ದೇವರಹಿಪ್ಪರಗಿ: ಪಟ್ಟಣದ ಇಂಡಿ ರಸ್ತೆಯ ಹೆಸ್ಕಾಂ ಆವರಣದಲ್ಲಿ ನಿರ್ಮಾಣಗೊಳ್ಳಲಿರುವ ಹನುಮಾನ ಮಂದಿರದ ಭೂಮಿಪೂಜೆಯನ್ನು ಎಇಇ ಗಂಗಾಧರ ಲೋಣಿ ನೆರವೇರಿಸಿದರು.
ಪಟ್ಟಣದ ಹೆಸ್ಕಾಂ ಆವರಣದಲ್ಲಿ ಶುಕ್ರವಾರ ನೂತನವಾಗಿ ನಿರ್ಮಾಣಗೊಳ್ಳಲಿರುವ ಹನುಮಾನ ದೇವಸ್ಥಾನಕ್ಕೆ ಭೂಮಿಪೂಜೆ ನೆರವೇರಿಸಿ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮೇಲ್ವಿಚಾರಕ ಶಿವಾನಂದ ಕೊಡಗೆ ಮಾತನಾಡಿ, ಹೆಸ್ಕಾಂ ಆವರಣದಲ್ಲಿ ಈಗೀರುವ ಹನುಮಾನ ದೇವಸ್ಥಾನ ಕಟ್ಟಡ ಹಳೆಯದು ಹಾಗೂ ಚಿಕ್ಕದಾಗಿದೆ. ಈಗ ೧೫ ಲಕ್ಷ ರೂ.ಗಳ ವೆಚ್ಚದಲ್ಲಿ ನೂತನ ಹನುಮಾನ ದೇವಸ್ಥಾನ ನಿರ್ಮಿಸಲು ಹೆಸ್ಕಾಂ ಸಿಬ್ಬಂದಿ ಯೋಜನೆ ರೂಪಿಸಿದ್ದಾರೆ. ಈ ಕಾರ್ಯದಲ್ಲಿ ಪಟ್ಟಣದ ಪ್ರಮುಖರು ಹಾಗೂ ಸಾರ್ವಜನಿಕರು ಸಹ ಕೈಜೋಡಿಸಿದ್ದು, ಈಗ ಭೂಮಿಪೂಜೆ ಜರುಗಿಸಿ ಕಟ್ಟಡ ಕಾರ್ಯಕ್ಕೆ ಚಾಲನೆ ನೀಡಲಾಗುತ್ತಿದೆ. ೨೦೨೫ರ ಹನುಮಾನ ಜಯಂತಿಯಂದು ದೇವಸ್ಥಾನ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಶಾಖಾಧಿಕಾರಿ ಅಶೋಕ ಕಂದಗಲ್ಲ, ಗುತ್ತಿಗೆದಾರರಾದ ವಸಂತ ನಾಡಗೌಡ, ಸಿದ್ದು ಪಾಟೀಲ, ಕಾಶೀನಾಥ ಹಿರೇಮಠ, ಸಿಬ್ಬಂದಿ ಚಿದಾನಂದ ಸುರಪೂರ, ದೇವೇಂದ್ರ ಯಾಳಗಿ, ಸದಾಶಿವ ನಿಂಗಪ್ಪ, ಅಶೋಕ ಫಿರಂಗಿ, ಅಬ್ಬಾಸಲಿ ಅಗಸಿ, ಸುರೇಶ ನಡಗೇರಿ, ಹರೀಶ ಬಿರಾದಾರ, ಸಂತೋಷ ವಾಲೀಕಾರ, ಪ್ರಭುಗೌಡ ಬಗಲಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

