Author: editor.udayarashmi@gmail.com

ಬಸವನಬಾಗೇವಾಡಿ: ವಿದ್ಯಾರ್ಥಿಗಳ ಜೀವನದ ಸುಂದರ ಬದುಕಿಗೆ ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕ ಉಪಾದ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ಶಾಸಕರ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಎಲ್ಲ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಗೊಳ್ಳುವಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದರು.ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕು ಕಾರ್ಯಾಧ್ಯಕ್ಷ ಶೇಖರ ಗೊಳಸಂಗಿ ಸಮಾವೇಶದ ಅದ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡ ಮಹೇಶ ಮುಳವಾಡ, ಮಹಿಳಾ ಉಪಾದ್ಯಕ್ಷೆ ಡಾ. ವೀಣಾ ಗುಳೇದಗುಡ್ಡ, ಸ್ವರೂಪರಾಣಿ ಬಿಂಜಲಬಾವಿ, ಸೀತವ್ವ ವಾಡೇದ, ಶಿಕ್ಷಕರಾದ ಎಸ್. ಎಸ್. ಅವಟಿ, ಜಗದೀಶ ಬುಸೂರ, ಬೊಮ್ಮನಹಳ್ಳಿ ,ರಾಜಶೇಖರ ಖೇಡಗಿ ,ಶ್ರೀಮತಿ ಪೂಜಾರಿ ಇತರರು…

Read More

ಪ್ರಣಾಳಿಕೆಯಲ್ಲಿ ಡಿಎಂಕೆ ಘೋಷಣೆ | ಕರ್ನಾಟಕದ ರೈತರ ಕುಡಿವ ನೀರಿನ ಪ್ರಶ್ನೆ | ಬಿಜೆಪಿ ವಾಗ್ದಾಳಿ ಬೆಂಗಳೂರು: ಕರ್ನಾಟಕದ ದೌರ್ಬಲ್ಯವನ್ನು ಮನಗಂಡ ಸ್ಟಾಲಿನ್ ನೇತೃತ್ವದ ತಮಿಳುನಾಡು ಸರಕಾರವು ನಿನ್ನೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇಂಡಿ ಒಕ್ಕೂಟ ಗೆದ್ದು ಬಂದರೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ತಮಿಳುನಾಡು ಸರಕಾರದ ಮುಖ್ಯಸ್ಥ ಸ್ಟಾಲಿನ್ ಹೇಳಿಕೆ ಕೊಟ್ಟಿದ್ದಾರೆ ಎಂದು ಬಿಜೆಪಿ ನಾಯಕ ಅಶ್ವತ್ಥನಾರಾಯಣ ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ಕಳೆದ ಆ.5 ರಿಂದ ಕರ್ನಾಟಕ ಸರಕಾರದ ವೈಫಲ್ಯಗಳನ್ನು ಮನಗಂಡು ಈ ರೀತಿ ಚುನಾವಣಾ ಪ್ರಣಾಳಿಕೆ ಹೊರಡಿಸಿದೆ. ಇದು ರಾಜ್ಯ ಸರಕಾರಕ್ಕೆ ಗೊತ್ತಿದೆಯೇ ಇಲ್ಲವೋ ಗೊತ್ತಿಲ್ಲ ಎಂದು ಅಶ್ವತ್ಥನಾರಾಯಣ ಅವರು ಟೀಕಿಸಿದರು.ಕಾವೇರಿ ಐತೀರ್ಪು ಬಂದ ಬಳಿಕ ಬೆಂಗಳೂರಿನ ಕುಡಿಯುವ ನೀರು ಸಂಬಂಧ ಮತ್ತು 400 ಮೆ.ವಾ. ವಿದ್ಯುತ್ ಉತ್ಪಾದನೆಗೆ ಅವಕಾಶ ಇದೆ ಎಂದು ಗೊತ್ತಾಗಿದೆ. ಕಾವೇರಿ ನೀರು ನಿರ್ವಹಣಾ ಸಮಿತಿ ಆದೇಶದ ಮೇರೆಗೆ ನಮ್ಮ ಸರಕಾರ ಇದ್ದಾಗ ಒಂದು ಸಾಧ್ಯತಾ ವರದಿ (ಫೀಸಿಬಿಲಿಟಿ ರಿಪೋರ್ಟ್)…

Read More

ಸಂಸದ ಬಿ.ಎನ್.ಬಚ್ಚೇಗೌಡ ಬಿಜೆಪಿಗೆ ರಾಜೀನಾಮೆ ಬೆಂಗಳೂರು: ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಅವರು ರಾಜೀನಾಮೆಯನ್ನು ನೀಡಿದ್ದು, ಬಿಜೆಪಿ ಕಚೇರಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ.ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ರಾಜೀನಾಮೆ ಸಲ್ಲಿಸಿದ್ದು, ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಪಕ್ಷದ ಕಚೇರಿಗೆ ರಾಜೀನಾಮೆ ಪತ್ರ ತಲುಪಿಸಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ರಾಜೀನಾಮೆ ಪತ್ರ ಬರೆದಿರುವ ಸಂಸದ ಬಿ.ಎನ್.ಬಚ್ಚೇಗೌಡ, ಸ್ವ ಇಚ್ಛೆಯಿಂದ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜೀನಾಮೆ ಅಂಗೀಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 2008ರಲ್ಲಿ ಬಿಜೆಪಿ ಸೇರ್ಪಡೆ ಬಳಿಕ ಶಾಸಕ, ಸಚಿವ, ಸಂಸದರಾಗಿ ಸಾರ್ವಜನಿಕ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟ ಪಕ್ಷಕ್ಕೆ ಮತ್ತು ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.

Read More

ಬಸವನಬಾಗೇವಾಡಿ: ಮಾ.೨೫ ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವ ಜೊತೆಗೆ ನಕಲು ಮುಕ್ತವಾಗಿ ನಡೆಯುವಂತೆ ಎಲ್ಲ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಹೇಳಿದರು.ಪಟ್ಟಣದ ಸೇವಾದಳದ ಕಚೇರಿಯ ಸಭಾಂಗಣದಲ್ಲಿ ಬುಧವಾರ ಜರುಗಿದ ಎಸ್ಎಸ್ಎಲ್ಸಿ ಪರೀಕ್ಷಾ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿಗಳ ಜೀವನದಲ್ಲಿ ಮೊದಲ ಮೈಲಿಗಲ್ಲು. ಪರೀಕ್ಷೆಯನ್ನು ಯಾವುದೇ ಆತಂಕ, ಒತ್ತಡವಿಲ್ಲದೇ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವಂತಾಗಬೇಕು. ಮಕ್ಕಳು ಒತ್ತಡ ರಹಿತ, ಸಂತಸದಿಂದ ಪರೀಕ್ಷೆಯನ್ನು ಬರೆಯುವಂತೆ ಪರೀಕ್ಷಾ ಕೇಂದ್ರವನ್ನು ವ್ಯವಸ್ಥೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಕಾಲಿಕವಾಗಿ ಹಾಜರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮಾಡುವ ಮೂಲಕ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಾವುದೇ ಲೋಪ-ದೋಷ ಉಂಟಾಗದಂತೆ ನಡೆಸಬೇಕೆಂದು ಸೂಚಿಸಿದ ಅವರು, ಪರೀಕ್ಷಾ ಕರ್ತವ್ಯದಲ್ಲಿ ಯಾರೂ ತಮ್ಮ ಸಂಬಂಧಗಳನ್ನು ಪರಿಗಣಿಸಬಾರದು. ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯಬಾರದು. ಯಾರಾದರೂ ಪರೀಕ್ಷೆಯಲ್ಲಿ ಸಹಾಯ ಮಾಡಲು ಹೋದರೆ ಅಂತಹವರ ಮೇಲೆ ನಿರ್ದಾಕ್ಷಣಕ್ರಮವನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಮಾತನಾಡಿದರು.ಪರೀಕ್ಷೆ ಕೇಂದ್ರದಲ್ಲಿ ಕಡ್ಡಾಯವಾಗಿ…

Read More

ಢವಳಗಿ: ಗ್ರಾಮದ ಶ್ರೀ ಮಡಿವಾಳೇಶ್ವರರ 517ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 23 ಶನಿವಾರದಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ ಏರ್ಪಡಿಸಲಾಗಿದೆ.ಸ್ಪರ್ಧೆಯಲ್ಲಿ ಒಟ್ಟು 10 ಬಹುಮಾನಗಳನ್ನು ಕೊಡಲಾಗುವುದು. ಒಂದನೇ ಬಹುಮಾನ ಮೋಟರ್ ಬೈಕ್(HF ಡಿಲಕ್ಸ್), ಎರಡನೇ ಬಹುಮಾನ 50000 ರೂ. ಮೂರನೇ ಬಹುಮಾನ 40000 ರೂ, 4ನೇ ಬಹುಮಾನ 30000, ಐದನೆಯ ಬಹುಮಾನ 25000 ರೂ, ಆರನೇ ಬಹುಮಾನ 20000 ರೂ, ಏಳನೆಯ ಬಹುಮಾನ 15000 ರೂ, ಎಂಟನೇ ಬಹುಮಾನ 10000 ರೂ, ಒಂಬತ್ತನೇ ಬಹುಮಾನ 7500 ರೂ, ಹತ್ತನೆಯ ಬಹುಮಾನ 5000 ರೂ. ಈ ರೀತಿಯಲ್ಲಿ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಎತ್ತುಗಳ ಮಾಲೀಕರು ಮೂವರನ್ನು ಹೊರತುಪಡಿಸಿ ಯಾರೂ ಬರುವಂತಿಲ್ಲ. ಎತ್ತುಗಳಿಗೆ ಹಿಂಸೆ ಮಾಡಬಾರದು, ಕಮೀಟಿಯವರಿಂದ ನಿಗದಿತ ಸಮಯ ನೀಡಲಾಗುವುದು, ಗಟ್ಟಿ ನೆಲದಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದು ತರಬಂಡಿ ಸ್ಪರ್ಧೆಯ ಉಸ್ತುವಾರಿ ಸುರೇಶಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.9663497143 ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿರಿ.

Read More

ವಿಜಯಪುರ : ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾ ಸಂಚಾಲಕರಾಗಿ ಜುಮನಾಳ ಗ್ರಾಮದ ರೈತ ಮುಖಂಡಾರಾದ ಮಹಾಂತೇಶ ಮಮದಾಪುರ ಅವರನ್ನು ಆಯ್ಕೆ ಮಾಡಿ ಜಿಲ್ಲಾ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಆದೇಶ ಪ್ರತಿ ನೀಡಿ ಸಂಘದ ತತ್ವ ಸಿದ್ದಾಂತಗಳಿಗೆ ಬದ್ಧವಾಗಿ, ಬಡವ ಬಲ್ಲಿದ, ಮೇಲು ಕೀಳು, ಎಂದೆನ್ನದೇ ಎಲ್ಲರನ್ನು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಸಂಘಟನೇಯ ಸಿದ್ದಾಂತದಲ್ಲಿ ಕಾನೂನಿನ ಚೌಕಟ್ಟಿನಲ್ಲಿ ಎಲ್ಲರನ್ನು ಸಮನಾಗಿ ಕಾಣುತ್ತಾ ಯಾವುದೇ ರೈತರಿಗೆ ಅನ್ಯಾಯವಾದರೂ ತಕ್ಷಣದಲ್ಲಿ ಕಾರ್ಯಪ್ರವೃತ್ತರಾಗಬೇಕು ಹಾಗೇ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಗ್ರಾಮ ಘಟಕ, ತಾಲೂಕು ಘಟಕಗಳನ್ನು ಮಾಡಬೇಕು ಎಂದು ಹೇಳಿದರುಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ(ಬ್ಯಾಲ್ಯಾಳ), ತಾ.ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ತಾ.ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಗೋಡೇಕಾರ, ಮುಖಂಡ ಆನಂದ ಭೀಸೆ ಇದ್ದರು.

Read More

ವಿಜಯಪುರ: ಹೆಣ್ಣು ಅಬಲೆಯಲ್ಲ ಸಬಲೆ ಎಂದು ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಅಧ್ಯಕ್ಷೆ ಶೈಲಜಾ ಪಾಟೀಲ ಯತ್ನಾಳ ಅವರು ಹೇಳಿದರು.ನಗರದ ಶ್ರೀ ಸಿದ್ಧೇಶ್ವರ ಕಲಾಭವನದಲ್ಲಿ ಬುಧವಾರ ಸಮಸ್ತ ವಿಜಯಪುರ ಮಹಿಳೆಯರ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ಇಂದು ಪುರುಷನಿಗಿಂತ ಒಂದು ಕೈ ಮೇಲೆ ಎನ್ನುವಷ್ಟರ ಮಟ್ಟಿಗೆ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವುದೇ ಸಾಕ್ಷಿ ಎಂದರು.ಕಣ್ಮರೆ ಆಗುತ್ತಿರುವ ವಚನ, ಪ್ರವಚನಗಳನ್ನು ಪ್ರಸಕ್ತ ಹಾಗೂ ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು, ಶ್ರೀ ಸಿದ್ದೇಶ್ವರ ಅಕ್ಕನ ಬಳಗ ಪ್ರತಿ ಸೋಮವಾರ ಸಿದ್ದೇಶ್ವರ ದೇವಸ್ಥಾನ ಸಭಾಭವನದಲ್ಲಿ ಕಾರ್ಯಕ್ರಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.ಅಕ್ಕಮಹಾದೇವಿ ಬುರ್ಲಿ ಅಮ್ಮನವರು ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿ ಸಜ್ಜನ, ಮೀನಾಕ್ಷಿ ಉಟಗಿ, ಸುನಂದಾ ಹೊನವಾಡ, ಶಕುಂತಲಾ ಚಿಂತಾಮಣಿ, ರೇಣುಕಾ ಪಾಟೀಲ, ಮಮತಾ ಪರಗೊಂಡೆ, ಸಾವಿತ್ರಿ ಮಠ ಸೇರಿದಂತೆ ಅಕ್ಕನ ಬಳಗದ ಪದಾಧಿಕಾರಿಗಳು, ಸದಸ್ಯರು, ಮಹಿಳೆಯರು ಭಾಗವಹಿಸಿದ್ದರು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು…

Read More

ತಿಕೋಟಾ: ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ರೈತರು ವಿಮಾಕಂತು ತುಂಬಿದ್ದು ಇನ್ನುವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಜಮಾ ಆಗಿರುವದಿಲ್ಲ ಎಂದು ಅಕ್ರೋಶಗೊಂಡ ರೈತರು ಮಂಗಳವಾರದಂದು ತಹಸೀಲ್ದಾರ ಸುರೇಶ ಮುಂಜೆ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅದ್ಯಕ್ಷ ಎಸ್ ಎಸ್ ಸಾಲಿಮಠ ಮನವಿ ಸಲ್ಲಿಸಿ ಮಾತನಾಡುತ್ತಾ, ಜಿಲ್ಲಾಧಿಕಾರಿಗಳು ಬೆಳೆ ನಷ್ಟಗೊಂಡ ರೈತರನ್ನು ಕುದ್ದಾಗಿ ಸರ್ವೇ ಮಾಡಿಸಿ ವಿಮಾ ಮಂಜುರಾತಿ ಮಾಡಿಸಬೇಕು. ಈ ಬಾರಿ ಮಳೆ ಬಾರದೇ ಬರಗಾಲದಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ, ಸಾಲ ಸೋಲ ಮಾಡಿ ಬಿತ್ತಿದ ಬೆಳೆಗೆ ಖರ್ಚು ಸಹ ಬಾರದಂತಾಗಿದೆ, ಕೂಡಲೆ ವಿಮಾ ಪರಿಹಾರ ಬಾರದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ರೈತರು ವಿಮಾ ಆಸರೆ ಆದಿತೆಂದು ಸಾಲ ಮಾಡಿಯಾದರೂ ಬೆಳೆಗಳ ವಿಮಾ ಪಾವತಿಸಿದ್ದಾರೆ. ಅದರೆ ವಿಮಾ ಬಾರದೆ ರೈತರು ದಿಕ್ಕು ತೋಚದೆ ಸಂಕಷ್ಟ ಎದುರಿಸುವಂತಾಗಿದೆ. ವಿಮಾ ಕಂಪನಿಯವರ ಷಡ್ಯಂತ್ರದಿಂದ ಪ್ರಭಾವಿಗಳಿಗೆ ರಾಜ್ಯದ…

Read More

ಚಿಮ್ಮಡ: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಬಟಕುರ್ಕಿ ಇಫ್ಕೋ ನವದೇಹಲಿಯ ಪ್ರಾದೇಶಿಕ ಸಾಮಾನ್ಯ ಮಂಡಳಿಯ (ಆರ್‌ಜಿಬಿ) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.ಐದು ವರ್ಷಗಳ ಅವಧಿಗಾಗಿ ಹುಬ್ಬಳ್ಳಿ ವೀಭಾಗೀಯ (ಎಂಟು ಜಿಲ್ಲೆಗಳನ್ನೊಳಗೊಂಡ) ಮಟ್ಟದಲ್ಲಿ ನಡೆದ ಚುನಾವಣೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮೊತ್ತದ ಠೇವಣಿ ಹೊಂದಿರುವ ಪ್ರತೀಷ್ಠಿತ ೬೪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಪಧಾದಿಕಾರಿಗಳು ಮತದಾನಕ್ಕೆ ಅರ್ಹತೆ ಹೊಂದಿದ್ದು, ಬಾಗಲಕೋಟ ಜಿಲ್ಲೆಯ ಪ್ರತಿನಿಧಿಯಾಗಿ ಸ್ಪರ್ದಿಸಿದ್ದ ಶಂಕರ ಬಟಕುರ್ಕಿ ಅನಾಯಾಸವಾಗಿ ಆಯ್ಕೆಯಾಗಿದ್ದಾರೆಂದು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ಮುರಿಗೆಪ್ಪ ವಜ್ಜರಮಟ್ಟಿ ತಿಳಿಸಿದ್ದಾರೆ.ಶಂಕರ ಬಟಕುರ್ಕಿ ಅವರನ್ನು ಸ್ಥಳಿಯ ಗ್ರಾಂ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಮೋಟಗಿ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ ಗೋವಿಂದಗೋಳ ಸೇರಿದಂತೆ ಸದಸ್ಯರು ಹಾಗೂ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.ಸನ್ಮಾನ; ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಬಟಕುರ್ಕಿ ಇಫ್ಕೋ ನವದೇಹಲಿಯ ಪ್ರಾದೇಶಿಕ ಸಾಮಾನ್ಯ ಮಂಡಳಿಯ…

Read More

ಮುದ್ದೇಬಿಹಾಳ: ಪರೀಕ್ಷಾ ಕರ್ತವ್ಯಕ್ಕೆ ನೇಮಿಸಿದ ಎಲ್ಲರೂ ಜಾಗರೂಕರಾಗಿ, ಕಟ್ಟು ನಿಟ್ಟಾಗಿ ಪರೀಕ್ಷೆಗಳನ್ನು ನಡೆಸಬೇಕು. ನಿಷ್ಕಾಳಜಿ ತೋರಿ ಪರೀಕ್ಷಾ ಪಾವಿತ್ಯ್ರಕ್ಕೆ ಧಕ್ಕೆ ತಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ತಹಶೀಲ್ದಾರ ಬಸವರಾಜ ನಾಗರಾಳ ಕೇಳಿದರು.ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ-೧ ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪರೀಕ್ಷೆಗಳಲ್ಲಿ ನಿಮಗೆ ನೀಡಲಾದ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿದಲ್ಲಿ ಯಾವ ತೊಂದರೆಯೂ ಬರಲು ಸಾಧ್ಯವಿಲ್ಲ. ಒಂದು ವೇಳೆ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಯಾರಿಂದಲೂ ನನಗೆ ಕರೆ ಮಾಡಿಸಬೇಡಿ. ನಾನು ಯಾರ ಮಾತನ್ನೂ ಕೇಳುವದಿಲ್ಲ ಎಂದರು.ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ವವಸ್ಥೆ ಸರಿಯಾಗಿ ನಿಭಾಯಿಸಿ. ಯಾರಾದರೂ ಖಾಸಗಿ ಶಾಲೆವರು ತಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಕ್ರಮಕ್ಕೆ ಮುಂದಾದಲ್ಲಿ ಅಂಥವರ ಮೇಲೆ ಮುಲಾಜಿಲ್ಲದೆ ಸೂಕ್ತಕ್ರಮ ಜರುಗಿಸುತ್ತೇನೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿದರು.ತಾಲೂಕು ವೈದ್ಯಾಧಿಕಾರಿ ಸತೀಶ ತಿವಾರಿ ಮಾತನಾಡಿ ಸಧ್ಯ ಬೇಸಿಗೆಯ ತಾಪಮಾನ…

Read More