದ್ದು ಡಾ. ಅಂಬೇಡ್ಕರ ಅವರು.
ಭಾರತ ಸಂವಿಧಾನ ರಚನೆಯಲ್ಲಿ ಮಹಿಳೆಯರು:
ನಮ್ಮ ಸಂವಿಧಾನ ಸ್ತ್ರೀ – ಪುರುಷರಿಗೆಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿತು. ಸಂವಿಧಾನ ರಚನಾ ಸಭೆಯಲ್ಲಿ ೧೫ ಮಂದಿ ಮಹಿಳೆಯರು ಇದ್ದರು. ಕೇಂದ್ರ ಹಾಗೂ ಪ್ರಾಂತ ಶಾಸನ ಸಭೆಗಳಿಗೆ ಚುನಾಯಿತರಾದ ೨೭೨ ಜನಪ್ರತಿನಿಧಿಗಳು ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರೆ ಅದರಲ್ಲಿ ೧೫ ಜನ ಮಹಿಳೆಯರಲ್ಲಿ ಸ್ವತಂತ್ರ ಹೋರಾಟಗಾರ್ತಿಯರು, ಸಾಮಾಜಿಕ ಕಾರ್ಯಕರ್ತಿಯರು, ವಕೀಲೆಯರಿದ್ದರು. ಇವರು ಕೂಡ ಸಂವಿಧಾನ ಅಂಗೀಕರಿಸುವ ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಅಮ್ಮು ಸ್ವಾಮಿನಾಥ, ಬೇಗಂ ಇಝಾಜ್ ರಸೂಲ್, ದ್ರಾಕ್ಷಾಯಿಣಿ ವೇಲಾಯುಧನ್, ಆ್ಯನಿ ಮಸ್ಕರೇನ, ದುರ್ಗಾಬಾಯಿ ದೇಶಮುಖ, ಹನ್ಸ್ ಜೀವರಾಜ್, ಪೂರ್ಣಿಮಾ ಬ್ಯಾನರ್ಜಿ, ಕಮಲಾ ಚೌಧರಿ, ಅಮೃತ ಕೌರ, ರೇಣುಕಾ ರೇ, ಸರೋಜನಿ ನಾಯ್ಡು, ಸಚೀತಾ ಕೃಪಲಾನಿ ಹಾಗೂ ವಿಜಯಲಕ್ಷ್ಮಿ ಪಂಡಿತ ಹೀಗೆ ಅನೇಕ ಮಹಿಳೆಯರು ರಚನಾ ಸಭೆಯಲ್ಲಿ ಪಲ್ಗೊಂಡಿದ್ದು ಇತಿಹಾಸವೇ ಸೃಷ್ಟಿಯಾದಂತಿದೆ.
ಹಾಗಾದರೆ ಸಂವಿಧಾನದಲ್ಲಿ ಕೊಡ ಮಾಡುವ ಮಹಿಳಾ ಪರ ಚಿಂತನೆಯ ಸವಲತ್ತುಗಳು ಏನಿವೇ ಅಂತ ಗಮನಿಸಿದಾಗ ಹಲವಾರು ವಿಧಿಗಳ ಆಕೆಯ ಪರವಾಗಿ ನಿಂತಿವೆ. ಅವು
೧೪ನೇ ವಿಧಿ ಪ್ರಕಾರ ಕಾನೂನುನಿನ ಮುಂದೆ ಎಲ್ಲರು ಸಮಾನರು
೧೬ನೇ ವಿಧಿ ಪ್ರಕಾರ ಸಾರ್ವಜನಿಕ ಹುದ್ದೆಗಳನ್ನು ಹೊಂದಲು ಅವಕಾಶ ಕಲ್ಲಿಸಿದೆ
೩೯ನೇ ವಿಧಿ ಪ್ರಕಾರ ಸ್ತ್ರೀ- ಪುರುಷ ಎಂಬ ಭೇದಭಾವವಿಲ್ಲದೆ ಜೀವನಕ್ಕೆ ಅವಶ್ಯವಾದ
ಸಾಧನಗಳನ್ನು ಒದಗಿಸುವ ನೀತಿ ಜಾರಿಗೆ ಬಂತು
೧೯೬೧ರಲ್ಲಿ ಮೇಟರ ನೀತಿ ಬೆನಿಪಿಟ್ ಕಾಯ್ದೆ ಜಾರಿಗೆ ಬಂತು
೧೯೬೧ರಲ್ಲಿ ಹಿಂದೂ ವಿವಾಹ ಅಧಿನಿಯಮ ಕಾಯ್ದೆ ಜಾರಿಗೆ ಜೊತೆಗೆ ವಿಚ್ಛೇಧ ವಿಷಯವನ್ನು ಇದರಲ್ಲಿ ಸೇರಿಸಲಾಗಿತ್ತು.
೧೯೫೫ರಲ್ಲಿ ವಿವಾಹ ನೊಂದಾಯಿತ ಕಾಯ್ದೆ ಜಾರಿಗೆ ಬಂತು
೧೯೫೬ರಲ್ಲಿ ಹಿಂದೂ ವಾರಸಾ ಅಧಿನಿಯಮ ಕಾಯ್ದೆ ಜಾರಿಗೆ ತವರ ಮನೆಯ ಆಸ್ತಿಯ ಹಕ್ಕನ್ನ ಪಡೆಯುವುದನ್ನ ಜಾರಿಗೆ ತರಲಾಯಿತು.
೧೯೬೧ರಲ್ಲಿ ಪ್ರಸ್ತೂತಿ ಸೌಲಭ್ಯ ಕಾಯ್ದೆ ಜಾರಿಗೆ ತರಲಾಯಿತು
೧೯೭೬ರಲ್ಲಿ ಸಮಾನ ವೇತನ ಕಾಯ್ದೆ ಜಾರಿಗೆ ತರಲಾಯಿತು
೧೯೬೧ರಲ್ಲಿ ವರದಕ್ಷಿಣೆ ನಿಷೇದ ಕಾಯ್ದೆ ಜಾರಿಗೆ ಬಂತು
೧೯೫೬ರಲ್ಲಿ ಹಿಂದೂ ದತ್ತ ಜೀವನಾಂಶಗಳ ಕಾಯ್ದೆ ಜಾರಿಗೆ ಬಂದವು
ಇಷ್ಟೇಲ್ಲ ಕಾಯ್ದೆಗಳು ಇದ್ದರೂ ಭಾರತ ದೇಶದಲ್ಲಿ ನಿರಂತರವಾಗಿ ಹೆಣ್ಣು ಮಕ್ಕಳ ಮೇಲೆ ಆಗುವ ದೌರ್ಜನೆ ನಡೆಯುವುದು ಮಾತ್ರ ತಪ್ಪಲಿಲ್ಲ. ಇವತ್ತಿನ ಸಂದರ್ಭದಲ್ಲಿಯೂ ಅವಳಿಗೆ ರಕ್ಷಣೆಯಿಲ್ಲ. ಅತ್ಯಾಚಾರ ಬಲತ್ಕಾರ, ಲೈಂಗಿಕ ಕಿರುಕುಳ ಕೊಟ್ಟವರ ಮೇಲೆ ಎಷ್ಟೆ ಕೇಸಗಳು ಎಫ್ ಐ ಆರ್ ಆಗದೆ ಇರುವುದು. ಆದರೂ ಅವರಿಗೆ ಶಿಕ್ಷೆ ಆಗದೆ ಹೊರ ಬಂದು ರಾಜಾರೋಷವಾಗಿರುವ ತಿರುಗಾಡುವ ಪುರುಷರನ್ನು ಇವತ್ತು ನಾವು ನೋಡುತ್ತೇವೆ. ಇನ್ನಾದರೂ ನಮ್ಮ ಸಮಾಜವು ಮುಂದೆ ಈ ರೀತಿ ಆಗದೇ ಅವಳಿಗೆ ಗೌರವ ಕೊಡುವುದರ ಮೂಲಕ ಅವಳಿಗೆ ಕೆಲವೊಂದು ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಮುಂದಾಗಬೇಕು. ಆಗ ಈ ಅಂತರಾಷ್ಟ್ರೀಯ ಮಹಿಳಾ ದಿನಕ್ಕೆ ಒಂದು ಮೌಲ್ಯ ಬರುತ್ತದೆ. ಅದು ಮಾಡಬೇಕಾಗಿದ್ದು ಈ ಪುರುಷಪ್ರಧಾನ ಸಮಾಜ ಅದು ನಿಮ್ಮಕೈಯಲ್ಲಿದೆ. ಈ ಲೇಖನದ ಮೂಲಕ ನಿಮ್ಮಗೆ ತಿಳಿಸುವುದು ಏನೆಂದರೆ ಮಹಿಳೆ ದ್ವಿತೀಯ ದರ್ಜೆಯಲ್ಲ, ಅವಳು ಕೂಡ ನಿಮಂತೆ ಮನುಷ್ಯಳು ಅಂತ ತಿಳಕೊಂಡು ಅವಳ ಮೇಲೆ ಯಾವ ರೀತಿಯ ದೌರ್ಜನ್ಯ ಮಾಡದೆ ಮುಕ್ತವಾಗಿ ಜೀವಿಸಲು ಅವಕಾಶ ಕೊಡಿ.

*– ಡಾ.ಪೂರ್ಣಿಮಾ ಧಾಮಣ್ಣವರ*
ಕನ್ನಡ ಉಪನ್ಯಾಸಕರು
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ
ಡಾ. ಫ, ಗು ಹಳಕಟ್ಟಿ ಸ್ನಾತಕೋತ್ತರ ಕೇಂದ್ರ, ವಿಜಯಪುರ

