ಸಿಂದಗಿಯಲ್ಲಿ ಬಣಜಿಗ ಸಂಘದ ಸಮುದಾಯ ಭವನಕ್ಕೆ ರೂ.೭೫ಲಕ್ಷ ಅನುದಾನದ ಭರವಸೆ
ಸಿಂದಗಿ: ಪ್ರತಿಯೊಂದು ಸಮಾಜ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕವಾಗಿ ಬೆಳೆಯಬೇಕು, ಅಂತಹ ಸಮಾಜಗಳಲ್ಲಿ ಬಣಜಿಗ ಸಮಾಜ ಸಿಂದಗಿ ತಾಲೂಕಿನಲ್ಲಿ ಐತಿಹಾಸಿಕವುಳ್ಳ ಸಮಾಜ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕಾಳಿಕಾ ನಗರದಲ್ಲಿ ಶುಕ್ರವಾರ ಸಾಯಂಕಾಲ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ, ಕೆಆರ್‌ಐಡಿಎಲ್ ಅನುಷ್ಠಾನದಲ್ಲಿ ೨೦೨೩-೨೪ನೆಯ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿಯಲ್ಲಿ ಹಮ್ಮಿಕೊಂಡ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಸಮುದಾಯ ಭವನ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈಗಾಗಲೇ ಸರಕಾರದಿಂದ ಸಮುದಾಯ ಭವನಕ್ಕೆ ಸರಕಾರದಿಂದ ೨೫ಲಕ್ಷ ರೂ. ಅನುದಾನ ಮಂಜೂರು ಮಾಡಿಸಿರುವೆ. ಮುಂಬರುವ ದಿನಮಾನಗಳಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಮತ್ತೆ ಸರಕಾರದಿಂದ ೫೦ಲಕ್ಷ ರೂ. ಅನುದಾನ ಮಂಜೂರು ಮಾಡಿಸಿಕೊಡುತ್ತೇನೆ. ಈ ಹಿಂದೆ ನಮ್ಮ ತಂದೆ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರು ಬಣಜಿಗ ಸಮಾಜ ಕಾರ್ಯಕ್ರಮದಲ್ಲಿ ಭಾಗಿಯಾದಾಗ ೫ಲಕ್ಷ ರೂ. ಸಮಾಜದ ಏಳಿಗೆಗೆ ನೀಡುವೆ ಎಂದು ಹೇಳಿದ್ದರು. ಆ ಹಣವನ್ನು ವೈಯಕ್ತಿಕವಾಗಿ ಆ ೫ಲಕ್ಷ ರೂ. ಅನುದಾನವನ್ನು ನೀಡುತ್ತೇನೆ ಎಂದು ಹೇಳಿದರು.
ಈ ವೇಳೆ ಸಮಾಜದ ಗೌರವಾಧ್ಯಕ್ಷ ಡಾ.ಎಂ.ಎಂ.ಪಡಶೆಟ್ಟಿ ಮಾತನಾಡಿದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀವರ್ಚನ ನೀಡಿದರು.
ಇದೇ ಸಂದರ್ಭದಲ್ಲಿ ಭೂದಾನಿ ಮುರಗೆಪ್ಪ ಕಿಣಗಿ, ಸಮಾಜದ ತಾಲೂಕಾಧ್ಯಕ್ಷ ಮುತ್ತು ಮುಂಡೇವಾಡಗಿ, ಉಮೇಶ ಜೋಗೂರ, ಮಹಾಂತೇಶ ಪಟ್ಟಣಶೆಟ್ಟಿ, ಸುರೇಶ ಜೋಗೂರ, ಪ್ರಕಾಶ ಗುಣಾರಿ, ರವಿ ಗೋಲಾ, ಮುತ್ತು ಪಟ್ಟಣಶೆಟ್ಟಿ, ಶ್ರೀಧರ ಬಮ್ಮಣ್ಣಿ, ಪ್ರಕಾಶ ದಸ್ಮಾ, ದಯಾನಂದ ಇವಣಿ, ಸಿದ್ದು ಅಂಗಡಿ, ಅನಿಲ ಪಟ್ಟಣಶೆಟ್ಟಿ, ಮಹಾನಂದ ಬಮ್ಮಣ್ಣಿ. ಪ್ರತಿಭಾ ಚಳ್ಳಗಿ, ಸೇರಿದಂತೆ ಸಮಾಜ ಬಾಂಧವರು ಇದ್ದರು.

