ಬೆಂಗಳೂರು: ಸ್ಫೋಟದ ಮೂಲಕ ಬೆಂಗಳೂರಿನಲ್ಲಿ ಚರ್ಚೆಯ ಕೇಂದ್ರಬಿಂದುವಾಗಿದ್ದ ರಾಮೇಶ್ವರಂ ಕೆಫೆ ಕೇವಲ ಒಂದು ವಾರದಲ್ಲೇ ಮತ್ತೆ ಪುನಾರಂಭ ಮಾಡಿದ್ದು, ಈ ಬಾರಿ ಸಕಲ ಭದ್ರತಾ ಸಿದ್ದತೆಗಳೊಂದಿಗೆ ಕೆಫೆ ರೀ ಓಪನ್ ಆಗಿದೆ.
ರಾಜಧಾನಿ ಬೆಂಗಳೂರಿನ ರಾಮೇಶ್ವರಂ ಕೆಫೆ ರೀಓಪನ್ ಆಗಿದ್ದು, ಸ್ಫೋಟ ಸಂಭವಿಸಿದ ಬಳಿಕ ಬಂದ್ ಆಗಿದ್ದ ರಾಮೇಶ್ವರಂ ಕೆಫೆಯಲ್ಲಿ ಪುನಾರಂಭವಾಗಿದ್ದು, ಹೋಮ-ಹವನ ಪೂಜಾ ಕಾರ್ಯಗಳು ನೆರವೇರಿದ್ದವು. ಶನಿವಾರದಿಂದ ಕೆಫೆ ರೀಓಪನ್ ಸರ್ವೀಸ್ ಶುರು ಮಾಡಲಾಗಿದ್ದು, ಪೊಲೀಸ್ ಬಿಗಿ ಭದ್ರತೆಯಲ್ಲಿ ರಾಮೇಶ್ವರಂ ಕೆಫೆ ಶುರುವಾಗಿದೆ.
*ಭದ್ರತೆ ಹೆಚ್ಚಳ*
ನಿವೃತ್ತ ಆರ್ಮಿ ಆಫೀಸರ್‌ಗಳಿಂದ ಕೆಫೆಗೆ ಭದ್ರತೆ ನೀಡಲಾಗಿದೆ. 2 ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆಗೊಳಪಡಿಸಲಾಗುತ್ತಿದೆ. ಜನರ ಮೇಲೆ ನಿಗಾ ಇಡಲು 2 ವಾಚ್ ಡಾಗ್ಸ್, ಎಲ್ಲಾ ಬ್ರಾಂಚ್‌ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
*ಕೆಫೆಯ ಪ್ರವೇಶದ್ವಾರದಲ್ಲಿ 2 ಮೆಟಲ್ ಡಿಟೆಕ್ಟರ್ ಅಳವಡಿಕೆ ಮಾಜಲಾಗಿದ್ದು, ಭದ್ರತೆಗೆ ಇಬ್ಬರು ಸಿಬ್ಬಂದಿಗಳನ್ನೂ ಕೂಡ ನಿಯೋಜಿಸಲಾಗಿದೆ. ಕೆಫೆಗೆ ಬರುವ ಪ್ರತಿ ಗ್ರಾಹಕರ ತಪಾಸಣೆ ಮಾಡಲಾಗುತ್ತಿದ್ದು, ಜನರ ಮೇಲೆ ನಿಗಾ ಇಡಲು 2 ವಾಚ್ ಡಾಗ್ಸ್ ನಿಯೋಜಿಸಲಾಗಿದೆ. ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ಬ್ರಾಂಚ್ ಮಾತ್ರವಲ್ಲದೇ ನಗರದಲ್ಲಿರುವ ರಾಮೇಶ್ವರ ಕೆಫೆಯ ಎಲ್ಲಾ ಬ್ರಾಂಚ್‌ಗಳಲ್ಲಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಲವಡಿಸಲಾಗಿದೆ. ನಿವೃತ್ತ ಆರ್ಮಿ ಆಫೀಸರ್‌ಗಳಿಂದ ಕೆಫೆಗೆ ಭದ್ರತೆಗೆ ನಿಯೋಜಿಸಲಾಗಿದ್ದು, ಕೆಫೆಯ ಒಟ್ಟು 1500 ಸಿಬ್ಬಂದಿಗಳಿಗೆ ರಕ್ಷಣಾ ತರಬೇತಿ ನೀಡಲಾಗುತ್ತಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

