ಸಿಂದಗಿಯ ವಾರ್ಡ ನಂ೧೩ರ ನಿವಾಸಿಗಳು | ಬಿಜೆಪಿ ಮಂಡಲದಿಂದ ತಹಶೀಲ್ದಾರಗೆ ಮನವಿ
ಸಿಂದಗಿ: ವಾರ್ಡ ನಂ ೧೩ರಲ್ಲಿ ಸುಮಾರು ೪೦ವರ್ಷಗಳಿಂದ ಇಲ್ಲಿಯ ನಿವಾಸಿಗಳು ವಾಸಿಸುತ್ತಿದ್ದಾರೆ. ಆದರೆ ಈವರೆಗೂ ಅವರಿಗೆ ಯಾರು ಕೂಡ ಸೂರು ಒದಗಿಸುವ ಕಾರ್ಯ ಮಾಡಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ ಹೇಳಿದರು.
ಪಟ್ಟಣದ ಕಾಳಿಕಾ ನಗರದ ವಾರ್ಡ ನಂ೧೩ರ ಸ್ಲಂ ನಿವಾಸಿಗಳನ್ನು ತೆರವು ಗೊಳಿಸಬಾರದೆಂದು ಆಗ್ರಹಿಸಿ ಬಿಜೆಪಿ ಮಂಡಲದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವವನ್ನು ವಹಿಸಿ ಮಾತನಾಡಿದ ಅವರು, ಇಂದು ಈ ಜನರ ಜೀವನ ಚಿಂತಾಜನಕವಾಗಿದೆ. ಸರಕಾರ ಆದೇಶದಂತೆ ಸ್ಲಂ ನಿವಾಸಿಗಳನ್ನು ತೆರವುಗೊಳಿಸಬೇಕಾದರೆ ಅವರಿಗೆ ಮೊದಲು ಸೂರು ಕಲ್ಪಿಸಬೇಕು ಎಂಬುದಿದೆ. ಹಾಗೆ ಮಾಡದೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ. ಇದೆ ರೀತಿ ನಿಮ್ಮ ದಬ್ಬಾಳಿಕೆ ಮುಂದುವರೆದರೆ ಎಸಿ ಕಛೇರಿಯ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಲಂ ನಿವಾಸಿಗಳ ಮನೆ ತೆರವುಗೊಳಿಸಬೇಕಾದರೆ ಬಿಜೆಪಿ ಕಾರ್ಯಕರ್ತರ ಮೇಲೆ ಮೊದಲು ಜೆಸಿಬಿ ಹಾಯಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ವಾರ್ಡ ನಂ ೧೩ರ ಸ್ಲಂ ನಿವಾಸಿ ಕಾಂತಮ್ಮ ಚಾಂದಕವಟೆ ಮಾತನಾಡಿದರು.
ಈ ವೇಳೆ ಒಬಿಸಿ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ಮಲ್ಲಿಕಾರ್ಜುನ ಪಡಶೆಟ್ಟಿ, ಗುರು ತಳವಾರ, ಶ್ರೀಕಾಂತ ಬಿಜಾಪುರ, ಶಂಕರ ಬಗಲಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಶಾಂತ ಕದ್ದರಕಿ, ವಿಠ್ಠಲ ನಾಯ್ಕೋಡಿ, ಶ್ರೀಶೈಲ ಚಳ್ಳಗಿ, ಮಹಾಂತೇಶ ಸಾತಿಹಾಳ, ಪೀರೂ ಕೆರೂರ, ಶಮೀರ್ ಬಿಜಾಪೂರ, ಮಲ್ಲು ಪೂಜಾರಿ, ಮಡು ಬೋನಾಳ, ಸಿಂದಗಿ ಬಿಜೆಪಿ ವಕ್ತಾರ ಶಿವಕುಮಾರ ಬಿರಾದಾರ, ರವಿ ನಾಯ್ಕೋಡಿ, ಶಿವನಗೌಡ ಬಿರಾದಾರ, ಪ್ರಶಾಂತ ಕದ್ದರಕಿ, ಸಂತೋಷ ಮಣಗೀರಿ, ಪೀರೂ ಕೆರೂರ, ನಾಗಪ್ಪ ಶಿವೂರ, ಸಿದ್ರಾಮ ಆನಗೊಂಡ, ಮಡಿವಾಳಪ್ಪಗೌಡ ಬಿರಾದಾರ, ಶ್ರೀಶೈಲ ಚಳ್ಳಗಿ, ಮಲ್ಲನಗೌಡ ಬಿರಾದಾರ, ಯಲ್ಲು ಇಂಗಳಗಿ, ಪ್ರಧಾನಿ ಮೂಲಿಮನಿ, ಸಾಯಬಣ್ಣ ದೇವರಮನಿ, ಸಿದ್ರಾಮ ಆನಗೊಂಡ, ಮಲ್ಲಪ್ಪ ಜಾಲವಾದಿ, ಸಂಜೀವ ಹೋಳಿ, ಅಮೀನ ಬಡಿಗೇರ, ಕಾಂತಮ್ಮ ಚಾಂದಕವಟೆ, ಮೈರುನ ಮಣೂರ, ರೇಣುಕಾ ಮಾದರ, ಲಕ್ಷ್ಮೀ ಮಾದರ, ಯಮುನಾಬಾಯಿ ತಿಳಗೂಳ, ಅನ್ನಪೂರ್ಣ ಪಟ್ಟಣಶೆಟ್ಟಿ, ರೇಣುಕಾ ತಳವಾರ ಸೇರಿದಂತೆ ಬಿಜೆಪಿ ಮಂಡಲದ ಪದಾಧಿಕಾರಿಗಳು, ಕಾರ್ಯಕರ್ತರು, ಮುಖಂಡರು ಹಾಗೂ ವಾರ್ಡ ನಂ೧೩ರ ಸ್ಲಂ ನಿವಾಸಿಗಳು ಇದ್ದರು.

