ಮುದ್ದೇಬಿಹಾಳ: ಪರೀಕ್ಷಾ ಕರ್ತವ್ಯಕ್ಕೆ ನೇಮಿಸಿದ ಎಲ್ಲರೂ ಜಾಗರೂಕರಾಗಿ, ಕಟ್ಟು ನಿಟ್ಟಾಗಿ ಪರೀಕ್ಷೆಗಳನ್ನು ನಡೆಸಬೇಕು. ನಿಷ್ಕಾಳಜಿ ತೋರಿ ಪರೀಕ್ಷಾ ಪಾವಿತ್ಯ್ರಕ್ಕೆ ಧಕ್ಕೆ ತಂದಲ್ಲಿ ಅಂಥವರ ಮೇಲೆ ನಿರ್ದಾಕ್ಷಣ್ಯವಾಗಿ ಕ್ರಮ ಜರುಗಿಸುತ್ತೇನೆ ಎಂದು ತಹಶೀಲ್ದಾರ ಬಸವರಾಜ ನಾಗರಾಳ ಕೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಹತ್ತನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆ-೧ ರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರೀಕ್ಷೆಗಳಲ್ಲಿ ನಿಮಗೆ ನೀಡಲಾದ ಕರ್ತವ್ಯಗಳನ್ನು ಸರಿಯಾಗಿ ನಿಭಾಯಿಸಿದಲ್ಲಿ ಯಾವ ತೊಂದರೆಯೂ ಬರಲು ಸಾಧ್ಯವಿಲ್ಲ. ಒಂದು ವೇಳೆ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಯಾರಿಂದಲೂ ನನಗೆ ಕರೆ ಮಾಡಿಸಬೇಡಿ. ನಾನು ಯಾರ ಮಾತನ್ನೂ ಕೇಳುವದಿಲ್ಲ ಎಂದರು.
ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ವ್ವವಸ್ಥೆ ಸರಿಯಾಗಿ ನಿಭಾಯಿಸಿ. ಯಾರಾದರೂ ಖಾಸಗಿ ಶಾಲೆವರು ತಮ್ಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಕ್ರಮಕ್ಕೆ ಮುಂದಾದಲ್ಲಿ ಅಂಥವರ ಮೇಲೆ ಮುಲಾಜಿಲ್ಲದೆ ಸೂಕ್ತಕ್ರಮ ಜರುಗಿಸುತ್ತೇನೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಮಾತನಾಡಿದರು.
ತಾಲೂಕು ವೈದ್ಯಾಧಿಕಾರಿ ಸತೀಶ ತಿವಾರಿ ಮಾತನಾಡಿ ಸಧ್ಯ ಬೇಸಿಗೆಯ ತಾಪಮಾನ ೩೬ಡಿಗ್ರಿ ಇದ್ದು ಯಾವುದೇ ವಿದ್ಯಾರ್ಥಿಗೆ ತಲೆ ಸುತ್ತು ಬಂದಲ್ಲಿ ಕೆಲ ಸಮಯ ವಿಶ್ರಾಂತಿ ಪಡೆಯುವದು ಅವಶ್ಯ ಎಂದರು.
ತಾಲೂಕು ಪಂಚಾಯತ ಇಓ ಎಸ್.ಎಸ್.ಕಲ್ಮನಿ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಎ.ಎಚ್.ಮದಭಾವಿ, ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ, ಎಎಸ್‌ಐ ಕೆ.ಎಸ್.ಅಸ್ಕಿ ಸೇರಿದಂತೆ ಪರೀಕ್ಷಾ ಕೇಂದ್ರಗಳ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧೀಕ್ಷಕರು, ಸ್ಥನಿಕ ಜಾಗೃತದಳದವರು, ನೂಡಲ್ ಎಚ್.ಎ.ಮೇಟಿ ಇದ್ದರು.
Subscribe to Updates
Get the latest creative news from FooBar about art, design and business.
ಕಟ್ಟುನಿಟ್ಟಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಿ :ನಾಗರಾಳ
Related Posts
Add A Comment

