ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಓರ್ವ ನಿಜವಾದ ಪತ್ರಕರ್ತ ಎಂದರೆ ನಿರಂತರವಾಗಿ ವಿದ್ಯಾರ್ಥಿಗಳಂತೆ ನಿತ್ಯ ನಡೆಯುವ ವಿಷಯಗಳನ್ನು ಸಂಗ್ರಹಿಸಿ ಸುದ್ದಿ ಪ್ರಸಾರ ಮಾಡುತ್ತಾರೆ ಎಂದು ಜಿಲ್ಲಾ ಕಾರ್ಯಕಾರಿ ಸದಸ್ಯ ಶಂಕರ ಜಲ್ಲಿ ಹೇಳಿದರು.
ಗುರುವಾರ ಆಲಮಟ್ಟಿಯಲ್ಲಿರುವ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ, ರಾಜ್ಯ ಮತ್ತು ಸಮಾಜ ಪರಿವರ್ತನೆಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿದೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. “ಪತ್ರಕರ್ತರೆಂದರೆ ಕಾರ್ಯನಿರತರಾಗಬೇಕು, ಕಾರ್ಯಮರೆತವರಾಗಬಾರದು” ಎಂದು ಅವರು ಹೇಳಿದರು.
ಹಿರಿಯ ಪತ್ರಕರ್ತ ಜಿ.ಸಿ. ಮುತ್ತಲದಿನ್ನಿ ಅವರು ೨೦೨೬-೨೭ನೇ ಸಾಲಿನ ಕಾನಿಪ ಸಂಘದ ಗುರುತಿನ ಚೀಟಿ ವಿತರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನಿಪ ಸಂಘದ ನಿಡಗುಂದಿ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಹೆರಕಲ್ಲ ವಹಿಸಿದ್ದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಮಹಿಬೂಬ ವಾಲಿಕಾರ, ಪ್ರಧಾನ ಕಾರ್ಯದರ್ಶಿ ಮಹ್ಮದ್ ಅಲಿ ಮಕಾನದಾರ, ಕಾರ್ಯದರ್ಶಿ ಶೇಖರ ಬಳ್ಳಾರಿ, ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ತೊರಗಲ್ಲಮಠ, ಮಹೇಶ ಅಢಾಳಿ, ಬಿ.ಎಂ. ಮಠಪತಿ, ಕೆ.ಎಂ. ಬಿರಾದಾರ (ಗುಡ್ನಾಳ), ಜಿ.ಎಂ. ಹಿರೇಮಠ, ಮಂಜುನಾಥ ಹಿರೇಮಠ, ಬೀರಪ್ಪ ಬೆನ್ನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

