ಮುದ್ದೇಬಿಹಾಳ: ತಾಲೂಕಿನ ಢವಳಗಿ ಗ್ರಾಮದ ಆರಾಧ್ಯದೈವ ಮಡಿವಾಳೇಶ್ವರರ ೫೧೭ ನೇ ಜಾತ್ರಾ ಮಹೋತ್ಸವ ಮಾ.೮ ರಿಂದ ಪ್ರಾರಂಭವಾಗಿದ್ದು ಮಾ.೨೫ ರವರೆಗೆ ಅದ್ಧೂರಿಯಾಗಿ ನಡೆಯಲಿದೆ.
ಮಾ.೧೧ ರಿಂದ ಉಚ್ಚಾಯ ಎಳೆಯುವದು. ಮಾ.೧೮ ರ ಸಂಜೆ ೪ಗಂಟೆಗೆ ಜಗದ್ಗುರು ಡಾ.ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದಕರ ಅದ್ದೂರಿ ಜೋಡು ಅಡ್ಡಪಲ್ಲಕ್ಕಿ ಮಹೋತ್ಸವ. ಸಂಜೆ ೭ಕ್ಕೆ ಧರ್ಮಸಭೆ ಮತ್ತು ಸನ್ಮಾನ ಸಮಾರಂಭ. ಮಾ.೧೯ ರಂದು ಸಂಜೆ ೫ಗಂಟೆಗೆ ರಥೋತ್ಸವ ರಾತ್ರಿ ೧೦:೩೦ ಕ್ಕೆ ರಸಮಂಜರಿ ಕಾರ್ಯಕ್ರಮ. ಮಾ.೨೦ ರಂದು ಜಾನುವಾರಗಳ ಪ್ರದರ್ಶನ, ಮಾ.೨೧ ರಂದು ದೇಹದಾರ್ಡ್ಯ ಸ್ಪರ್ದೆಗಳು ನಂತರ ಪ್ರಥಮಬಾರಿಗೆ ಶ್ವಾನಗಳ ಓಟದ ಸ್ಪರ್ದೆ ಸಂಜೆ ಕಡುಬಿನ ಕಾಳಗ, ಮಾ.೨೨ ರಂದು ಎತ್ತುಗಳಿಂದ ದಿಂಡು ಬಡಿಯುವ ಸ್ಪರ್ದೆ, ಮಾ.೨೩ ಕ್ಕೆ ತರಬಂಡಿ ಸ್ಪರ್ದೆ, ಮಾ.೨೪ ಕ್ಕೆ ಪುಟ್ಟಿಗಾಡಿ ರೇಸ್, ಮಾ.೨೫ ರಂದು ಕಳಸ ಇಳಿಸುವದು ಹಾಗೂ ಹಂಪಾ ಕೊಡುವದು ಹೀಗೆ ವಿವಿಧ ವಿಶೇಶ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಸಂಜೆ ೭:೩೦ ಗಂಟೆಯಿಂದ ಕಲಬುರಗಿಯ ಮಹಾದಾಸೋಗಿ ಶ್ರೀ ಶರಣಬಸವೇಶ್ವರರ ಪುರಾಣ ಸಾಗುವದು.
Subscribe to Updates
Get the latest creative news from FooBar about art, design and business.
Related Posts
Add A Comment
