ಸರ್ಕಾರಿ ಪಪೂ ಕಾಲೇಜಿನ ಕೊಠಡಿ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಸಚಿವ ಶಿವಾನಂದ ಪಾಟೀಲ ಸಲಹೆ
ಬಸವನಬಾಗೇವಾಡಿ: ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯ ೨೦೨೨-೨೩ ನೇ ಸಾಲಿನ ಲೆಕ್ಕ ಶಿರ್ಷಿಕೆ ನಬಾರ್ಡ್-೨೮ ಅಡಿಯಲ್ಲಿ ಅಂದಾಜು ಮೊತ್ತ ರೂ. ೧.೫೮ ಕೋಟಿ ವೆಚ್ಚದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎರಡು ತರಗತಿ ಕೊಠಡಿ, ಎರಡು ಪ್ರಯೋಗಾಲಯ ಕೊಠಡಿ ಹಾಗೂ ಶೌಚಾಲಯ ಕಾಮಗಾರಿ ಹಾಗೂ ಜಿಲ್ಲಾ ಪಂಚಾಯತ ಪಂಚಾಯತ್ ರಾಜ್ ಇಂಜನಿಯರಿಂಗ್ ಇಲಾಖೆ ಉಪವಿಭಾಗದ ೨೦೨೨-೨೩ ನೇ ಸಾಲಿನ ವಿವೇಕ ಪಿಯು ಕಾಲೇಜ ಯೋಜನೆಯಡಿಯಲ್ಲಿ ಅಂದಾಜು ವೆಚ್ಚ ರೂ. ೫೦.೧೦ ಲಕ್ಷ ವೆಚ್ಚದ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕೊಠಡಿ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆಯನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಶನಿವಾರ ನೆರವೇರಿಸಿದರು.
ನಂತರ ಸಚಿವರು ಸಂಬಂಧಿಸಿದ ಅಭಿಯಂತರರಿಗೆ, ಗುತ್ತಿಗೆದಾರರಿಗೆ ವಿಶಾಲವಾದ ಕೊಠಡಿಗಳ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ಉಂಟಾಗುವಂತೆ ಕಟ್ಟಡ ನಿರ್ಮಿಸಬೇಕು. ಗುಣಮಟ್ಟದ ಕಟ್ಟಡ ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕೆಂದು ಸೂಚಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿಯ ಅನಿರ್ಬಂಧಿತ ಅನುದಾನದಲ್ಲಿ ವಿಕೇಲಚೇತನರಾದ ಇಂಗಳೇಶ್ವರ ಬಸತಂಗಪ್ಪ ಜಕ್ಕನಾಳ, ಶಾರದಾ ಪಾಟೀಲ, ಉಕ್ಕಲಿಯ ಮಹ್ಮದಸಾಬ ಜಮಾದಾರ ಅವರಿಗೆ ತ್ರಿಚಕ್ರ ಬೈಕ್ ವಿತರಿಸಿದರು.
ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಶೇಖರ ಗೊಳಸಂಗಿ, ಪುರಸಭೆ ಸದಸ್ಯರಾದ ರೇಖಾ ಬೆಕಿನಾಳ, ಜಗದೇವಿ ಗುಂಡಳ್ಳಿ, ಪ್ರವೀಣ ಪವಾರ, ಮುಖಂಡರಾದ ಬಸವರಾಜ ಹಾರಿವಾಳ, ಅನಿಲ ಅಗರವಾಲ, ಸುರೇಶಗೌಡ ಪಾಟೀಲ, ಸುಭಾಸ ಚಿಕ್ಕೊಂಡ,ಸಂಗಮೇಶ ಓಲೇಕಾರ, ಕಮಲಸಾಬ ಕೊರಬು, ಬಸವರಾಜ ಕೋಟಿ,ಶಂಕರಗೌಡ ಬಿರಾದಾರ, ರವಿ ರಾಠೋಡ, ಪರಶುರಾಮ ಜಮಖಂಡಿ, ರುಕ್ಮಿಣಿ ರಾಠೋಡ, ರವಿ ಚಿಕ್ಕೊಂಡ, ನಿಸಾರ ಚೌಧರಿ, ಎಂ.ಜಿ.ಆದಿಗೊಂಡ, ಶೇಖರಗೌಡ ಪಾಟೀಲ, ಸಂಕನಗೌಡ ಪಾಟೀಲ,ಎಸ್.ಎಸ್.ಬಶೆಟ್ಟಿ, ಉದಯ ಮಾಂಗಲೇಕರ, ಅಜೀಜ ಬಾಗವಾನ, ಮಲ್ಲೇಶಿ ಕಡಕೋಳ, ಜಿಪಂ ಎಇಇ ವಸಂತ ರಾಠೋಡ, ಲೋಕೋಪಯೋಗಿ ಇಲಾಖೆಯ ಎಇಇ ಜಿ.ವ್ಹಿ.ಕಿರಸೂರ, ಗುತ್ತಿಗೆದಾರರಾದ ಶಂಕರ ರಾಠೋಡ, ಪರಶುರಾಮ ರುಕ್ಮೋಜಿಗೋಳ, ಕಾಶಿನಾಥ ರಾಠೋಡ ಇತರರು ಇದ್ದರು.

