ಬಸವನಬಾಗೇವಾಡಿ: ತಾಲೂಕಿನ ಕಾನ್ನಾಳ ಗ್ರಾಮಕ್ಕೆ ಮುದ್ದೇಬಿಹಾಳ ಘಟಕದಿಂದ ಪ್ರತಿನಿತ್ಯ ಬೆಳಗ್ಗೆ ಮುದ್ದೇಬಿಹಾಳದಿಂದ ಬರುತ್ತಿದ್ದ ಬಸ್ ಸೇವೆ ಪುನಾರಂಭಗೊಂಡಿದ್ದರಿಂದ ಶನಿವಾರ ಗ್ರಾಮಸ್ಥರು ಬಸ್ ಅನ್ನು ಮದುವಣಗಿತ್ತಿಯಂತೆ ಸಿಂಗರಿಸಿ ಪೂಜೆ ಸಲ್ಲಿಸಿ ಬಸ್ ಸೇವೆ ಪುನಾರಂಭಗೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.
ಗ್ರಾಮದಿಂದ ಪ್ರತಿನಿತ್ಯ ಬೆಳಗ್ಗೆ ಮುದ್ದೇಬಿಹಾಳ ಕಾಲೇಜಿನ ವಿದ್ಯಾಭ್ಯಾಸಕ್ಕೆ ತೆರಳುವ ವಿದ್ಯಾರ್ಥಿಗಳಿಗೆ, ವಿವಿಧ ಕೆಲಸಗಳಿಗೆ ತೆರಳುವ ಗ್ರಾಮಸ್ಥರಿಗೆ ಬಸ್ ಇಲ್ಲದೇ ಇರುವದರಿಂದಾಗಿ ತುಂಬಾ ತೊಂದರೆಯಾಗಿತ್ತು. ಇದನ್ನು ಮನಗಂಡ ಗ್ರಾಮದ ಯುವಮುಖಂಡ, ಪತ್ರಕರ್ತ ರಾಜಶೇಖರ ಸಜ್ಜನ ಅವರು ಗ್ರಾಮದ ವಿದ್ಯಾರ್ಥಿಗಳಿಗೆ, ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಕುರಿತು ಮುದ್ದೇಬಿಹಾಳ ಘಟಕದ ವ್ಯವಸ್ಥಾಪಕರ ಗಮನಕ್ಕೆ ತರುವ ಮೂಲಕ ಮೊದಲಿನಂತೆ ಮುದ್ದೇಬಿಹಾಳದಿಂದ ಗ್ರಾಮಕ್ಕೆ ಬಸ್ ಬರುವಂತೆ ಮನವಿ ಮಾಡಿಕೊಂಡಿದ್ದರಿಂದ ಬಸ್ ಸೇವೆ ಪುನಾರಂಭಗೊಂಡಿದೆ.
ಇದೇ ಸಂದರ್ಭದಲ್ಲಿ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ಗ್ರಾಮಸ್ಥರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಬಸಯ್ಯ ಮಠಪತಿ, ಶಿವಪ್ಪ ಹೂಗಾರ, ಅರವಿಂದ ಹೂಗಾರ, ಬಸವರಾಜ ಸಜ್ಜನ, ರಾಜು ನಾಟೀಕಾರ, ಸಂಗಪ್ಪ ಬಳಿಗಾರ, ಅಕ್ಬರ್ ಚಪ್ಪರಬಂದ, ಮಹಿಬೂಬ ಚಪ್ಪರಬಂದ, ಪ್ರಭು ಕೊರಣ್ಣನವರ, ರಾಜು ಮೇಲಿನಮನಿ,ಗುರುಲಿಂಗಯ್ಯ ಮ್ಯಾಗೇರಿ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

