Author: editor.udayarashmi@gmail.com

ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ೨೨೦ ಕೆವ್ಹಿ ಸ್ಟೇಶನ್ ಎದುರಿಗೆ ಇರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು ಸಂಭ್ರಮದಿಂದ ಶುಕ್ರವಾರ ಜರುಗಿದವು.ಜಾತ್ರಾಮಹೋತ್ಸವ, ಮಹಾಶಿವರಾತ್ರಿ ಮಹೋತ್ಸವದಂಗವಾಗಿ ಮಧ್ಯಾನ್ಹ ೧೨.೩೦ ಗಂಟೆಯಿಂದ ಶರಣಯ್ಯ ಮಠಪತಿ ಅವರಿಂದ ಮಲ್ಲಿಕಾರ್ಜುನ ದೇವರಮೂರ್ತಿಗೆ ವಿಶೇಷ ರುದ್ರಾಭಿಷೇಕ ನೆರವೇರಿದ ನಂತರ ಮಲ್ಲಿಕಾರ್ಜುನ ದೇವರಿಗೆ ಅಲಂಕಾರ ಪೂಜೆ ನೆರವೇರಿತು. ರುದ್ರಾಭಿಷೇಕ ಪೂಜೆಯಲ್ಲಿ ಅನೇಕ ಸದ್ಭಕ್ತರು ಭಾಗವಹಿಸುವ ಮೂಲಕ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾದರು.ಬೆಳಗ್ಗೆ ೧೦.೩೦ ಗಂಟೆಗೆ ಅಫಜಲಪುರ ತಾಲೂಕಿನ ರಾಮನಗರದ ಮೈಲಾರಲಿಂಗ ಕಲಾ ಗಾಯನ ಸಂಘ ಹಾಗೂ ಇಂಡಿ ತಾಲೂಕಿನ ಬುಯಾರದ ಮೈಲಾರಲಿಂಗೇಶ್ವರ ಗಾಯನ ಸಂಘದಿಂದ ಹಾಡಕಿ ಪದಗಳು ಜರುಗಿದವು. ಶಿವಯೋಗಗೈದ ಸದ್ಭಕ್ತರಿಗೆ ಫಲಹಾರ ಮತ್ತು ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.ರಾತ್ರಿ ಅಥಣಿ ತಾಲೂಕಿನ ಕನ್ನಾಳದ ಶಿವಯೋಗಿ ಸಿದ್ದರಾಮೇಶ್ವರ ನಾಟ್ಯಸಂಘದಿಂದ ಶಿವಯೋಗಿ ಸಿದ್ದರಾಮೇಶ್ವರ ಮಹಾತ್ಮೆ ಎಂಬ ಸುಂದರ ಭಕ್ತ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ನಾಟಕಕ್ಕೆ ಸಚಿವ ಶಿವಾನಂದ ಪಾಟೀಲರು ಚಾಲನೆ ನೀಡಿದರು. ನಾಟಕ ಪ್ರದರ್ಶನ…

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತರಾಗಿದ್ದ ಶ್ರೀಶೈಲ ಗುರಪ್ಪ ಹಾರಿವಾಳ ಅವರ ಕುಟುಂಬ ಪರಿವಾರದವರಿಗೆ ಹೆಸ್ಕಾಂ ಇಲಾಖೆಯ ರೂ.5 ಲಕ್ಷ ಪರಿಹಾರ ಧನದ ಚೆಕ್ ಅನ್ನು ಸಚಿವ ಶಿವಾನಂದ ಪಾಟೀಲ ಅವರು ಗುರುವಾರ ಸಂಜೆ ಅವರ ಮನೆಗೆ ತೆರಳಿ ವಿತರಿಸಿದರು.ಈ ಸಂದರ್ಭದಲ್ಲಿ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಸಿದ್ದರಾಮ ಬಿರಾದಾರ, ಹಿರಿಯರಾದ ಬಸವರಾಜ ಹಾರಿವಾಳ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯ ಅಶೋಕ ಹಾರಿವಾಳ, ಬಸವರಾಜ ನಾಯ್ಕೋಡಿ ಇತರರು ಇದ್ದರು.

Read More

ವಚನ ವಿಶ್ವವಿದ್ಯಾಲಯ ಸ್ಥಾಪನೆ ಘೋಷಣೆ: ರಾಷ್ಟ್ರೀಯ ಬಸವ ಸೈನ್ಯ ಹರ್ಷ ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ವಚನದ ಮೂಲಕ ಕ್ರಾಂತಿಯನ್ನು ಮಾಡಿದ ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರ ಸಮಕಾಲಿನ ಶರಣರ ವಚನಗಳ ಅಧ್ಯಯನಕ್ಕಾಗಿ ವಚನ ವಿಶ್ವವಿದ್ಯಾಲಯವನ್ನು ಮುಂದಿನ ವರ್ಷ ಸರ್ಕಾರ ಆರಂಭಿಸುವುದಾಗಿ ಘೋಷಣೆ ಸಿಎಂ ಘೋಷಣೆ ಮಾಡಿರುವುದನ್ನು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಸ್ವಾಗತಿಸಿದ್ದಾರೆ.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಕಲ್ಯಾಣದಲ್ಲಿ ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿನಂದನಾ ಸಮಾರಂಭದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಘೋಷಣೆ ಮಾಡಿರುವುದು ಸ್ವಾಗತಾರ್ಹ ವಿಷಯವಾಗಿದೆ.ಈಚೆಗೆ ಸರ್ಕಾರ ಬಸವಣ್ಣನವರನ್ನು ಸಾಂಸ್ಕ್ರತಿಕ ನಾಯಕ ಎಂದು ಘೋಷಣೆ ಮಾಡಿರುವದು ಬಸವನಾಡಿನ ಜನರಿಗೆ ಸಂತಸ ತಂದಿದೆ. ಈಗಾಗಲೇ ರಾಜ್ಯ ಸರ್ಕಾರವು ಬಸವಣ್ಣನವರ ಕರ್ಮಭೂಮಿ ಬಸವ ಕಲ್ಯಾಣದಲ್ಲಿ ಸುಮಾರು 600 ಕೋಟಿ ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣ ಮಾಡುತ್ತಿದೆ. ಕೂಡಲಸಂಗಮದಲ್ಲಿ ವಚನ ಅಧ್ಯಯನ ಪೀಠ ಸೇರಿದಂತೆ ಬಸವಣ್ಣನವರ ಸಮಕಾಲಿನ ಶರಣರ ಸ್ಮಾರಕಗಳು ನಿರ್ಮಾಣಗೊಂಡಿದ್ದು…

Read More

ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಅವರು ಮಾರ್ಚ್ ೯ ಹಾಗೂ ೧೦ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಮಾ.೯ರಂದು ಬೆಳಿಗ್ಗೆ ೧೧ ಗಂಟೆಗೆ ಸೋಲಾಪುರ ರಸ್ತೆಯಲ್ಲಿ ಒಣದ್ರಾಕ್ಷಿ ಸಂಸ್ಕರಣಾ ಘಟಕದ ಉದ್ಘಾಟನೆ ನೆರವೇರಿಸಿ ಮಧ್ಯಾಹ್ನ ೧೨ ಗಂಟೆಗೆ ಬಬಲೇಶ್ವರದಲ್ಲಿ ಬಬಲೇಶ್ವರ ತಾಲೂಕು ಮಿನಿ ವಿಧಾನಸೌಧ ಉದ್ಘಾಟನೆ ಹಾಗೂ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩ಗಂಟೆಗೆ ಬಬಲೇಶ್ವರದಿಂದ ವಿಜಯಪುರಕ್ಕೆ ಆಗಮಿಸಲಿದ್ದಾರೆ. ಅಂದು ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಮಾ.೧೦ ರಂದು ಬೆಳಿಗ್ಗೆ ೯-೩೦ಕ್ಕೆ ಬಿ.ಎಲ್.ಡಿ.ಇ. ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಆಯೋಜಿಸಿರುವ ವೈದ್ಯಕೀಯ ವಿಷಯಗಳ ರಂಗೋಲಿ ವೀಕ್ಷಣೆ ಮಾಡಿ, ಬೆಳಿಗ್ಗೆ ೧೦-೩೦ಕ್ಕೆ ೭೭೦ ಲಿಂಗ ದೇವಾಲಯ ಆವರಣದಲ್ಲಿರುವ ೭೭೦ ಅಮರ ಗಣಾಧೀಶ್ವರ ಸ್ಮಾರಕ ಲಿಂಗ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ ೧೧-೩೦ಕ್ಕೆ ಜಿಲ್ಲಾ ಕೇಂದ್ರ ಕಾರಾಗೃಹದ ಹತ್ತಿರ, ನೂತನ ಎನ್.ಸಿ.ಸಿ. ಕಟ್ಟಡದ…

Read More

ವಿಜಯಪುರ: ವಿಶ್ವ ಶ್ರವಣ ದಿನದ ಅಂಗವಾಗಿ, ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಜಿಲ್ಲಾ ಶಾಖೆ ಹಾಗೂಸುಭಾಸ ಬಿದರಿ ಮೆಮೋರಿಯಲ್ ಜೈಲ್ಡ್ ಗದ್ದಲಪ್‌ಮೆಂಟ್ ಸೆಂಟರ್ ಆಶ್ರಯದಲ್ಲಿ ಮಾ. 5 ರಿಂದ ಡಾ|ಬಿದರಿಯವರ ಅಶ್ವಿನಿ ಆಸ್ಪತ್ರೆಯ 4ನೆಯ ಮಹಡಿಯಲ್ಲಿ ನಡೆದ ಎರಡು ದಿನಗಳ ಶಿಬಿರದಲ್ಲಿ ಸುಮಾರು 35ಜನರ (ಮಕ್ಕಳು ಹಾಗೂ ವಯಸ್ಕರು ಸೇರಿದಂತೆ) ಶ್ರವಣ ದೋಷ ತಪಾಸಣೆಯನ್ನು ಯಶಸ್ವಿಯಾಗಿನಡೆಸಲಾಯಿತು. ಇದರ ಜೊತೆಗೆ ಮಕ್ಕಳಿಗಾಗಿ ಮಾತಿನ ಅಸ್ವಸ್ಥತೆಯನ್ನು ಕೂಡಾ ಪರೀಕ್ಷಿಸಲಾಯಿತು.ಅವರಲ್ಲಿ 8 ಮಕ್ಕಳಿಗೆ ಎರಡೂ ಕಿವಿಗಳಿಗೆ (ದ್ವಿಪಕ್ಷೀಯ) ಶ್ರವಣ ಸಾಧನಗಳು ಬೇಕಾಗಿದ್ದು, ಇದು ಅವರ ಶಿಕ್ಷಣ ಮತ್ತು ಭಾಷಾ ಕಲಿಕೆಗೆ ಮುಖ್ಯವಾಗಿದೆ. ಇದರ ಜೊತೆಗೆ 20 ವಯಸ್ಕರಿಗೆ ಏಕಪಕ್ಷೀಯ ಶ್ರವಣಸಾಧನವನ್ನು ಒದಗಿಸಲು ನಿರ್ಧರಿಸಲಾಗಿದ್ದು, ಒಟ್ಟಾರೆ 36 ಶ್ರವಣ ಸಾಧನಗಳು ಬೇಕಾಗಿದ್ದು, ಇದರ ಜವಾಬ್ದಾರಿಯನ್ನು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ ವಹಿಸಿಕೊಂಡಿದೆ. ಡಿಜಿಟಲ್ ಶ್ರವಣ ಸಾಧನಗಳು ಉತ್ತಮ ಮಾತಿನ ಸ್ಪಷ್ಟತೆ ಮತ್ತು ಬಾಳಿಕೆಯನ್ನು ಒದಗಿಸುವುದರಿಂದ ಸ್ಟಾ‌ಕೀ ಕಂಪನಿಯ’ಮ್ಯೂಸ್’ ಐಕ್ಯೂ 1000′ ಶ್ರವಣ ಸಾಧನಗಳನ್ನು ಫಲಾನುಭವಿಗಳಿಗೆ…

Read More

ಲೋಕಸಭೆ ಚುನಾವಣೆಯಲ್ಲಿ ಲಿಂಗಾಯತ ಮತಗಳನ್ನು ಸೆಳೆಯಲು ಬಿಜೆಪಿ ತಂತ್ರ | ಬಿಎಸ್ ಯಡಿಯೂರಪ್ಪ ಸೂಚನೆ ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಭಾರಿ ಗೆಲುವು ಸಾಧಿಸುವ ಪ್ಲ್ಯಾನ್ ಮಾಡಿರುವ ಬಿಜೆಪಿ ಇಬ್ಬರು ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರನ್ನು ಪ್ರಬಲ ಲಿಂಗಾಯತ ಸಮುದಾಯದ ಮತಗಳನ್ನು ಸೆಳೆಯಲು ಕಣಕ್ಕಿಳಿಸುವ ಸಾಧ್ಯತೆಗಳಿವೆ.ಈ ಕುರಿತು ಪಕ್ಷದ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಸೇರಿದಂತೆ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳಿಗೆ ಅಭ್ಯರ್ಥಿಗಳ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೊಂದಿಗೆ ಚರ್ಚೆ ನಡೆದಿದೆ, ಆದರೆ ಅಂತಿಮವಾಗಿಲ್ಲ. ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.ಬಿಜೆಪಿಯ ಸಂಸದೀಯ ಮಂಡಳಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಬಿಜೆಪಿ ಜೆಡಿಎಸ್‌ಗೆ ಎರಡು ಅಥವಾ ಮೂರು ಸ್ಥಾನಗಳನ್ನು ನೀಡಬಹುದು ಎಂದು ಸುಳಿವು ನೀಡಿದ್ದಾರೆ. ಪ್ರಧಾನಿ…

Read More

ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವ ಮುದ್ದೇಬಿಹಾಳ: ಸ್ವಧರ್ಮದಲ್ಲಿ ನಿಷ್ಠೆ, ಪರ ಧರ್ಮದಲ್ಲಿ ಸಹಿಷ್ಣುತೆ ಕಾಪಾಡಿಕೊಂಡು ಬರುವದೇ ಎಲ್ಲ ಧರ್ಮಗಳ ಮೂಲ ಗುರಿಯಾಗಬೇಕು ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೇಶ್ವರ ಭಗವತ್ಪಾದಕರು ಹೇಳಿದರು.ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಕೊನೆಯ ದಿನದ ಧರ್ಮ ಸಂದೇಶ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಇವತ್ತಿನ ದಿನಮಾನಗಳಲ್ಲಿ ಕೆಲವು ಜಾತಿ ಜನಾಂಗಗಳನ್ನು ಪುಷ್ಠೀಕರಿಸುವಂತಹ ಕೆಲವು ಸಮುದಾಯಗಳನ್ನು ವ್ಯವಸ್ಥಿತವಾಗಿ ತುಳಿಯುವಂತಹ ಹುನ್ನಾರ ಕೆಲವು ಸಂದರ್ಭಗಳಲ್ಲಿ ನಡೆಯುತ್ತಿದೆ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಇತಿಹಾಸ ಹೇಳುತ್ತೆ ನಿನ್ನೆ ಸುಖ ಇತ್ತು ಅಂತ, ವಿಜ್ಞಾನ ಹೇಳುತ್ತೆ ನಾಳೆ ಸುಖ ಇದೆ ಎಂದು. ಆದರೆ ಮನುಷ್ಯ ಪ್ರಾಮಾಣಿಕವಾಗಿ, ದಕ್ಷತೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿದಲ್ಲಿ ಜೀವನದಲ್ಲಿ ಪ್ರತಿನಿತ್ಯ ಸುಖವನ್ನು ಕಾಣಬಹುದು ಎಂದು ಧರ್ಮ ಸ್ಪಷ್ಠವಾಗಿ ಹೇಳುತ್ತೆ. ಮಾನವನ ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ ಪ್ರತಿಯೊಬ್ಬರ ಪಾಲನೆ ಅಗತ್ಯವಿದೆ ಎಂದರು.ಗುರು ಚನ್ನವೀರ…

Read More

ಸಿಂದಗಿ: ಸಿಂದಗಿ ಸಿರಿ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ ೪೪ ನೇ ಪುಣ್ಯಸ್ಮರಣೋತ್ಸವ ಹಾಗೂ ಗದುಗಿನ ತೋಂಟದಾರ್ಯ ಮಠದ ಲಿಂ. ಶ್ರೀ ಜಗದ್ಗುರು ಡಾ.ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳ ೬ ನೇ ಗುರು ಸ್ಮರಣೆ ಕಾರ್ಯಕ್ರಮವು ಮಾ.೧೩ ರಿಂದ ಮಾ.೧೯ ರ ವರೆಗೆ ಪ್ರತಿ ದಿನ ಸಾಯಂಕಾಲ ೭ ಗಂಟೆಗೆ ಸಿಂದಗಿಯ ಊರಿನ ಹಿರಿಯಮಠದಲ್ಲಿ ಜರುಗಲಿದೆ ಎಂದು ಶ್ರೀಮಠದ ಪೀಠಾಧ್ಯಕ್ಷರಾದ ಶಿವಾನಂದ ಶಿವಾಚಾರ್ಯರು ತಿಳಿಸಿದ್ದಾರೆ.ಮಾ.೧೩ ರಂದು ಕನ್ನೋಳ್ಳಿಯ ಹಿರೇಮಠದ ಶತಾಯುಷಿ ಲಿಂ ಪೂಜ್ಯ ಶ್ರೀ ಮರುಳಾರಾಧ್ಯ ಶಿವಾಚಾರ್ಯರ ವೇದಿಕೆಯಲ್ಲಿ ಸಂಜೆ ೭ ಗಂಟೆಗೆ ಸ್ಮರಣೋತ್ಸವ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಕನ್ನೋಳ್ಳಿಯ ಹಿರೇಮಠದ ಶ್ರೀ ಸಿದ್ದಲಿಂಗ ಶೀವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ. ಸ್ಥಳಿಯ ಭೀಮಾಶಂಕರ ಮಠದ ಶ್ರೀ ಸದ್ಗುರು ದತ್ತಯೋಗೀಶ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದಾರೆ. ಸಿಂದಗಿಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ದಾನಯ್ಯ ಮಠಪತಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.ಮಾ.೧೪ ರಂದು ಆಲಮೇಲದ ಸಂಸ್ಥಾನ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು ಸಾನಿಧ್ಯದಲ್ಲಿ ಮಹಿಳಾ ವಿಚಾರ ಗೋಷ್ಠಿ ನಡೆಯಲಿದ್ದು…

Read More

ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಆರಾಧ್ಯದೈವ ಮಡಿವಾಳೇಶ್ವರರ ೫೧೭ ನೇ ಜಾತ್ರಾ ಮಹೋತ್ಸವ ಮಾ.೮ ರಿಂದ ಪ್ರಾರಂಭವಾಗಿದ್ದು ಮಾ.೨೫ ರವರೆಗೆ ಅದ್ಧೂರಿಯಾಗಿ ನಡೆಯಲಿದೆ.ಮಾ.೧೧ ರಿಂದ ಉಚ್ಚಾಯ ಎಳೆಯುವದು. ಮಾ.೧೮ ರ ಸಂಜೆ ೪ಗಂಟೆಗೆ ಜಗದ್ಗುರು ಡಾ.ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಕರ ಅದ್ದೂರಿ ಜೋಡು ಅಡ್ಡಪಲ್ಲಕ್ಕಿ ಮಹೋತ್ಸವ. ಸಂಜೆ ೭ಕ್ಕೆ ಧರ್ಮಸಭೆ ಮತ್ತು ಸನ್ಮಾನ ಸಮಾರಂಭ. ಮಾ.೧೯ ರಂದು ಸಂಜೆ ೫ಗಂಟೆಗೆ ರಥೋತ್ಸವ ರಾತ್ರಿ ೧೦:೩೦ ಕ್ಕೆ ರಸಮಂಜರಿ ಕಾರ್ಯಕ್ರಮ. ಮಾ.೨೦ ರಂದು ಜಾನುವಾರಗಳ ಪ್ರದರ್ಶನ, ಮಾ.೨೧ ರಂದು ದೇಹದಾರ್ಡ್ಯ ಸ್ಪರ್ದೆಗಳು ನಂತರ ಪ್ರಥಮಬಾರಿಗೆ ಶ್ವಾನಗಳ ಓಟದ ಸ್ಪರ್ದೆ ಸಂಜೆ ಕಡುಬಿನ ಕಾಳಗ, ಮಾ.೨೨ ರಂದು ಎತ್ತುಗಳಿಂದ ದಿಂಡು ಬಡಿಯುವ ಸ್ಪರ್ದೆ, ಮಾ.೨೩ ಕ್ಕೆ ತರಬಂಡಿ ಸ್ಪರ್ದೆ, ಮಾ.೨೪ ಕ್ಕೆ ಪುಟ್ಟಿಗಾಡಿ ರೇಸ್, ಮಾ.೨೫ ರಂದು ಕಳಸ ಇಳಿಸುವದು ಹಾಗೂ ಹಂಪಾ ಕೊಡುವದು ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ ೭:೩೦ ಗಂಟೆಯಿಂದ ಕಲಬುರಗಿಯ ಮಹಾದಾಸೋಗಿ ಶ್ರೀ ಶರಣಬಸವೇಶ್ವರರ ಪುರಾಣ ಸಾಗುವದು.

Read More

ಇಂಡಿ: ಮಹಿಳೆಯರು ರಾಜಕೀಯ, ಶಿಕ್ಷಣ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಹೊಂದಿ ಅವರೂ ಗೌರವದ ಬದುಕು ನಡೆಸುವ ಅವಕಾಶ ಪಡೆದುಕೊಂಡರೂ ಕೆಲವೆಡೆ ಶೋಷಣೆ ಮಾತ್ರ ಇನ್ನೂ ನಿಂತಿಲ್ಲ ಎಂದು ಸರಕಾರಿ ಆಸ್ಪತ್ರೆಯ ವೈದ್ಯೆ ಡಾ|| ಪ್ರೀತಿ ಕೋಳೆಕರ ವಿಷಾಧಿಸಿದರು.ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ವಿವಿಯಲ್ಲಿ ಮಹಿಳಾ ದಿನಾಚರಣೆ ಮತ್ತು ೮೮ ನೇ ತ್ರಿಮೂರ್ತಿ ಶಿವ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಬ್ರಹ್ಮ ಕುಮಾರಿ ಮುಖ್ಯಸ್ಥೆ ಬಿ.ಕೆ.ಯಮುನಾ ಅಕ್ಕನವರು ಮಾತನಾಡಿ ನಮ್ಮ ಜನಸಂಖ್ಯೆಯಲ್ಲಿ ಶೇ ೫೦ ರಷ್ಟು ಮಹಿಳೆಯರಿದ್ದರೂ ಕೆಲವು ಕಡೆ ಅವರ ದುಡಿಮೆಗೆ ಮನ್ನಣೆ ಸಿಗುತ್ತಿಲ್ಲ. ಅದರಲ್ಲೂ ಪ.ಜಾತಿ, ಪ. ಪಂಗಡ ಮಹಿಳೆಯರಲ್ಲಿ ಅಪಾರ ಪ್ರತಿಭೆ ಮತ್ತು ಕೌಶಲಗಳಿವೆ. ಆದರೆ ಒಟ್ಟು ಸ್ತ್ರೀಯರ ಪೈಕಿ ಶೇ ೫ ರಿಂದ ೧೦ ರಷ್ಟು ಮಂದಿ ಮಾತ್ರ ಅರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಹೆಣ್ಣುಮಕ್ಕಳ ದುಡಿಮೆಗೆ ನೆಲೆ ಬೆಲೆಗಳು ಸಿಕ್ಕರೆ ಮಾತ್ರ ರಾಜ್ಯದ ಸಮಗ್ರ ಅಭಿವೃದ್ದಿ ಸಾದ್ಯವಾಗುತ್ತದೆ ಎಂದರು.ಕದಳಿ ವೇದಿಕೆ ಉಪಾಧ್ಯಕ್ಷ ರಾಜೇಶ್ವರಿ ಕ್ಷತ್ರಿಯವರು ಮಾತನಾಡಿ ಮಹಿಳೆಯರು ಇಂದು…

Read More