ತಿಕೋಟಾ: ತಾಲೂಕಿನಾದ್ಯಂತ ರೈತರು ಆಯಾ ಬೆಳೆಗಳಿಗೆ ಅನುಗುಣವಾಗಿ ರೈತರು ವಿಮಾಕಂತು ತುಂಬಿದ್ದು ಇನ್ನುವರೆಗೂ ಕೆಲವು ರೈತರ ಖಾತೆಗಳಿಗೆ ವಿಮಾ ಜಮಾ ಆಗಿರುವದಿಲ್ಲ ಎಂದು ಅಕ್ರೋಶಗೊಂಡ ರೈತರು ಮಂಗಳವಾರದಂದು ತಹಸೀಲ್ದಾರ ಸುರೇಶ ಮುಂಜೆ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕಾ ಅದ್ಯಕ್ಷ ಎಸ್ ಎಸ್ ಸಾಲಿಮಠ ಮನವಿ ಸಲ್ಲಿಸಿ ಮಾತನಾಡುತ್ತಾ, ಜಿಲ್ಲಾಧಿಕಾರಿಗಳು ಬೆಳೆ ನಷ್ಟಗೊಂಡ ರೈತರನ್ನು ಕುದ್ದಾಗಿ ಸರ್ವೇ ಮಾಡಿಸಿ ವಿಮಾ ಮಂಜುರಾತಿ ಮಾಡಿಸಬೇಕು. ಈ ಬಾರಿ ಮಳೆ ಬಾರದೇ ಬರಗಾಲದಿಂದ ಸಾಕಷ್ಟು ರೈತರು ನಷ್ಟ ಅನುಭವಿಸುವಂತಾಗಿದೆ, ಸಾಲ ಸೋಲ ಮಾಡಿ ಬಿತ್ತಿದ ಬೆಳೆಗೆ ಖರ್ಚು ಸಹ ಬಾರದಂತಾಗಿದೆ, ಕೂಡಲೆ ವಿಮಾ ಪರಿಹಾರ ಬಾರದಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದರು.
ಮಳೆಯಿಲ್ಲದೆ ಬರಗಾಲಕ್ಕೆ ತುತ್ತಾಗಿರುವ ರೈತರು ವಿಮಾ ಆಸರೆ ಆದಿತೆಂದು ಸಾಲ ಮಾಡಿಯಾದರೂ ಬೆಳೆಗಳ ವಿಮಾ ಪಾವತಿಸಿದ್ದಾರೆ. ಅದರೆ ವಿಮಾ ಬಾರದೆ ರೈತರು ದಿಕ್ಕು ತೋಚದೆ ಸಂಕಷ್ಟ ಎದುರಿಸುವಂತಾಗಿದೆ. ವಿಮಾ ಕಂಪನಿಯವರ ಷಡ್ಯಂತ್ರದಿಂದ ಪ್ರಭಾವಿಗಳಿಗೆ ರಾಜ್ಯದ ಹಲವು ಕಡೆ ಮಾತ್ರ ವಿಮಾ ಪರಿಹಾರ ಜಮಾ ಆಗುತ್ತಿರುವುದು ಕಂಡು ಬರುತ್ತಿದೆ, ಆದರೆ ನಿಜವಾಗಿ ನಷ್ಟಗೊಂಡ ರೈತರಿಗೆ ಪರಿಹಾರ ದೊರಕುತ್ತಿಲ್ಲ. ಸರಕಾರ ಬರಗಾಲ ಘೋಷಣೆ ಮಾಡಿದರೂ ಸ್ಥಳೀಯ ಬ್ಯಾಂಕ್, ಪೈನಾನ್ಸ್ ಹಾಗೂ ಕೋ ಆಪರೆಟೀವ ಸೋಸಾಟಿಯವರು ಕಿರಿಕಿರಿ ಉಂಟುಮಾಡುತ್ತಿದ್ದು ಇವರಿಂದ ಒಂದಿಲ್ಲಾ ಒಂದು ಸಮಸ್ಯ ಎದುರಿಸುವಂತಾಗಿ ರೈತರು ತಮ್ಮ ಮಾನಕ್ಕೆ ಅಂಜಿ ಆತ್ಮಹತ್ಯ ಮಾಡಿಕೊಂಡ ಉದಾಹರಣೆಗಳು ತಾಲೂಕಿನಲ್ಲಿ ನಡೆದಿದ್ದು ಸಾಲವಸೂಲಾತಿಯನ್ನು ಈ ವರ್ಷ ಸಂಪೂರ್ಣ ಕೈಬಿಡಬೇಕೆಂದು ಆದೇಶ ಮಾಡಬೇಕು ಎಂದರು.
ಈ ವೇಳೆ ಜಿಲ್ಲಾ ಸಂಚಾಲಕ ನಜೀರ ನಂದರಗಿ, ಹೊನವಾಡ ಅಧ್ಯಕ್ಷ ಹಣಮಂತ ಬ್ಯಾಡಗಿ, ಮುಖಂಡರಾದ ಟೋಪುಗೌಡ ಪಾಟೀಲ, ಎಸ ಎಸ ಜಿದ್ದಿ, ಖಾದರಸಾಬ ಅ ವಾಲಿಕಾರ, ಗೈಬುಸಾಬ ರಾ ತಿಗಣಿಬಿದರಿ, ಎಸ ಎಸ ಹೊಸಮನಿ, ಮಾಹಾದೇವ ಕದಂ, ಎಂ ಡಿ ಖುರ್ಫಿ, ಸುಭಾಷ ವಳಸಂಗ, ಜಿ ಜಿ ಪವಾರ, ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

