ಬಸವನಬಾಗೇವಾಡಿ: ಪಟ್ಟಣದ ತೆಲಗಿ ರಸ್ತೆಯಲ್ಲಿರುವ ೨೨೦ ಕೆವ್ಹಿ ಸ್ಟೇಶನ್ ಎದುರಿಗೆ ಇರುವ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಮಲ್ಲಿಕಾರ್ಜುನ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವದಂಗವಾಗಿ ವಿವಿಧ ಕಾರ್ಯಕ್ರಮಗಳು ಸಂಭ್ರಮದಿಂದ ಶುಕ್ರವಾರ ಜರುಗಿದವು.
ಜಾತ್ರಾಮಹೋತ್ಸವ, ಮಹಾಶಿವರಾತ್ರಿ ಮಹೋತ್ಸವದಂಗವಾಗಿ ಮಧ್ಯಾನ್ಹ ೧೨.೩೦ ಗಂಟೆಯಿಂದ ಶರಣಯ್ಯ ಮಠಪತಿ ಅವರಿಂದ ಮಲ್ಲಿಕಾರ್ಜುನ ದೇವರಮೂರ್ತಿಗೆ ವಿಶೇಷ ರುದ್ರಾಭಿಷೇಕ ನೆರವೇರಿದ ನಂತರ ಮಲ್ಲಿಕಾರ್ಜುನ ದೇವರಿಗೆ ಅಲಂಕಾರ ಪೂಜೆ ನೆರವೇರಿತು. ರುದ್ರಾಭಿಷೇಕ ಪೂಜೆಯಲ್ಲಿ ಅನೇಕ ಸದ್ಭಕ್ತರು ಭಾಗವಹಿಸುವ ಮೂಲಕ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾದರು.
ಬೆಳಗ್ಗೆ ೧೦.೩೦ ಗಂಟೆಗೆ ಅಫಜಲಪುರ ತಾಲೂಕಿನ ರಾಮನಗರದ ಮೈಲಾರಲಿಂಗ ಕಲಾ ಗಾಯನ ಸಂಘ ಹಾಗೂ ಇಂಡಿ ತಾಲೂಕಿನ ಬುಯಾರದ ಮೈಲಾರಲಿಂಗೇಶ್ವರ ಗಾಯನ ಸಂಘದಿಂದ ಹಾಡಕಿ ಪದಗಳು ಜರುಗಿದವು. ಶಿವಯೋಗಗೈದ ಸದ್ಭಕ್ತರಿಗೆ ಫಲಹಾರ ಮತ್ತು ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ರಾತ್ರಿ ಅಥಣಿ ತಾಲೂಕಿನ ಕನ್ನಾಳದ ಶಿವಯೋಗಿ ಸಿದ್ದರಾಮೇಶ್ವರ ನಾಟ್ಯಸಂಘದಿಂದ ಶಿವಯೋಗಿ ಸಿದ್ದರಾಮೇಶ್ವರ ಮಹಾತ್ಮೆ ಎಂಬ ಸುಂದರ ಭಕ್ತ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು. ನಾಟಕಕ್ಕೆ ಸಚಿವ ಶಿವಾನಂದ ಪಾಟೀಲರು ಚಾಲನೆ ನೀಡಿದರು. ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಶ್ರೀಗಳು, ವಿವಿಧ ಗಣ್ಯರು ಭಾಗವಹಿಸಿದ್ದರು.
ಜಾತ್ರಾಮಹೋತ್ಸವದಲ್ಲಿ ಶ್ರೀಶೈಲ ಅಡಗಿಮನಿ, ಶ್ರೀಶೈಲ ಕುಂಬಾರ, ಬಸವರಾಜ ಅಂಗಡಿ, ಶರಣು ಮನಗೂಳಿ, ಮಲ್ಲು ಮಾಲಗಾರ, ಶ್ರೀಶೈಲ ಮುಳವಾಡ, ರಾಜು ನಾಲತವಾಡ, ಕಲ್ಲು ಗಬ್ಬೂರ, ರಮೇಶ ನಾಡಗೌಡ, ಬಾಬು ನಾಗೂರ, ಅಶೋಕ ಮನಗೂಳಿ, ಸಿದ್ದು ಜಾಡರ, ಮಾಂತು ಹೊಸಮನಿ ಸೇರಿದಂತೆ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

