ಬಸವನಬಾಗೇವಾಡಿ: ಜಗತ್ತಿನಲ್ಲಿರುವ ಎಲ್ಲ ದಾನಗಳು ಶ್ರೇಷ್ಠ. ಅದರಲ್ಲಿಯೂ ರಕ್ತದಾನ, ದೇಹದಾನ ಅತಿಶ್ರೇಷ್ಠವಾಗಿದೆ ಎಂದು ಉಡುಪಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸರಾವ ಕುಲಕರ್ಣಿ ಹೇಳಿದರು.
ಪಟ್ಟಣದ ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಡಾ.ನೀರಜ್ ಪಾಟೀಲ ಅಭಿಮಾನ ಬಳಗವು ಶನಿವಾರ ಹಮ್ಮಿಕೊಂಡಿದ್ದ ದೇಹದಾನದ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯ ಸತ್ತ ಮೇಲೆ ಹೂಳಿದರೆ, ಸುಟ್ಟರೆ ದೇಹದ ಅಂಗಾಂಗ ನಾಶವಾಗಿ ಹೋಗುತ್ತದೆ. ಅದೇ ಸತ್ತ ದೇಹವನ್ನು ದಾನ ಮಾಡಿದರೆ ಕೆಲವು ಅಂಗಾಂಗಗಳು ಕೆಲವರಿಗೆ ನೆರವಾಗುವ ಮೂಲಕ ಅವರಿಗೆ ಜೀವದಾನ ಮಾಡಲು ಸಾಧ್ಯವಾಗುತ್ತದೆ. ಮಾನವನಾಗಿ ಜನಿಸಿದ ಮೇಲೆ ಉಪಕಾರ ಮಾಡದಿದ್ದರೂ ಸತ್ತ ಮೇಲೆ ದೇಹ ದಾನಮಾಡಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ. ನಾಗರಿಕ ಬಂಧುಗಳಿಗೆ ದೇಹದಾನ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ. ಯುವಜನತೆ ದೇಹ ದಾನ ಮಾಡಲು ಮುಂದಾಗಲು ಧೈರ್ಯ ಮಾಡಬೇಕಿದೆ ಎಂದರು.
ಡಾ.ನೀರಜ್ ಪಾಟೀಲ ಅಭಿಮಾನಿ ಬಳಗದ ಅಧ್ಯಕ್ಷ ಡಾ.ಅಮರೇಶ ಮಿಣಜಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಅಸ್ಕಿ ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಎಂ.ಎಸ್.ಕರ್ಜಗಿ ಮಾತನಾಡಿ, ಮನುಷ್ಯ ಜೀವಂತ ಇರುವಾಗಲೇ ಕಿಡ್ನಿ, ಕಣ್ಣು, ಲಿವರ್ ದಾನ ಮಾಡಬಹುದು. ಸತ್ತಾಗ ಅವಯವಗಳನ್ನು ದಾನ ಮಾಡಿ ಪುಣ್ಯ ಗಳಿಸಿಕೊಳ್ಳಬೇಕೆಂದರು.
ಕಾಶೀನಾಥ ಅವಟಿ, ಡಾ. ಎಸ್.ಎಸ್.ಡಂಬಳ ಮಾತನಾಡಿದರು.
ಸಂತೋಷ ಪಟೇದ ಸ್ವಾಗತಿಸಿ,ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಶ್ರೀನಿವಾಸರಾವ ಕುಲಕರ್ಣಿ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
Related Posts
Add A Comment

