ಢವಳಗಿ: ಗ್ರಾಮದ ಶ್ರೀ ಮಡಿವಾಳೇಶ್ವರರ 517ನೇ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಚ್ 23 ಶನಿವಾರದಂದು ರಾಜ್ಯ ಮಟ್ಟದ ತರಬಂಡಿ ಸ್ಪರ್ಧೆ ಏರ್ಪಡಿಸಲಾಗಿದೆ.
ಸ್ಪರ್ಧೆಯಲ್ಲಿ ಒಟ್ಟು 10 ಬಹುಮಾನಗಳನ್ನು ಕೊಡಲಾಗುವುದು. ಒಂದನೇ ಬಹುಮಾನ ಮೋಟರ್ ಬೈಕ್(HF ಡಿಲಕ್ಸ್), ಎರಡನೇ ಬಹುಮಾನ 50000 ರೂ. ಮೂರನೇ ಬಹುಮಾನ 40000 ರೂ, 4ನೇ ಬಹುಮಾನ 30000, ಐದನೆಯ ಬಹುಮಾನ 25000 ರೂ, ಆರನೇ ಬಹುಮಾನ 20000 ರೂ, ಏಳನೆಯ ಬಹುಮಾನ 15000 ರೂ, ಎಂಟನೇ ಬಹುಮಾನ 10000 ರೂ, ಒಂಬತ್ತನೇ ಬಹುಮಾನ 7500 ರೂ, ಹತ್ತನೆಯ ಬಹುಮಾನ 5000 ರೂ. ಈ ರೀತಿಯಲ್ಲಿ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಎತ್ತುಗಳ ಮಾಲೀಕರು ಮೂವರನ್ನು ಹೊರತುಪಡಿಸಿ ಯಾರೂ ಬರುವಂತಿಲ್ಲ. ಎತ್ತುಗಳಿಗೆ ಹಿಂಸೆ ಮಾಡಬಾರದು, ಕಮೀಟಿಯವರಿಂದ ನಿಗದಿತ ಸಮಯ ನೀಡಲಾಗುವುದು, ಗಟ್ಟಿ ನೆಲದಲ್ಲಿ ಸ್ಪರ್ಧೆ ನಡೆಸಲಾಗುವುದು ಎಂದು ತರಬಂಡಿ ಸ್ಪರ್ಧೆಯ ಉಸ್ತುವಾರಿ ಸುರೇಶಗೌಡ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದರು.
9663497143 ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗೆ ಸಂಪರ್ಕಿಸಿರಿ.
Subscribe to Updates
Get the latest creative news from FooBar about art, design and business.
Related Posts
Add A Comment
