ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಆರ್ಥಿಕ ಸಹಾಯದಲ್ಲಿ ಜಿಲ್ಲಾ ಕೇಂದ್ರ ಕಾರಾಗೃಹ ಸಮಿಪ ನಿರ್ಮಿಸಲಾಗುತ್ತಿರುವ ಎನ್.ಸಿ.ಸಿ. ನೂತನ ಕಟ್ಟಡಕ್ಕೆ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ರವಿವಾರ ಭೂಮಿಪೂಜೆ ನೆರವೇರಿಸಿದರು.
ಎನ್.ಸಿ.ಸಿಗೆ ಸೇರಿದ ಐದು ಎಕರೆ ಪ್ರದೇಶದಲ್ಲಿ 16000 ಚದುರ ಅಡಿ ಪ್ರದೇಶದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದ್ದು, ಒಂದು ಅಂತಸ್ತಿನ ಬಿಲ್ಡಿಂಗ್ ಇದಾಗಿದೆ. ಒಂಬತ್ತು ತಿಂಗಳಲ್ಲಿ ಈ ಕಟ್ಟಡ ನಿರ್ಮಿಸುವ ಗುರಿಯಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಟಿ. ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಕನಲ್ ಗಿರೀಶ್ ಶಿಂಧೆ, ಸಬ್ ಮೇಜರ್ ಜಿ. ಎನ್. ಕುರಂದಳೆ, ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಸಂಸ್ಥೆಯ ಅಧೀಕ್ಷಕ ಎಸ್. ಎ. ಬಿರಾದಾರ(ಕನ್ನಾಳ), ಎಂಜಿನಿಯರ್ ಗಳಾದ ಆರ್. ಎಸ್. ಜಿರಲಿ, ಯು. ಎನ್. ಕರಡಿ, ಉಪಮೇಯರ್ ದಿನೇಶ ಹಳ್ಳಿ, ಡಾ. ಮಹಾಂತೇಶ ಬಿರಾದಾರ, ಸುರೇಶ ಘೊಣಸಗಿ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

