ವಿಜಯಪುರ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ವಿಜಯಪುರ (ಕೆ.ಎ.ಎಸ್.)ಶ್ರೀಮತಿ ಶ್ವೇತಾ ಮೋಹನ ಬಿಡೀಕರ ಹೇಳಿದರು.
ಮಹಿಳಾ ಸಬಲಿಕರಣ ಸಮಿತಿ ವತಿಯಿಂದ ಸರಕಾರಿ ಪಾಲಿಟೆಕ್ನಿಕ್ ವಿಜಯಪುರದ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಸಸಿಗೆ ನೀರುವುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು,
ಮಹಿಳೆಯೂ ಮನೆಯಿಂದ ಹೊರಬಂದು ಸಾಧನೆಯತ್ತ ದಾಪುಗಾಲಿಡುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು. ಇನ್ನಷ್ಟು ಮಹಿಳೆಯರು ಅಡುಗೆ ಮನೆಯಿಂದ ಹೊರ ಬರಬೇಕು. ಜಗತ್ತು ತುಂಬಾ ವಿಶಾಲವಾಗಿದೆ ಎಲ್ಲ ಮಹಿಳೆಯರು ತಮ್ಮದೇ ವೈಶೀಷ್ಠತೆಯನ್ನು ಹೊಂದಿರುತ್ತಾರೆ ಅದನ್ನು ಗುರುತಿಸಿಕೊಂಡು ಸಾಧಿಸಿ ಜಗತ್ತಿಗೆ ಮಾದರಿಯಾಗಬೇಕೆಂದರು.
ವಿಜಯಪುರ ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ (ಕೆ.ಎ.ಎಸ್) ಶ್ರೀಮತಿ ಕವಿತಾ ಆರ್. ಅವರು ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳು ಇವೆ ಅದನ್ನು ಸದ್ಭಳಕೆ ಮಾಡಿಕೊಂಡು ಪ್ರತಿಯೊಬ್ಬ ಮಹಿಳೆಯೂ ಸ್ವಾವಲಂಬಿಯಾಗಿ ಬದಕಬೇಕೆಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಎಸ್.ಎಸ್. ದೇಸಾಯಿ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಸುಸ್ಮಾ ದೇಸಾಯಿ, ಪ್ರಾಚಾರ್ಯರರಾದ ಶ್ರೀ ಸಿದ್ಧೇಶ್ವರ ಕಾನೂನು ಮಹಿಳಾ ವಿದ್ಯಾಲಯ, ವಿಜಯಪುರ ಮತ್ತು ಶ್ರೀಮತಿ ಸರಸ್ವತಿ ಎಸ್.ನರಸಪ್ಪನ್ನವರ, ವಿಜಯಪುರದ ಪಿ.ಎಸ್.ಐ. ಮಹಿಳಾ ಪೊಲೀಸ್ ಠಾಣೆ ಗಾಂಧಿ ಚೌಕ್, ಈ ಕಾರ್ಯಕ್ರಮದ ಸಂಯೋಜಕರು ಹಾಗೂ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ರಾ. ಸನದಿ ಇವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಉಪನ್ಯಾಸಕ ಸಿಬ್ಬಂಧಿ ವರ್ಗ ಹಾಗೂ ಆಡಳಿತ ವರ್ಗದ ಸದಸ್ಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

