ಬಸವನಬಾಗೇವಾಡಿ: ವಿದ್ಯಾರ್ಥಿಗಳ ಜೀವನದ ಸುಂದರ ಬದುಕಿಗೆ ಹಾಗೂ ಆರೋಗ್ಯಕರ ಸಮಾಜ ಕಟ್ಟುವಲ್ಲಿ ಸ್ಕೌಟ್ಸ್ ಮತ್ತು ಗೈಡ್ಸನ ಶಿಸ್ತು ಮತ್ತು ಕೌಶಲ್ಯದ ಪಾತ್ರ ಮಹತ್ವದ್ದಾಗಿದೆ ಎಂದು ಭಾರತ ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕ ಉಪಾದ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಶಾಸಕರ ಮಾದರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಾರತ ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕಾ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಯಾದರೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಜೊತೆಗೆ ಕಲಿಕೆಯಲ್ಲೂ ಪ್ರಗತಿ ಸಾಧಿಸಲು ಸಾಧ್ಯ. ಎಲ್ಲ ಶಾಲಾ ಮಕ್ಕಳು ಸ್ಕೌಟ್ಸ್ ಮತ್ತು ಗೈಡ್ಸ್ ಸೇರ್ಪಡೆಗೊಳ್ಳುವಂತೆ ಶಿಕ್ಷಕರು ನೋಡಿಕೊಳ್ಳಬೇಕೆಂದರು.
ಸ್ಕೌಟ್ಸ್ ಮತ್ತು ಗೈಡ್ಸನ ತಾಲೂಕು ಕಾರ್ಯಾಧ್ಯಕ್ಷ ಶೇಖರ ಗೊಳಸಂಗಿ ಸಮಾವೇಶದ ಅದ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡ ಮಹೇಶ ಮುಳವಾಡ, ಮಹಿಳಾ ಉಪಾದ್ಯಕ್ಷೆ ಡಾ. ವೀಣಾ ಗುಳೇದಗುಡ್ಡ, ಸ್ವರೂಪರಾಣಿ ಬಿಂಜಲಬಾವಿ, ಸೀತವ್ವ ವಾಡೇದ, ಶಿಕ್ಷಕರಾದ ಎಸ್. ಎಸ್. ಅವಟಿ, ಜಗದೀಶ ಬುಸೂರ, ಬೊಮ್ಮನಹಳ್ಳಿ ,ರಾಜಶೇಖರ ಖೇಡಗಿ ,ಶ್ರೀಮತಿ ಪೂಜಾರಿ ಇತರರು ಇದ್ದರು.
ಮಲ್ಲು ಅವಟಿ ಸ್ವಾಗತಿಸಿದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸದ ತಾಲೂಕ ಕಾರ್ಯದರ್ಶಿ ಶಿವಶಂಕರ ಹುಬ್ಬಳ್ಳಿ ನಿರೂಪಿಸಿದರು. ಮಲ್ಲು ಅವಟಿ ಸ್ವಾಗತಿಸಿದರು. ಜಿ. ಡಿ. ಪಾಟೀಲ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

