Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಜಗತ್ತಿನಲ್ಲಿರುವ ಎಲ್ಲ ದಾನಗಳು ಶ್ರೇಷ್ಠ. ಅದರಲ್ಲಿಯೂ ರಕ್ತದಾನ, ದೇಹದಾನ ಅತಿಶ್ರೇಷ್ಠವಾಗಿದೆ ಎಂದು ಉಡುಪಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ ಹೇಳಿದರು.ಪಟ್ಟಣದ ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡಾ.ನೀರಜ್ ಪಾಟೀಲ ಅಭಿಮಾನ ಬಳಗವು ಶನಿವಾರ ಹಮ್ಮಿಕೊಂಡಿದ್ದ ದೇಹದಾನದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸತ್ತ ಮೇಲೆ ಹೂಳಿದರೆ, ಸುಟ್ಟರೆ ದೇಹದ ಅಂಗಾಂಗ ನಾಶವಾಗಿ ಹೋಗುತ್ತದೆ. ಅದೇ ಸತ್ತ ದೇಹವನ್ನು ದಾನ ಮಾಡಿದರೆ ಕೆಲವು ಅಂಗಾಂಗಗಳು ಕೆಲವರಿಗೆ ನೆರವಾಗುವ ಮೂಲಕ ಅವರಿಗೆ ಜೀವದಾನ ಮಾಡಲು ಸಾಧ್ಯವಾಗುತ್ತದೆ. ಮಾನವನಾಗಿ ಜನಿಸಿದ ಮೇಲೆ ಉಪಕಾರ ಮಾಡದಿದ್ದರೂ ಸತ್ತ ಮೇಲೆ ದೇಹ ದಾನಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ನಾಗರಿಕ ಬಂಧುಗಳಿಗೆ ದೇಹದಾನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಯುವಜನತೆ ದೇಹ ದಾನ ಮಾಡಲು ಮುಂದಾಗಲು ಧೈರ್ಯ ಮಾಡಬೇಕಿದೆ ಎಂದರು.ಡಾ.ನೀರಜ್ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಅಮರೇಶ ಮಿಣಜಗಿ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನ…
ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಮುದ್ದೇಬಿಹಾಳ ಘಟಕದಿಂದ ಪ್ರತಿನಿತ್ಯ ಬೆಳಗ್ಗೆ ಮುದ್ದೇಬಿಹಾಳದಿಂದ ಬರುತ್ತಿದ್ದ ಬಸ್ ಸೇವೆ ಪುನಾರಂಭಗೊಂಡಿದ್ದರಿಂದ ಶನಿವಾರ ಗ್ರಾಮಸ್ಥರು ಬಸ್ ಅನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಪೂಜೆ ಸಲ್ಲಿಸಿ ಬಸ್ ಸೇವೆ ಪುನಾರಂಭಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.ಗ್ರಾಮದಿಂದ ಪ್ರತಿನಿತ್ಯ ಬೆಳಗ್ಗೆ ಮುದ್ದೇಬಿಹಾಳ ಕಾಲೇಜಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ, ವಿವಿಧ ಕೆಲಸಗಳಿಗೆ ತೆರಳುವ ಗ್ರಾಮಸ್ಥರಿಗೆ ಬಸ್ ಇಲ್ಲದೇ ಇರುವದರಿಂದಾಗಿ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡ ಗ್ರಾಮದ ಯುವಮುಖಂಡ, ಪತ್ರಕರ್ತ ರಾಜಶೇಖರ ಸಜ್ಜನ ಅವರು ಗ್ರಾಮದ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಕುರಿತು ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರ ಗಮನಕ್ಕೆ ತರುವ ಮೂಲಕ ಮೊದಲಿನಂತೆ ಮುದ್ದೇಬಿಹಾಳದಿಂದ ಗ್ರಾಮಕ್ಕೆ ಬಸ್ ಬರುವಂತೆ ಮನವಿ ಮಾಡಿಕೊಂಡಿದ್ದರಿಂದ ಬಸ್ ಸೇವೆ ಪುನಾರಂಭಗೊಂಡಿದೆ.ಇದೇ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬಸಯ್ಯ ಮಠಪತಿ, ಶಿವಪ್ಪ ಹೂಗಾರ, ಅರವಿಂದ ಹೂಗಾರ, ಬಸವರಾಜ ಸಜ್ಜನ, ರಾಜು ನಾಟೀಕಾರ, ಸಂಗಪ್ಪ ಬಳಿಗಾರ, ಅಕ್ಬರ್ ಚಪ್ಪರಬಂದ, ಮಹಿಬೂಬ ಚಪ್ಪರಬಂದ, ಪ್ರಭು ಕೊರಣ್ಣನವರ,…
ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಸಲಹೆ ಬಸವನಬಾಗೇವಾಡಿ: ಭಗವಂತನಲ್ಲಿ ಭಕ್ತಿಯಿದ್ದರೆ ಅನೇಕ ಸಾಮಾಜಿಕ ಕಾರ್ಯಗಳು ನಡೆಯುತ್ತವೆ. ಅರಳಿಚಂಡಿ ಗ್ರಾಮದ ಜಗನ್ಮಾತೆ ಆದಿಶಕ್ತಿದೇವಿ ಹಿರೇಮಠದ ಶಕ್ತಿ ದೊಡ್ಡದು. ದೇವಿ ಕೃಪೆ ಪಡೆದ ಅನೇಕ ಸದ್ಭಕ್ತರ ಸಹಾಯ-ಸಹಕಾರದಿಂದ ಭವ್ಯವಾದ ಜನಕಲ್ಯಾಣ ಸಮುದಾಯ ಭವನ ನಿರ್ಮಾಣವಾಗಿರುವುದು ಶ್ಲಾಘನೀಯ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ತಾಲೂಕಿನ ಅರಳಿಚಂಡಿ ಗ್ರಾಮದ ಜಗನ್ಮಾತೆ ಆದಿಶಕ್ತಿದೇವಿ ಹಿರೇಮಠದಲ್ಲಿ ನಿರ್ಮಾಣವಾದ ಜನಕಲ್ಯಾಣ ಸಮುದಾಯ ಭವನ ಲೋಕಾರ್ಪಣೆಯಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎಲ್ಲ ಸಮಾಜ ಬಾಂಧವರನ್ನು ಸಮಾನವಾಗಿ ಕಾಣುವ ಗ್ರಾಮ ಇದಾಗಿದೆ. ಈ ಗ್ರಾಮಸ್ಥರ ಒಗ್ಗಟ್ಟಿನಿಂದ ಗ್ರಾಮಕ್ಕೆ ಅನೇಕ ಕೆಲಸಗಳು ಆಗಿವೆ. ಅರಳಿಚಂಡಿ ಕೆರೆ ತುಂಬಿದರಿಂದ ಈ ಭಾಗದಲ್ಲಿ ನೀರಿನ ಭವಣೆ ಇಲ್ಲದಂತಾಗಿದೆ. ಜನರಲ್ಲಿ ಒಗ್ಗಟ್ಟು ಇದ್ದಾಗ ಅದಕ್ಕೆ ಬರುವ ಮೆರಗು ಬೇರೆಯಾಗಿರುತ್ತದೆ ಎಂದ ಅವರು, ಅರಳಿಚಂಡಿ ಗ್ರಾಮಕ್ಕೆ ಬರಲು ಮೊದಲು ಸರಿಯಾದ ರಸ್ತೆಗಳು ಇರಲಿಲ್ಲ. ಮೊದಲ ಬಾರಿಗೆ ಈ ಗ್ರಾಮಕ್ಕೆ ಸಚಿವ ಶಿವಾನಂದ…
ಸರ್ಕಾರಿ ಪಪೂ ಕಾಲೇಜಿನ ಕೊಠಡಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಸಚಿವ ಶಿವಾನಂದ ಪಾಟೀಲ ಸಲಹೆ ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯ ೨೦೨೨-೨೩ ನೇ ಸಾಲಿನ ಲೆಕ್ಕ ಶಿರ್ಷಿಕೆ ನಬಾರ್ಡ್-೨೮ ಅಡಿಯಲ್ಲಿ ಅಂದಾಜು ಮೊತ್ತ ರೂ. ೧.೫೮ ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ತರಗತಿ ಕೊಠಡಿ, ಎರಡು ಪ್ರಯೋಗಾಲಯ ಕೊಠಡಿ ಹಾಗೂ ಶೌಚಾಲಯ ಕಾಮಗಾರಿ ಹಾಗೂ ಜಿಲ್ಲಾ ಪಂಚಾಯತ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಉಪವಿಭಾಗದ ೨೦೨೨-೨೩ ನೇ ಸಾಲಿನ ವಿವೇಕ ಪಿಯು ಕಾಲೇಜ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ರೂ. ೫೦.೧೦ ಲಕ್ಷ ವೆಚ್ಚದ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶನಿವಾರ ನೆರವೇರಿಸಿದರು.ನಂತರ ಸಚಿವರು ಸಂಬಂಧಿಸಿದ ಅಭಿಯಂತರರಿಗೆ, ಗುತ್ತಿಗೆದಾರರಿಗೆ ವಿಶಾಲವಾದ ಕೊಠಡಿಗಳ ನಿರ್ಮಾಣ ಮಾಡುವ…
ಸಿಂದಗಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವ್ಯಾಪ್ತಿಯ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅಧ್ಯಕ್ಷರಾಗಿ ಸಿಂದಗಿಯ ಹಿರಿಯ ಸಾಹಿತಿ, ಕಥೆಗಾರ, ನಿವೃತ್ತ ಪ್ರಾಚಾರ್ಯ ಡಾ. ಚನ್ನಪ್ಪ ಕಟ್ಟಿ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರವು ಆದೇಶ ಹೊರಡಿಸಿದೆ.ಅಭಿನಂದನೆ: ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು, ಯಂಕಂಚಿ ಅಭಿನವ ರುದ್ರಮುನಿ ಶಿವಾಚಾರ್ಯರು, ಕನ್ನೊಳ್ಳಿಯ ಸಿದ್ದಲಿಂಗ ಶಿವಾಚಾರ್ಯರು, ಶಾಸಕ ಅಶೋಕ ಮನಗೂಳಿ, ಹಿರಿಯ ಜಾನಪದ ವಿದ್ವಾಂಸ ಡಾ. ಎಂ.ಎಂ.ಪಡಶೆಟ್ಟಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ತಾಲೂಕಾಧ್ಯಕ್ಷ ಆನಂದ ಶಾಬಾದಿ, ಪ್ರವೀಣ ಹಾಲಹಳ್ಳಿ, ಎಸ್. ಎಂ. ಪಾಟೀಲ ಗಣಿಹಾರ ಸೇರಿದಂತೆ ತಾಲೂಕಿನ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.
ಮುದ್ದೇಬಿಹಾಳ: ಗ್ಯಾರಂಟಿ ಯೋಜನೆಗಳನ್ನು ಶೀಘ್ರವಾಗಿ ಜಾರಿಗೊಳಿಸುವ ಮೂಲಕ ಕಾಂಗ್ರೇಸ್ ಸರ್ಕಾರ ನುಡಿದಂತೆ ನಡೆದಿದೆ ಎಂದು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ ಸಭಾ ಭವನದಲ್ಲಿ ಗ್ಯಾರಂಟಿ ಯೋಜನೆಗಳ ಸಲಹಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಹಾಗೂ ಮೇಲ್ವಿಚಾರಣೆಗಾಗಿ ಅನುಷ್ಠಾನ ಸಮಿತಿ ರಚಿಸಿ ಎಲ್ಲ ಫಲಾನುಭವಿಗಳಿಗೆ ಯೋಜನೆಗಳು ತಲುಪುವಂತೆ ಕ್ರಮ ಕೈಗೊಂಡು ಕಾಂಗ್ರೇಸ್ ಪಕ್ಷ ಜನಸಾಮಾನ್ಯರ ಪಕ್ಷ ಎಂದು ಮತ್ತೊಮ್ಮೆ ಸಾಬೀತು ಮಾಡಿದೆ. ಇನ್ನು ಮುಂದೆ ಯೋಜನೆಗಳ ಫಲಾನುಭವಿಗಳಿಗೆ ಸಮಸ್ಯೆಯಾದಲ್ಲಿ ಕಚೇರಿಗೆ ತಿರುಗಾಡುವ ಅವಶ್ಯಕತೆ ಇಲ್ಲ. ಸಮಿತಿಯ ಪದಾಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಸಮಸ್ಯೆ ತಿಳಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿದ ಶಿವಶಂಕರಗೌಡ ಹಿರೇಗೌಡರ ಮಾತನಾಡಿದರು.ಈ ವೇಳೆ ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಸದ್ದಾಂ ಕುಂಟೋಜಿ, ನಾಲತವಾಡ ಪಟ್ಟಣದ ಪಂಚಾಯತ ನ ಸದಸ್ಯ ಪೃಥ್ವಿರಾಜ ನಾಡಗೌಡ, ಪ.ಜಾ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಜಿ.ವಿಜಯಕರ, ಯುವ ಕಾಂಗ್ರೇಸ್ ಅಧ್ಯಕ್ಷ ರಫೀಕ ಶಿರೋಳ,…
ಸಿಂದಗಿಯ ವಾರ್ಡ ನಂ೧೩ರ ನಿವಾಸಿಗಳು | ಬಿಜೆಪಿ ಮಂಡಲದಿಂದ ತಹಶೀಲ್ದಾರಗೆ ಮನವಿ ಸಿಂದಗಿ: ವಾರ್ಡ ನಂ ೧೩ರಲ್ಲಿ ಸುಮಾರು ೪೦ವರ್ಷಗಳಿಂದ ಇಲ್ಲಿಯ ನಿವಾಸಿಗಳು ವಾಸಿಸುತ್ತಿದ್ದಾರೆ. ಆದರೆ ಈವರೆಗೂ ಅವರಿಗೆ ಯಾರು ಕೂಡ ಸೂರು ಒದಗಿಸುವ ಕಾರ್ಯ ಮಾಡಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.ಪಟ್ಟಣದ ಕಾಳಿಕಾ ನಗರದ ವಾರ್ಡ ನಂ೧೩ರ ಸ್ಲಂ ನಿವಾಸಿಗಳನ್ನು ತೆರವು ಗೊಳಿಸಬಾರದೆಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ಇಂದು ಈ ಜನರ ಜೀವನ ಚಿಂತಾಜನಕವಾಗಿದೆ. ಸರಕಾರ ಆದೇಶದಂತೆ ಸ್ಲಂ ನಿವಾಸಿಗಳನ್ನು ತೆರವುಗೊಳಿಸಬೇಕಾದರೆ ಅವರಿಗೆ ಮೊದಲು ಸೂರು ಕಲ್ಪಿಸಬೇಕು ಎಂಬುದಿದೆ. ಹಾಗೆ ಮಾಡದೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಇದೆ ರೀತಿ ನಿಮ್ಮ ದಬ್ಬಾಳಿಕೆ ಮುಂದುವರೆದರೆ ಎಸಿ ಕಛೇರಿಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.ಸ್ಲಂ ನಿವಾಸಿಗಳ ಮನೆ ತೆರವುಗೊಳಿಸಬೇಕಾದರೆ ಬಿಜೆಪಿ ಕಾರ್ಯಕರ್ತರ ಮೇಲೆ ಮೊದಲು ಜೆಸಿಬಿ ಹಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಈ ವೇಳೆ ವಾರ್ಡ ನಂ…
ಸಿಂದಗಿಯಲ್ಲಿ ಬಣಜಿಗ ಸಂಘದ ಸಮುದಾಯ ಭವನಕ್ಕೆ ರೂ.೭೫ಲಕ್ಷ ಅನುದಾನದ ಭರವಸೆ ಸಿಂದಗಿ: ಪ್ರತಿಯೊಂದು ಸಮಾಜ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯಬೇಕು, ಅಂತಹ ಸಮಾಜಗಳಲ್ಲಿ ಬಣಜಿಗ ಸಮಾಜ ಸಿಂದಗಿ ತಾಲೂಕಿನಲ್ಲಿ ಐತಿಹಾಸಿಕವುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕಾಳಿಕಾ ನಗರದಲ್ಲಿ ಶುಕ್ರವಾರ ಸಾಯಂಕಾಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ, ಕೆಆರ್‌ಐಡಿಎಲ್ ಅನುಷ್ಠಾನದಲ್ಲಿ ೨೦೨೩-೨೪ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಹಮ್ಮಿಕೊಂಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಸರಕಾರದಿಂದ ಸಮುದಾಯ ಭವನಕ್ಕೆ ಸರಕಾರದಿಂದ ೨೫ಲಕ್ಷ ರೂ. ಅನುದಾನ ಮಂಜೂರು ಮಾಡಿಸಿರುವೆ. ಮುಂಬರುವ ದಿನಮಾನಗಳಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತ್ತೆ ಸರಕಾರದಿಂದ ೫೦ಲಕ್ಷ ರೂ. ಅನುದಾನ ಮಂಜೂರು ಮಾಡಿಸಿಕೊಡುತ್ತೇನೆ. ಈ ಹಿಂದೆ ನಮ್ಮ ತಂದೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಬಣಜಿಗ ಸಮಾಜ ಕಾರ್ಯಕ್ರಮದಲ್ಲಿ ಭಾಗಿಯಾದಾಗ ೫ಲಕ್ಷ ರೂ. ಸಮಾಜದ ಏಳಿಗೆಗೆ ನೀಡುವೆ ಎಂದು ಹೇಳಿದ್ದರು.…
ಸಿಂದಗಿಯ ರೈತ ಭವನ ಆವರಣದಲ್ಲಿ ಉದ್ಘಾಟಿಸಿದ ಶಾಸಕ ಅಶೋಕ ಮನಗೂಳಿ ಸಿಂದಗಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರಕ್ಕೆ ನಗರ ಯೋಜನೆ ಪ್ರಾಧಿಕಾರ ಅವಶ್ಯಕತೆ ಇತ್ತು ಎಂದು ಅಶೋಕ್ ಮನಗೂಳಿ ಹೇಳಿದರು.ಪಟ್ಟಣದ ಎಪಿಎಂಸಿ ಯಾರ್ಡ್ ರೈತ ಭವನದಲ್ಲಿ ಹಮ್ಮಿಕೊಂಡ ನಗರ ಯೋಜನಾ ಪ್ರಾಧಿಕಾರ ನೂತನ ಕಚೇರಿಯನ್ನು ಶಾಸಕ ಅಶೋಕ ಮನಗೂಳಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣ, ಧಾರ್ಮಿಕ, ಸಮಾಜಿಕ ಮತ್ತು ಉದ್ಯೋಗ ಸೇರಿದಂತೆ ಪ್ರತಿಯೊಂದು ರಂಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಪಟ್ಟಣ ಈ ಜಿಲ್ಲೆಯಲ್ಲಿ ಯಾವುದಾದರೂ ಇದ್ದರೆ ಅದು ಸಿಂದಗಿ. ಈ ಯೋಜನಾ ಪ್ರಾಧಿಕಾರದಿಂದ ನಮಗಿರುವ ಪ್ರಯೋಜನವೆಂದರೆ ಸಿಂದಗಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾಡಲು ಸರಕಾರಕ್ಕೆ ಒತ್ತಾಯ ಮಾಡಲು ಅನುಕೂಲವಾಗುತ್ತದೆ. ಗ್ರಾಹಕ ಮಿತ್ರರು ಎನ್‌ಎ ಅಥವಾ ಯಾವುದೇ ಕಾರ್ಯಕ್ಕಾಗಿ ವಿಜಯಪುರಕ್ಕೆ ಹೋಗಬೇಕಾಗುತ್ತಿತ್ತು. ಸುಗಮವಾಗಿ ಕಾರ್ಯವಾಗಲಿ, ಪುರಸಭೆಯ ಆದಾಯ ಇನ್ನೂ ಹೆಚ್ಚಾಗಲಿ ಎಂಬ ದೃಷ್ಠಿಕೋನ ಇಟ್ಟುಕೊಂಡು ಯೋಜನಾ ಪ್ರಾಧಿಕಾರವನ್ನು ಮಂಜೂರು ಮಾಡಿಸಲಾಗಿದೆ ಎಂದರು.ಈ ವೇಳೆ ವಿಜಯಪುರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ,…
ದೇವರಹಿಪ್ಪರಗಿ: ಪ್ರೌಢಶಾಲೆ ಕುಡಿಯುವ ನೀರು, ಶೌಚಾಲಯ, ಬಿಸಿಯೂಟ, ಕಂಪ್ಯೂಟರ್ ಶಿಕ್ಷಣ ಸೇರಿದಂತೆ ಎಲ್ಲ ಮೂಲಭೂತ ಸೌಲಭ್ಯಗಳನ್ನು ದೊರಕಿಸಿಕೊಡುವಂತೆ ವಿದ್ಯಾರ್ಥಿಗಳು ಪಾಲಕರ ಜೊತೆಗೂಡಿ ಆಗ್ರಹಿಸಿದರು.ತಾಲ್ಲೂಕಿನ ಗಂಗನಳ್ಳಿ ಸರ್ಕಾರಿ ಪ್ರೌಢಶಾಲೆ ಹಲವು ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದು, ಕೂಡಲೇ ಶಾಲೆಗೆ ಶೌಚಾಲಯ, ಕ್ರೀಡಾಮೈದಾನ, ವಾರದಲ್ಲಿ ವಿತರಿಸುವ ಶೇಂಗಾಚಿಕ್ಕಿ, ಮೊಟ್ಟೆ ಸೇರಿದಂತೆ ಬಿಸಿಯೂಟ ವ್ಯವಸ್ಥೆಗಳನ್ನು ಸುಧಾರಿಸುವದು ಹಾಗೂ ಮುಖ್ಯವಾಗಿ ಮುಖ್ಯಗುರು ಅಡುಗೆ ಸಿಬ್ಬಂದಿಗೆ ಸಹಕಾರ ನೀಡುವಂತೆ ವಿದ್ಯಾರ್ಥಿಗಳೊಂದಿಗೆ ಸೇರಿ ಪಾಲಕರು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಚಿದಾನಂದ ಕನ್ನೋಳ್ಳಿ ಮಾತನಾಡಿ, ನಮ್ಮೂರಿನ ಪ್ರೌಢಶಾಲೆಗೆ ವಿದ್ಯುತ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಶಿಕ್ಷಕರು ಇಲ್ಲದ ಕಾರಣ ಹಲವು ದಿನಗಳಿಂದ ಕಂಪ್ಯೂಟರ್ ಇದ್ದು ಇಲ್ಲದಂತಾಗಿವೆ. ಇನ್ನೂ ಮಧ್ಯಾನ್ಹದ ಬಿಸಿಯೂಟಕ್ಕೆ ಅಡುಗೆ ಸಿಬ್ಬಂದಿಗೆ ಕೇವಲ ೨ ಟೊಮೇಟೊ ನೀಡುತ್ತಾರೆ ಇದರಲ್ಲಿ ಅವರು ಅಡಿಗೆ ಮಾಡುವುದಾದರೂ ಹೇಗೆ? ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಶಾಲೆಯ ಮುಖ್ಯಗುರು ಎಚ್.ಎಮ್. ಸಜ್ಜನ ಈ ಬಗ್ಗೆ ಮಾತನಾಡಿ, ನಮ್ಮ ಶಾಲೆಯಲ್ಲಿ ಮೊಟ್ಟೆ ಸೇರಿದಂತೆ ಎಲ್ಲವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆದರೆ ಗ್ರಾಮದ ಕನ್ನೋಳ್ಳಿ ಅನ್ನುವವರು…
