Author: editor.udayarashmi@gmail.com

ಅನಾಮಧೇಯ ಪತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆ | ಹನುಮಾನ ದೇಗುಲದಲ್ಲಿ ಮತ್ತೊಂದು ಪತ್ರ ಪತ್ತೆ |ತೀವ್ರ ತನಿಖೆ ಚಿಕ್ಕೋಡಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಮಮಂದಿರ ಸ್ಫೋಟಿಸುವುದಾಗಿ ಹೇಳಿ ಬೆದರಿಕೆ ಪತ್ರ ಲಭಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಚಿಕ್ಕೋಡಿಯ ನಿಪ್ಪಾಣಿ ನಗರದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಧೇಯ ಪತ್ರವೊಂದು ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ನಿಪ್ಪಾಣಿ ನಗರದ ಶ್ರೀರಾಮ ಮಂದಿರದಲ್ಲಿ ಫೆ. 7 ರಂದು ಹಿಂದಿ ಭಾಷೆಯಲ್ಲಿ ಬರೆದ ಪತ್ರ ಪತ್ತೆಯಾಗಿದೆ. ಇದಲ್ಲದೆ ಫೆ.10 ರಂದು ಹನುಮಾನ ದೇವಸ್ಥಾನದಲ್ಲಿ ಮತ್ತೊಂದು ಪತ್ರ ಪತ್ತೆಯಾಗಿದೆ.ಇದರಿಂದ ಗಡಿ ಭಾಗದಲ್ಲಿ ಆತಂಕ ಸೃಷ್ಟಿಯಾಗಿದ್ದು. ಪೊಲೀಸರು ತೀವ್ರ ಎಚ್ಚರಿಕೆ ವಹಿಸಿದ್ದಾರೆ. ದೇವಸ್ಥಾನ ಬಳಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು ಸಿಸಿಟಿವಿ ಅಳವಡಿಸಲಾಗಿದೆ.ಪತ್ರದಲ್ಲೇನಿದೆ?ಪತ್ರದಲ್ಲಿ ‘ಅಲ್ಲಾಹು ಅಕ್ಬರ್’ ಎಂಬ ಬರಹ ಇದೆ ಎನ್ನಲಾಗಿದೆ. “ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ. ದೊಡ್ಡ ಪ್ರಮಾಣದಲ್ಲೇ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ” ಅಂತ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಫೆಬ್ರವರಿ 29 ಹಾಗೂ 28ರ ದಿನಾಂಕದಲ್ಲಿ ಪತ್ರ…

Read More

ನಿವರಗಿಯಲ್ಲಿ ಸಂಭ್ರಮದ ಕಳಸಾರೋಹಣ ಕಾರ್ಯಕ್ರಮ ಚಡಚಣ: ಸಮೀಪದ ನಿವರಗಿಯ ಗ್ರಾಮ ದೇವ ಶ್ರೀ ಸಂಗಮೇಶ್ವರ ದೇವಾಸ್ಥಾನದ ನೂತನ ಗೋಪುರಕ್ಕೆ ಕಳಸಾರೋಹಣ ಶನಿವಾರದಂದು ಸಂಭ್ರಮದಿಂದ ಜರುಗಿತು. ಬೆಳಗ್ಗೆಯಿಂದ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ನೂತನ ಕಳಸಾರೋಹಣವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ರಸ್ತೆಯುದ್ಧಕ್ಕೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭಗಳೊಂದಿಗೆ ಮಹಿಳೆಯರು ಹಾಡುಗಳನ್ನು ಹಾಡುತ್ತ ಕುಂಭ ಹೊತ್ತ ಮಹಿಳೆಯರ ದಂಡು ಹೀಗೆ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾರಜೋಳ, ಕಾತ್ರಾಳದ ಜ್ಞಾನಯೋಗಾಶ್ರಮದ ಅಮೃತಾನಂದ ಮಹಾಸ್ವಾಮಿಗಳು ಮಾತನಾಡುತ್ತ. ಗ್ರಾಮದಲ್ಲಿಯೂ ದೇವರ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ ಸಮೃದ್ಧಿ ನೆಲೆಸಲು ಸಾಧ್ಯವಾಗಿದೆ. ಭೌತಿಕ ಸಂಪತ್ತು ಶಾಸ್ವತವಲ್ಲ, ಹುಟ್ಟಿರುವ ಬದುಕು ಶಾಶ್ವತವಲ್ಲ, ಆದರೆ ಸಂಸ್ಕಾರ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ…

Read More

ವಿಜಯಪುರ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ವಿಜಯಪುರ (ಕೆ.ಎ.ಎಸ್.)ಶ್ರೀಮತಿ ಶ್ವೇತಾ ಮೋಹನ ಬಿಡೀಕರ ಹೇಳಿದರು.ಮಹಿಳಾ ಸಬಲಿಕರಣ ಸಮಿತಿ ವತಿಯಿಂದ ಸರಕಾರಿ ಪಾಲಿಟೆಕ್ನಿಕ್ ವಿಜಯಪುರದ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಸಸಿಗೆ ನೀರುವುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು,ಮಹಿಳೆಯೂ ಮನೆಯಿಂದ ಹೊರಬಂದು ಸಾಧನೆಯತ್ತ ದಾಪುಗಾಲಿಡುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು. ಇನ್ನಷ್ಟು ಮಹಿಳೆಯರು ಅಡುಗೆ ಮನೆಯಿಂದ ಹೊರ ಬರಬೇಕು. ಜಗತ್ತು ತುಂಬಾ ವಿಶಾಲವಾಗಿದೆ ಎಲ್ಲ ಮಹಿಳೆಯರು ತಮ್ಮದೇ ವೈಶೀಷ್ಠತೆಯನ್ನು ಹೊಂದಿರುತ್ತಾರೆ ಅದನ್ನು ಗುರುತಿಸಿಕೊಂಡು ಸಾಧಿಸಿ ಜಗತ್ತಿಗೆ ಮಾದರಿಯಾಗಬೇಕೆಂದರು.ವಿಜಯಪುರ ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ (ಕೆ.ಎ.ಎಸ್) ಶ್ರೀಮತಿ ಕವಿತಾ ಆರ್. ಅವರು ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳು ಇವೆ ಅದನ್ನು ಸದ್ಭಳಕೆ ಮಾಡಿಕೊಂಡು ಪ್ರತಿಯೊಬ್ಬ ಮಹಿಳೆಯೂ…

Read More

ಕನ್ನಯ್ಯ ಮುತ್ಯಾರ ೧೦೧ನೇ ಪುಣ್ಯಸ್ಮರಣೆ | ಮಾಜಿ ಜಿಪಂ ಸದಸ್ಯ ನರ್ಸಿಂಗ್ ಪ್ರಸಾದ ಅಭಿಮತ ಮೋರಟಗಿ: ಸಂತರು, ಶರಣರು, ಸತ್ ಪುರುಷರು, ನಡೆದಾಡಿದ ನಾಡು ನಮ್ಮದು ಬರದಲ್ಲಿ ಬಿತ್ತನೆ ಮಾಡುತ್ತಿರುವ ಸಂದರ್ಭದಲ್ಲಿ ಕೆರೆಯ ದಡದ ಮೇಲೆ ನಿಂತು ಕಂಬಳಿ ಬೀಸಿ ಮಳೆ ತಂದ ಕೀರ್ತಿ ಸಿದ್ದಿಪುರುಷ ಕನ್ನಯ್ಯ ಮುತ್ಯಾ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಜಿ. ಪಂ. ಸದಸ್ಯ ನರ್ಸಿಂಗ್ ಪ್ರಸಾದ ತಿವಾರಿ ಹೇಳಿದರು.ಗ್ರಾಮದಲ್ಲಿ ಗುರುವಾರ ರಾತ್ರಿ ಗ್ರಾಮದ ಆರಾಧ್ಯದೇವ ಶ್ರೀ ಕನ್ನಯ್ಯ ಮುತ್ಯಾ ಅವರ ೧೦೧ನೇ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ೧೧ ನೇ ವರ್ಷದ ಮಹಾಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿ ಶ್ರೀ ವೀರ ಮಲಕಾರಿಸಿದ್ದೇಶ್ವರ ಮಹಾತ್ಮೆ ನಾಟಕ ಅರ್ತಾರ್ಥ ತಾಯಿ ಮಗನ ಸಂವಾದ ನಾಟಕ ಉದ್ಘಾಟಿಸಿ ಅವರು ಮಾತನಾಡಿದರು.ಕನ್ನಯ್ಯ ಮುತ್ಯಾ ಅವರು ಒಬ್ಬ ಸಾಮಾನ್ಯ ವ್ಯಕ್ತಿಯಾಗಿದ್ದರು ಪರಮಾತ್ಮನಲ್ಲಿ ಭಕ್ತಿ ಶ್ರದ್ದೆಯಿಂದ ನಡೆದುಕೊಂಡು ಭಕ್ತರ ಮನೆಯಲ್ಲಿ ಮಾಟ ಮಂತ್ರ ಆದಲ್ಲಿ ಮಕ್ಕಳ ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಮ್ಮ ಭಕ್ತಿಯ ಮಂತ್ರಶಕ್ತಿಯಿಂದ ಭಂಡಾರ ಸಿಂಪಡಿಸಿ…

Read More

ದೇವರಹಿಪ್ಪರಗಿ: ಪಟ್ಟಣದ ಇಂಡಿ ರಸ್ತೆಯ ಹೆಸ್ಕಾಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಹನುಮಾನ ಮಂದಿರದ ಭೂಮಿಪೂಜೆಯನ್ನು ಎಇಇ ಗಂಗಾಧರ ಲೋಣಿ ನೆರವೇರಿಸಿದರು.ಪಟ್ಟಣದ ಹೆಸ್ಕಾಂ ಆವರಣದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಳ್ಳಲಿರುವ ಹನುಮಾನ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮೇಲ್ವಿಚಾರಕ ಶಿವಾನಂದ ಕೊಡಗೆ ಮಾತನಾಡಿ, ಹೆಸ್ಕಾಂ ಆವರಣದಲ್ಲಿ ಈಗೀರುವ ಹನುಮಾನ ದೇವಸ್ಥಾನ ಕಟ್ಟಡ ಹಳೆಯದು ಹಾಗೂ ಚಿಕ್ಕದಾಗಿದೆ. ಈಗ ೧೫ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಹನುಮಾನ ದೇವಸ್ಥಾನ ನಿರ್ಮಿಸಲು ಹೆಸ್ಕಾಂ ಸಿಬ್ಬಂದಿ ಯೋಜನೆ ರೂಪಿಸಿದ್ದಾರೆ. ಈ ಕಾರ್ಯದಲ್ಲಿ ಪಟ್ಟಣದ ಪ್ರಮುಖರು ಹಾಗೂ ಸಾರ್ವಜನಿಕರು ಸಹ ಕೈಜೋಡಿಸಿದ್ದು, ಈಗ ಭೂಮಿಪೂಜೆ ಜರುಗಿಸಿ ಕಟ್ಟಡ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ೨೦೨೫ರ ಹನುಮಾನ ಜಯಂತಿಯಂದು ದೇವಸ್ಥಾನ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.ಶಾಖಾಧಿಕಾರಿ ಅಶೋಕ ಕಂದಗಲ್ಲ, ಗುತ್ತಿಗೆದಾರರಾದ ವಸಂತ ನಾಡಗೌಡ, ಸಿದ್ದು ಪಾಟೀಲ, ಕಾಶೀನಾಥ ಹಿರೇಮಠ, ಸಿಬ್ಬಂದಿ ಚಿದಾನಂದ ಸುರಪೂರ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ, ಅಶೋಕ ಫಿರಂಗಿ, ಅಬ್ಬಾಸಲಿ ಅಗಸಿ, ಸುರೇಶ ನಡಗೇರಿ, ಹರೀಶ…

Read More

ವಿಜಯಪುರ: ಉದ್ಯಮಿ ಅಣ್ಣಾರಾಯ ಎಸ್. ಬಿರಾದಾರ ಆರಂಭಿಸಿದ ಪಂಚ-ಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಶನಿವಾರ ಚಾಲನೆ ನೀಡಿದರು.ಅವರು ಪಂಚ-ಗಂಗಾ ಒಣದ್ರಾಕ್ಷಿ ಸಂಸ್ಕರಣಾ ಘಟಕದ ಯಂತ್ರದಲ್ಲಿ ಒಣದ್ರಾಕ್ಷಿಯನ್ನು ಹಾಕುವ ಮೂಲಕ ಸಚಿವ ಎಂ. ಬಿ. ಪಾಟೀಲ ವಿಂಗಡಣೆ ಯಂತ್ರಕ್ಕೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಅಣ್ಣಾರಾಯ ಎಸ್. ಬಿರಾದಾರ, ನಿತೀನ ಎ. ಬಿರಾದಾರ, ವಿಠ್ಠಲ ಕಟಕದೊಂಡ, ಎಸ್.ಎಂ.ಪಾಟೀಲ ಗಣಿಹಾರ, ಪ್ರಕಾಶಗೌಡ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.ನಗರದ ಸೋಲಾಪುರ ರಸ್ತೆಯ ಯಶೋಧಾ ಆಸ್ಪತ್ರೆ ಹಿಂದೆ ಇರುವ ಒಣದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಇಂದು ಶನಿವಾರ ಈ ಕಾರ್ಯಕ್ರಮ ನಡೆಯಿತು.ಘಟಕದ ಕಾರ್ಯವನ್ನು ವೀಕ್ಷಿಸಿ, ಒಣದ್ರಾಕ್ಷಿ ಸಂಗ್ರಹ, ಸಂಸ್ಕರಣೆ, ಮಾರಾಟ ಹಾಗೂ ರಫ್ತು ಮಾಡುವ ಕುರಿತು ಮಾಹಿತಿ ಪಡೆದರು. ಅಲ್ಲದೇ, ಈ ಘಟಕ ಉತ್ತರೋತ್ತರವಾಗಿ ಅಭಿವೃದ್ಧಿಯಾಗಲಿ ಎಂದು ಅಣ್ಣಾರಾಯ ಎಸ್. ಬಿರಾದಾರ ಮತ್ತು ಅವರ ಪುತ್ರ ನಿತೀನ ಎ.ಬಿರಾದಾರ ಅವರಿಗೆ ಶುಭ ಕೋರಿದರು.ಈ ಸಂದರ್ಭದಲ್ಲಿ ವಿಜಯಪುರ ಜ್ಞಾಯೋಗಾಶ್ರಮದ ಶ್ರೀ ಬಸವಲಿಂಗ…

Read More

ಇಂಡಿ: ಪ್ರತಿ ವರ್ಷದಂತೆ ಈ ವರ್ಷವು ಕೂಡಾ ತಾಂಬಾ ಗ್ರಾಮದ ಆರಾಧ್ಯ ದೇವರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ದೇವಸ್ಥಾನ ಕಮಿಟಿ ವತಿಯಿಂದ ಮಾಹಾಶಿವರಾತ್ರಿ ಉತ್ಸವ ಜರಗಿತು, ಈ ಉತ್ಸವದ ಕೇಂದ್ರ ಬಿಂದು ಮಲ್ಲಿಕಾರ್ಜುನ ಕರ್ತೃ ಲಿಂಗಕ್ಕೆ ವೃದ್ರಾಭಿಷೇಕ ಹಾಗೂ ರಂಗೋಲಿಯಲ್ಲಿ ಶಿವನ ಚಿತ್ರ ಬಿಡಿಸಿ ನಂತರ ಬಂತನಾಳದ ಡಾ // ವೃಷಭಲಿಂಗ ಮಾಹಾಶಿವಯೋಗಿಗಳು ದೀಪ ಬೆಳಗಿದರು. ಶ್ರೀ ಗಳ ಆಶೀರ್ವಚನದೊಂದಿಗೆ ಈ ವರ್ಷದ ಮಲ್ಲಿಕಾರ್ಜುನ ಸ್ವಾಮಿ ಭಾವಚಿತ್ರ ಇರುವ ಕ್ಯಾಲೆಂಡರನ್ನು ಶ್ರೀ ಗಳು ಬಿಡುಗಡೆ ಮಾಡಿದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಶಿವರಾಜ್ ಕೆಂಗನಾಳ ಪ್ರಸ್ತಾವಿಕ ಮಾತನಾಡಿದರು,ಈ ಸಮಯದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಗೋಪಾಲ ಅವರಾಧಿ, ಉಪಾಧ್ಯಕ್ಷ ಸಿದ್ದು ದಿವಟಗಿ, ಸದಸ್ಯ ಮಂಜುನಾಥ ನಾವಿ, ನಾಗರಾಜ ಮಾಳಿ, ಸುಮಿತ ಕಂಬಾರ, ಸಿದ್ದರಾಯ ದಿವಟಗಿ, ಚಿದಾನಂದ ಕೆಂಗನಾಳ, ಸಾಗರ ಅವರಾಧಿ, ಸಂಜೀವ ಜೇವುರ, ಶಿಕ್ಷಕರಾದ ಅಡಿವೆಪ್ಪ ಸರಸಂಬಿ ಸರ್ , ಕೂಡಕ್ಕಲಗಿ ಸರ್, ವಗಮಂಡಿ ಸರ್, ಸೋಮನಿಂಗ ಸರ್ ತಾಂಬಾ…

Read More

ಇಂಡಿ: ವಿದ್ಯಾರ್ಥಿಗಳ ಕಲಿಕೆಯ ಜೊತೆಗೆ ಜೀವನರೂಪಿಸುವಲ್ಲಿ ಶಿಕ್ಷಕರು ಮಹತ್ವದ ಪ್ರಭಾವ ಬೀರುತ್ತಾರೆ. ಅವರು ಜ್ಞಾನ ಮತ್ತು ಮೌಲ್ಯಗಳನ್ನು ನೀಡಿ, ವಿದ್ಯಾರ್ಥಿಗಳ ಬದುಕನ್ನು ಸಂಸ್ಕಾರಯುತವನ್ನಾಗಿಸುತ್ತಾರೆ ಎಂದು ಶಾಸಕರ ಸಹೋದರ, ಶಿಕ್ಷಣ ಪ್ರೇಮಿ ಬಸವಂತರಾಯಗೌಡ ಪಾಟೀಲ ಹೇಳಿದರು.ಅವರು ತಾಲೂಕಿನ ಪಡನೂರ ಗ್ರಾಮದ ಶ್ರೀ ಚನ್ನಬಸವೇಶ್ವರ ವಿದ್ಯಾವರ್ಧಕ ಸಂಸ್ಥೆಯ ಶ್ರೀ ವ್ಹಿ ವೈ ಪಾಟೀಲ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡ ‘ಸಂಸ್ಕೃತಿ ಸೌರಭ’- ಶಾಲಾ ವಾರ್ಷಿಕೋತ್ಸವ ಹಾಗೂ 10ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಮುಖ್ಯ ಉಪನ್ಯಾಸಕರಾಗಿ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿದ್ಯಾರ್ಥಿಯ ವ್ಯಕ್ತಿತ್ವ ವಿಕಸನಕ್ಕೆ ಜ್ಞಾನ ಪೂರಕ. ಆದ್ದರಿಂದ ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ರೂಢಿಸಿಕೊಳ್ಳಬೇಕು. ವಿದ್ಯಾವಂತರಾಗಲು ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ವಿದ್ಯಾರ್ಥಿಗಳು ಜ್ಞಾನದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.ಮುಖ್ಯ ಅತಿಥಿಗಳಾಗಿ ಡಾ.ಗುರುಸಿದ್ದಯ್ಯ ಸ್ವಾಮಿಮಾತನಾಡಿ,ಬಡತನದಲ್ಲೇ ಹುಟ್ಟಿ ಬೆಳೆದ ಅಬ್ದುಲ್‌ ಕಲಾಂ, ಅಂಬೇಡ್ಕರ್‌, ಸರ್‌ ಎಂ ವಿಶ್ವೇಶ್ವರಯ್ಯ ಮತ್ತಿತರ ಮಹನೀಯರು ಪರಿಶ್ರಮ ಪಟ್ಟು ಓದಿ ದೇಶಕ್ಕೆ ಕೊಡುಗೆ ನೀಡಿದ್ದಾರೆ.…

Read More

ಬಸವನಬಾಗೇವಾಡಿ: ಯಾರಲ್ಲಿ ಭಕ್ತಿ ಇರುವದೋ ಅವರಲ್ಲಿ ಶ್ರದ್ಧಾ-ಮನೋಭಾವ, ಸಾಮರಸ್ಯ, ಮಾನವೀಯ ಮೌಲ್ಯಗಳು ಬೆಳೆಯುತ್ತವೆ. ಭಕ್ತಿಯಲ್ಲಿ ಇಂತಹ ಶಕ್ತಿಯಿದೆ ಎಂದು ಜವಳಿ, ಸಕ್ಕರೆ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ತೆಲಗಿ ರಸ್ತೆಯಲ್ಲಿರುವ ೨೨೦ ಕೆವ್ಹಿ ಸ್ಟೇಶನ್ ಎದುರಿಗೆ ಇರುವ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾಮಹೋತ್ಸವ ಹಾಗೂ ಮಹಾಶಿವರಾತ್ರಿ ಮಹೋತ್ಸವದಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಯೋಗಿ ಸಿದ್ದರಾಮೇಶ್ವರ ಮಹಾತ್ಮೆ ಎಂಬ ಸುಂದರ ಭಕ್ತಿ ಪ್ರಧಾನ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಭಗವಂತನಲ್ಲಿ ಅಚಲವಾದ ಭಕ್ತಿಯನ್ನು ಇಟ್ಟು ನಡೆದರೆ ನಮ್ಮ ಜೀವನದಲ್ಲಿ ನಿಷ್ಠೆ-ಪ್ರಾಮಾಣಿಕತೆ, ಮಾನವೀಯ ಮೌಲ್ಯಗಳು ಮೈಗೂಡಲು ಸಾಧ್ಯ. ಶ್ರೀಶೈಲದಲ್ಲಿ ಶಕ್ತಿ ಇದೆ ಎಂಬುವದಕ್ಕೆ ಈ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅಪಾರ ಸಂಖ್ಯೆ ಭಕ್ತರು ಮಹಾಶಿವರಾತ್ರಿಯಂದು ಆಗಮಿಸಿ ಮಲ್ಲಿಕಾರ್ಜುನ ದೇವರ ದರ್ಶನ ಪಡೆಯುತ್ತಿರುವುದೇ ಸಾಕ್ಷಿ ಎಂದರೆ ತಪ್ಪಾಗಲಾರದು. ಪಟ್ಟಣದ ವಿಜಯಪುರ ರಸ್ತೆ, ಮುದ್ದೇಬಿಹಾಳ ರಸ್ತೆ, ನಿಡಗುಂದಿ ರಸ್ತೆಯಲ್ಲಿ ಸದಾ ಜನರ ಸಂಚಾರ ನಿತ್ಯ ಕಂಡುಬರುತ್ತದೆ. ಆದರೆ ತೆಲಗಿ ರಸ್ತೆಯಲ್ಲಿ…

Read More

ಬಸವನಬಾಗೇವಾಡಿ: ಮಹಾತ್ಮರ ಸತ್ಸಂಗದಲ್ಲಿ ನಡೆದರೆ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ. ಆಧ್ಯಾತ್ಮದಿಂದ ಜೀವನದಲ್ಲಿ ಶಾಂತಿ-ನೆಮ್ಮದಿ ಸಿಗುತ್ತದೆ ಎಂದು ಬುದ್ನಿ ಸಿದ್ದಾರೂಢಮಠದ ಸಿದ್ದಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಸಮೀಪದ ಜೈನಾಪೂರ ಗ್ರಾಮದ ಪವಾರ ಬಸವೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿಯಂಗವಾಗಿ ಶುಕ್ರವಾರ ರಾತ್ರಿ ಹಮ್ಮಿಕೊಂಡಿದ್ದ ಶಿವಭಜನೆ ಜಾಗರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರೆ ಗುರುಗಳ ಆಶೀರ್ವಾದ ಪಡೆದುಕೊಳ್ಳುವ ಭಾಗ್ಯ ಸಿಗುತ್ತದೆ. ಪಾಪ ನಶಿಸಿ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ. ಪ್ರತಿ ತಿಂಗಳು ಶಿವರಾತ್ರಿ ಇರುತ್ತದೆ. ವರ್ಷದಲ್ಲಿ ಒಂದು ಮಾತ್ರ ಮಹಾಶಿವರಾತ್ರಿ ಇರುತ್ತದೆ. ಈ ಮಹಾಶಿವರಾತ್ರಿಯಂದು ಇಡೀ ರಾತ್ರಿ ಶಿವನಾಮಸ್ಮರಣೆ ಮಾಡಿದರೆ ನಮ್ಮ ಭವ ಕಷ್ಟಗಳನ್ನು ಶಿವ ದೂರ ಮಾಡಿ ಜೀವನದಲ್ಲಿ ಸುಖ-ನೆಮ್ಮದಿ ನೀಡುತ್ತಾನೆ ಎಂದರು.ಯಲಗೋಡ ಪುರದಾಳ ಮಠದ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಶಿವಪಥವ ಅರಿಯಬೇಕಾದರೆ ಗುರು ಪಥವ ಅಗತ್ಯವಿದೆ. ಗುರು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಅಂತರಂಗ ಸಾಧನೆಯಿಂದ ಜ್ಞಾನ ಪಡೆದುಕೊಳ್ಳಬಹುದು. ಮನುಷ್ಯ ದುರ್ಬಲನಾಗದೇ ಸಬಲನಾಗಿ ಮನುಷ್ಯ ಜೀವನವನ್ನು ಪಾವನ ಮಾಡಿಕೊಳ್ಳುವ ಕಡೆಗೆ ಗಮನ…

Read More