Author: editor.udayarashmi@gmail.com

ವಿಜಯಪುರ: ಚಡಚಣ ತಾಲೂಕಿನ ಧೂಳಖೇಡ ಗ್ರಾಮದ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಸೌಹಾರ್ದ ಬ್ಯಾಂಕಿನಲ್ಲಿ ನಡೆದ ಕಳ್ಳತನ ಪ್ರಕರಣವನ್ನು ಝಳಕಿ ಪೊಲೀಸರು ಭೇದಿಸಿದ್ದು, ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ.ಈ ಕುರಿತು ಝಳಕಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ಪಿ ಋಷಿಕೇಶ ಸೋನಾವಣೆ, ಫೆ. 28 ರಂದು ಮಧ್ಯರಾತ್ರಿ ಸೌಹಾರ್ದ ಬ್ಯಾಂಕ್ ನಲ್ಲಿದ್ದ ರೂ. 19.45 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಝಳಕಿ ಪೊಲೀಸರು 6 ಜನ ಆರೋಪಿಗಳನ್ನು ಕಳುವಾದ ಹಣ, ಕಳ್ಳತನ ಮಾಡಲು ಬಳಸಿದ ವಾಹನಗಳು ಹಾಗೂ ಮೊಬೈಲ್ ಗಳು ಸೇರಿದಂತೆ ಒಟ್ಟು ರೂ. 27.15 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಈ ಸಂಬಂಧ ಮಹಾರಾಷ್ಟ್ರದ ಸೋಲಾಪುರ ತಾಲೂಕಿನ ಕುರಗೋಟ ಗ್ರಾಮದ ಮಲ್ಲಿಕಾರ್ಜುನ ಮುಕಿಂದ ಹೊನಮಾನೆ(29), ಲತೀಫ್ ಲಾಲಸಾಬ ಮಕಾನದಾರ(27), ಮಾಳಪ್ಪ ಗಂಗಾಧರ ಸಲಗರೆ(24), ಬಾಗಲಕೋಟೆಯ ನವನಗರದ ನಿತೇಶ ಸದಾನಂದ ನೀಲವಣಿ(23), ಹುಲಗಪ್ಪ ರಂಗಪ್ಪ ಪಾತ್ರೋಟ(26), ಅಬ್ದುಲ್ ಮೈನುದ್ದೀನ್ ಚೀನಿ(27) ಎಂಬುವರನ್ನು ಬಂಧಿಸಿದ್ದಾರೆ.ಈ ಆರೋಪಿಗಳ ವಿರುದ್ಧ…

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಆರ್ಥಿಕ ಸಹಾಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಸಮಿಪ ನಿರ್ಮಿಸಲಾಗುತ್ತಿರುವ ಎನ್.ಸಿ.ಸಿ. ನೂತನ ಕಟ್ಟಡಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರವಿವಾರ ಭೂಮಿಪೂಜೆ ನೆರವೇರಿಸಿದರು.ಎನ್.ಸಿ.ಸಿಗೆ ಸೇರಿದ ಐದು ಎಕರೆ ಪ್ರದೇಶದಲ್ಲಿ 16000 ಚದುರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಒಂದು ಅಂತಸ್ತಿನ ಬಿಲ್ಡಿಂಗ್ ಇದಾಗಿದೆ. ಒಂಬತ್ತು ತಿಂಗಳಲ್ಲಿ ಈ ಕಟ್ಟಡ ನಿರ್ಮಿಸುವ ಗುರಿಯಿದೆ.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಕನಲ್ ಗಿರೀಶ್ ಶಿಂಧೆ, ಸಬ್ ಮೇಜರ್ ಜಿ. ಎನ್. ಕುರಂದಳೆ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಸ್ಥೆಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಎಂಜಿನಿಯರ್ ಗಳಾದ ಆರ್. ಎಸ್. ಜಿರಲಿ, ಯು. ಎನ್. ಕರಡಿ, ಉಪಮೇಯರ್ ದಿನೇಶ ಹಳ್ಳಿ, ಡಾ. ಮಹಾಂತೇಶ ಬಿರಾದಾರ, ಸುರೇಶ ಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.

Read More

ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅಧಿಕಾರಿಗಳಿಗೆ ಸೂಚನೆ ವಿಜಯಪುರ: ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ರವಿವಾರ ನಗರದ ಐತಿಹಾಸಿಕ ಬೇಗಂ ತಾಲಾಬ್ ಗೆ ಭೇಟಿ ನೀಡಿ ಆದಿಲ್ ಶಾಹಿ ಕಾಲದಲ್ಲಿ ನಗರಕ್ಕೆ ನೀರು ಪೂರೈಸಲಾಗುತ್ತಿದ್ದ ವ್ಯವಸ್ಥೆಯನ್ನು ಪರಿಶೀಲಿಸಿದರು.ಬೆಳಿಗ್ಗೆ ಬೇಗಂ ತಾಲಾಬ್ ಕೆರೆಗೆ ಭೇಟಿ ನೀಡಿದ ಅವರು, ಅಲ್ಲಿ 400 ವರ್ಷಗಳ ಹಿಂದೆ ಆದಿಲ್ ಶಾಹಿ ಕಾಲದಲ್ಲಿ ಪೈಪಲೈನ್ ಮೂಲಕ ನಗರದ ಸುಮಾರು 10 ಲಕ್ಷ ಜನಸಂಖ್ಯೆಗೆ ಕುಡಿಯಲು ನೀರು ಪೂರೈಸಲು ನಿರ್ಮಿಸಲಾಗಿರುವ ವ್ಯವಸ್ಥೆಯನ್ನು ವೀಕ್ಷಿಸಿ ಪರಿಶೀಲನೆ ನಡೆಸಿದರು. ಗಚ್ಚು ತಂತ್ರಜ್ಞಾನ ಬಳಸಿ ತಯಾರಿಸಲಾದ ಡೆಲಿವರಿ ಚೇಂಬರ್ ಮತ್ತು ನೀರು ಸ್ಥಗಿತಗೊಳಿಸಲು ಅಳವಡಿಸಲಾಗಿರುವ ಸಾಗವಾನಿ ಕಟ್ಟಿಗೆಯಿಂದ ನಿರ್ಮಿಸಲಾಗಿರುವ ಗೇಟು ವಾಲ್ವ್ ವೀಕ್ಷಿಸಿದರು. ಅಲ್ಲಲ್ಲಿ ತುಂಬಿರುವ ಹೂಳನ್ನು ತೆಗೆದು ಸ್ವಚ್ಚಗೊಳಿಸಿ ದುರಸ್ಥಿ ಮಾಡುವಂತೆ ಸಚಿವರು ಪೌರಾಯುಕ್ತರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಸಚಿವರು ಆದಿಲ್ ಶಾಹಿ ಕಾಲದಲ್ಲಿ ಗುರುತ್ವಾಕರ್ಷಣ ಶಕ್ತಿಯ…

Read More

ಮೂಡಿಸುವ ಮತ್ತು ಜಗತ್ತಿನ ನಾನಾ ದಾಖಲೆ ಪುಟಗಳಲ್ಲಿ ಸೇರಿಸುವ ವಿಶ್ವದ ಮೊದಲ ವಿನೂತನ ಕಾರ್ಯಕ್ರಮಕ್ಕೆ ಸಚಿವ ಎಂ. ಬಿ. ಪಾಟೀಲ ಅವರಿಂದ ಚಾಲನೆ ವಿಜಯಪುರ: ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ 1500 ವಿದ್ಯಾರ್ಥಿಗಳು ಸ್ವಾಸ್ಷ್ಟ ಸಂತುಲನ ರಂಗೋಲಿ ಮಹೋತ್ಸವದಲ್ಲಿ ಪಾಲ್ಗೋಂಡು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ 250 ರಂಗೋಲಿ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದರು. ತಲಾ ಐದಾರು ವೈದ್ಯಕೀಯ ವಿದ್ಯಾರ್ಥಿಗಳು ತಂಡದ ರೂಪದಲ್ಲಿ ತಮ್ಮ ವೈದ್ಯಕೀಯ ಪಠ್ಯಕ್ರಮಕ್ಕೆ ಸಂಬಂಧಿಸಿದ ರಂಗೋಲಿ ಚಿತ್ರಗಳನ್ನು ಬಿಡಿಸಿದರು. ಬಿ.ಎಲ್.ಡಿ.ಇ ವಿವಿಯ 24 ವಿಭಾಗಗಳ ವಿದ್ಯಾರ್ಥಿಗಳಿಗೆ ಕಾಲೇಜಿನ ಶಿಕ್ಷಕರು, 40 ಜನ ಮಾರ್ಗದರ್ಶಕರು ಮತ್ತು 20 ಜನ ಮೇಲ್ವಿಚಾರಕರು ಬನ್ನೆಲುಬಾಗಿ ನಿಂತಿದ್ದರು. ಒಟ್ಟು 50 ಸಾವಿರ ಚದುರ ಅಡಿ ಪ್ರದೇಶದಲ್ಲಿ 10 ಟನ್ ರಂಗೋಲಿ ಬಳಕೆಯಾಗುತ್ತಿದೆ. 10 ಅಡಿ ಉದ್ದ, 12 ಅಡಿ ಅಗಲ ಅಳತೆಯ 250 ರಂಗೋಲಿ ಚಿತ್ರಗಳನ್ನು ಬಿಡಿಸಲಾಯಿತು.ಮಾನವನ…

Read More

ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮನವಿ ವಿಜಯಪುರ: ಭೀಕರ ಬರಗಾಲ ಹಾಗೂ ನೀರಿನ ಅಭಾವವಿರುವ ಕಾರಣ ಈ ಬಾರಿ ಹೋಳಿ ಹಬ್ಬದ ಪ್ರಯುಕ್ತ ಸಾರ್ವಜನಿಕವಾಗಿ ಬಣ್ಣದಾಟ ಆಡುವುದನ್ನು ಬಿಟ್ಟು ಮನೆಗಷ್ಟೇ ಬಣ್ಣದಾಟ ಸೀಮಿತಗೊಳಿಸುವುದು ಒಳಿತು ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಮನವಿ ಮಾಡಿಕೊಂಡಿದ್ದಾರೆ.ಈ ಕುರಿತು ಸೋಮವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಹೋಳಿ ಹಬ್ಬ ಎಂದರೆ ಅದರ ಸಂಭ್ರಮವೇ ಬೇರೆ, ಪ್ರತಿ ವರ್ಷ ಅನೇಕ ಸಂಘ-ಸಂಸ್ಥೆಗಳು ರಂಗ ಹೋಲಿಕ ಸೇರಿದಂತೆ ಹಲವಾರು ರೀತಿಯ ಸಾರ್ವಜನಿಕ ಬಣ್ಣದಾಟದ ಕಾರ್ಯಕ್ರಮ ಏರ್ಪಡಿಸುತ್ತಾರೆ, ಯುವಜನತೆ ಸಕ್ರೀಯವಾಗಿ ಈ ಹಬ್ಬದಾಟದಲ್ಲಿ ತೊಡಗುತ್ತಾರೆ, ಆದರೆ ಕಳೆದೆರಡು ವರ್ಷಗಳಿಂದ ವರುಣನ ಕೃಪೆಯಾಗಿಲ್ಲ, ರೈತರು ಸಹ ತೊಂದರೆಯಲ್ಲಿದ್ದಾರೆ, ಜಲಮೂಲಗಳು ಅಷ್ಟೇ ಏಕೆ ಅಂತರ್ಜಲ ಸಹ ಸೊರಗುವ ಹಂತಕ್ಕೆ ತಲುಪಿದೆ. ಇಂತಹ ಸಂದರ್ಭದಲ್ಲಿ ಸಾರ್ವಜನಿಕ ಬಣ್ಣದಾಟದ ಆಚರಣೆಗೆ ಈ ಬಾರಿ ಬ್ರೇಕ್ ಹಾಕಿದರೆ ನೀರಿನ ಮಿತವ್ಯಯ ಸಾಧಿಸಬಹುದಾಗಿದೆ, ಸಂಘ-ಸಂಸ್ಥೆಗಳು ಸಹ…

Read More

ಬೆಂಗಳೂರು: ಸ್ಫೋಟದ ಮೂಲಕ ಬೆಂಗಳೂರಿನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದ ರಾಮೇಶ್ವರಂ ಕೆಫೆ ಕೇವಲ ಒಂದು ವಾರದಲ್ಲೇ ಮತ್ತೆ ಪುನಾರಂಭ ಮಾಡಿದ್ದು, ಈ ಬಾರಿ ಸಕಲ ಭದ್ರತಾ ಸಿದ್ದತೆಗಳೊಂದಿಗೆ ಕೆಫೆ ರೀ ಓಪನ್ ಆಗಿದೆ.ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆ ರೀಓಪನ್ ಆಗಿದ್ದು, ಸ್ಫೋಟ ಸಂಭವಿಸಿದ ಬಳಿಕ ಬಂದ್‌‌ ಆಗಿದ್ದ ರಾಮೇಶ್ವರಂ ಕೆಫೆಯಲ್ಲಿ ಪುನಾರಂಭವಾಗಿದ್ದು, ಹೋಮ-ಹವನ ಪೂಜಾ ಕಾರ್ಯಗಳು ನೆರವೇರಿದ್ದವು. ಶನಿವಾರದಿಂದ ಕೆಫೆ ರೀಓಪನ್‌ ಸರ್ವೀಸ್ ಶುರು ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ರಾಮೇಶ್ವರಂ ಕೆಫೆ ಶುರುವಾಗಿದೆ.*ಭದ್ರತೆ ಹೆಚ್ಚಳ*ನಿವೃತ್ತ ಆರ್ಮಿ ಆಫೀಸರ್‌‌ಗಳಿಂದ ಕೆಫೆಗೆ ಭದ್ರತೆ ನೀಡಲಾಗಿದೆ. 2 ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆಗೊಳಪಡಿಸಲಾಗುತ್ತಿದೆ. ಜನರ ಮೇಲೆ ನಿಗಾ ಇಡಲು 2 ವಾಚ್‌ ಡಾಗ್ಸ್, ಎಲ್ಲಾ ಬ್ರಾಂಚ್‌‌ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.*ಕೆಫೆಯ ಪ್ರವೇಶದ್ವಾರದಲ್ಲಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಜಲಾಗಿದ್ದು, ಭದ್ರತೆಗೆ ಇಬ್ಬರು ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ. ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆ ಮಾಡಲಾಗುತ್ತಿದ್ದು, ಜನರ ಮೇಲೆ ನಿಗಾ…

Read More

ಅನಾಮಧೇಯ ಪತ್ರ ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆ | ಹನುಮಾನ ದೇಗುಲದಲ್ಲಿ ಮತ್ತೊಂದು ಪತ್ರ ಪತ್ತೆ |ತೀವ್ರ ತನಿಖೆ ಚಿಕ್ಕೋಡಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಹಸಿರಾಗಿರುವಂತೆಯೇ ಇತ್ತ ರಾಮಮಂದಿರ ಸ್ಫೋಟಿಸುವುದಾಗಿ ಹೇಳಿ ಬೆದರಿಕೆ ಪತ್ರ ಲಭಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಚಿಕ್ಕೋಡಿಯ ನಿಪ್ಪಾಣಿ ನಗರದ ರಾಮ ಮಂದಿರ ಸ್ಪೋಟಿಸುವುದಾಗಿ ಅನಾಮಧೇಯ ಪತ್ರವೊಂದು ದೇವಸ್ಥಾನದ ಗರ್ಭಗುಡಿಯಲ್ಲಿ ಪತ್ತೆಯಾಗಿದೆ. ನಿಪ್ಪಾಣಿ ನಗರದ ಶ್ರೀರಾಮ ಮಂದಿರದಲ್ಲಿ ಫೆ. 7 ರಂದು ಹಿಂದಿ ಭಾಷೆಯಲ್ಲಿ ಬರೆದ ಪತ್ರ ಪತ್ತೆಯಾಗಿದೆ. ಇದಲ್ಲದೆ ಫೆ.10 ರಂದು ಹನುಮಾನ ದೇವಸ್ಥಾನದಲ್ಲಿ ಮತ್ತೊಂದು ಪತ್ರ ಪತ್ತೆಯಾಗಿದೆ.ಇದರಿಂದ ಗಡಿ ಭಾಗದಲ್ಲಿ ಆತಂಕ ಸೃಷ್ಟಿಯಾಗಿದ್ದು. ಪೊಲೀಸರು ತೀವ್ರ ಎಚ್ಚರಿಕೆ ವಹಿಸಿದ್ದಾರೆ. ದೇವಸ್ಥಾನ ಬಳಿ ಹೆಚ್ಚಿನ ಪೊಲೀಸ್ ಪಡೆ ನಿಯೋಜಿಸಲಾಗಿದ್ದು ಸಿಸಿಟಿವಿ ಅಳವಡಿಸಲಾಗಿದೆ.ಪತ್ರದಲ್ಲೇನಿದೆ?ಪತ್ರದಲ್ಲಿ ‘ಅಲ್ಲಾಹು ಅಕ್ಬರ್’ ಎಂಬ ಬರಹ ಇದೆ ಎನ್ನಲಾಗಿದೆ. “ನಿಮ್ಮ ರಾಮಮಂದಿರ ಸ್ಫೋಟಿಸುತ್ತೇವೆ. ದೊಡ್ಡ ಪ್ರಮಾಣದಲ್ಲೇ ಸ್ಫೋಟಿಸುತ್ತೇವೆ, ಸುಧಾರಿಸಿಕೊಳ್ಳಿ” ಅಂತ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಫೆಬ್ರವರಿ 29 ಹಾಗೂ 28ರ ದಿನಾಂಕದಲ್ಲಿ ಪತ್ರ…

Read More

ನಿವರಗಿಯಲ್ಲಿ ಸಂಭ್ರಮದ ಕಳಸಾರೋಹಣ ಕಾರ್ಯಕ್ರಮ ಚಡಚಣ: ಸಮೀಪದ ನಿವರಗಿಯ ಗ್ರಾಮ ದೇವ ಶ್ರೀ ಸಂಗಮೇಶ್ವರ ದೇವಾಸ್ಥಾನದ ನೂತನ ಗೋಪುರಕ್ಕೆ ಕಳಸಾರೋಹಣ ಶನಿವಾರದಂದು ಸಂಭ್ರಮದಿಂದ ಜರುಗಿತು. ಬೆಳಗ್ಗೆಯಿಂದ ಗ್ರಾಮದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.ನೂತನ ಕಳಸಾರೋಹಣವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಮೆರವಣಿಗೆಯ ರಸ್ತೆಯುದ್ಧಕ್ಕೂ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯ ವೈಭಗಳೊಂದಿಗೆ ಮಹಿಳೆಯರು ಹಾಡುಗಳನ್ನು ಹಾಡುತ್ತ ಕುಂಭ ಹೊತ್ತ ಮಹಿಳೆಯರ ದಂಡು ಹೀಗೆ ಅತ್ಯಂತ ವಿಜೃಂಭಣೆಯಿಂದ ಕಾರ್ಯಕ್ರಮ ನೆರವೇರಿತು.ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಾರಜೋಳ, ಕಾತ್ರಾಳದ ಜ್ಞಾನಯೋಗಾಶ್ರಮದ ಅಮೃತಾನಂದ ಮಹಾಸ್ವಾಮಿಗಳು ಮಾತನಾಡುತ್ತ. ಗ್ರಾಮದಲ್ಲಿಯೂ ದೇವರ ಆರಾಧನೆಯಿಂದ ದುಷ್ಟಶಕ್ತಿಗಳು ದೂರವಾಗಿ, ಶಾಂತಿ ಸಮೃದ್ಧಿ ನೆಲೆಸಲು ಸಾಧ್ಯವಾಗಿದೆ. ಭೌತಿಕ ಸಂಪತ್ತು ಶಾಸ್ವತವಲ್ಲ, ಹುಟ್ಟಿರುವ ಬದುಕು ಶಾಶ್ವತವಲ್ಲ, ಆದರೆ ಸಂಸ್ಕಾರ ಸಂಸ್ಕೃತಿಯಿಂದ ಮಾತ್ರ ಮನುಷ್ಯನ ಜೀವನ ಉನ್ನತಿ ಹೊಂದಲು ಸಾಧ್ಯ. ಸದ್ಗುಣ ಸಚ್ಚಾರಿತ್ರ್ಯದಿಂದ ಕೂಡಿದ ಬದುಕು ಮುಕ್ತಿಗೆ ದಾರಿ ನೀಡಲಿದೆ ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ಪ್ರಾಧಾನ್ಯತೆ ಹೆಚ್ಚಿದೆ. ಸನ್ಮಾರ್ಗದಲ್ಲಿ ನಡೆಯುವ…

Read More

ವಿಜಯಪುರ: ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ, ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ ಎಂದು ಉಪವಿಭಾಗಾಧಿಕಾರಿಗಳು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳು ವಿಜಯಪುರ (ಕೆ.ಎ.ಎಸ್.)ಶ್ರೀಮತಿ ಶ್ವೇತಾ ಮೋಹನ ಬಿಡೀಕರ ಹೇಳಿದರು.ಮಹಿಳಾ ಸಬಲಿಕರಣ ಸಮಿತಿ ವತಿಯಿಂದ ಸರಕಾರಿ ಪಾಲಿಟೆಕ್ನಿಕ್ ವಿಜಯಪುರದ ಸಂಸ್ಥೆಯಲ್ಲಿ ಮಹಿಳಾ ದಿನಾಚರಣೆ ಹಮ್ಮಿಕೊಂಡ ಸಂದರ್ಭದಲ್ಲಿ ಅವರು ಸಸಿಗೆ ನೀರುವುಣಿಸುವುದರ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು,ಮಹಿಳೆಯೂ ಮನೆಯಿಂದ ಹೊರಬಂದು ಸಾಧನೆಯತ್ತ ದಾಪುಗಾಲಿಡುತ್ತಿರುವುದು ನಿಜಕ್ಕೂ ಶ್ಲಾಘನೀಯವೆಂದರು. ಇನ್ನಷ್ಟು ಮಹಿಳೆಯರು ಅಡುಗೆ ಮನೆಯಿಂದ ಹೊರ ಬರಬೇಕು. ಜಗತ್ತು ತುಂಬಾ ವಿಶಾಲವಾಗಿದೆ ಎಲ್ಲ ಮಹಿಳೆಯರು ತಮ್ಮದೇ ವೈಶೀಷ್ಠತೆಯನ್ನು ಹೊಂದಿರುತ್ತಾರೆ ಅದನ್ನು ಗುರುತಿಸಿಕೊಂಡು ಸಾಧಿಸಿ ಜಗತ್ತಿಗೆ ಮಾದರಿಯಾಗಬೇಕೆಂದರು.ವಿಜಯಪುರ ತಹಶೀಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳಾದ (ಕೆ.ಎ.ಎಸ್) ಶ್ರೀಮತಿ ಕವಿತಾ ಆರ್. ಅವರು ಮಾತನಾಡಿ, ಮಹಿಳೆಯರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳು ಇವೆ ಅದನ್ನು ಸದ್ಭಳಕೆ ಮಾಡಿಕೊಂಡು ಪ್ರತಿಯೊಬ್ಬ ಮಹಿಳೆಯೂ…

Read More