ಚಿಮ್ಮಡ: ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಬಟಕುರ್ಕಿ ಇಫ್ಕೋ ನವದೇಹಲಿಯ ಪ್ರಾದೇಶಿಕ ಸಾಮಾನ್ಯ ಮಂಡಳಿಯ (ಆರ್‌ಜಿಬಿ) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷಗಳ ಅವಧಿಗಾಗಿ ಹುಬ್ಬಳ್ಳಿ ವೀಭಾಗೀಯ (ಎಂಟು ಜಿಲ್ಲೆಗಳನ್ನೊಳಗೊಂಡ) ಮಟ್ಟದಲ್ಲಿ ನಡೆದ ಚುನಾವಣೆಯಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮೊತ್ತದ ಠೇವಣಿ ಹೊಂದಿರುವ ಪ್ರತೀಷ್ಠಿತ ೬೪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಪಧಾದಿಕಾರಿಗಳು ಮತದಾನಕ್ಕೆ ಅರ್ಹತೆ ಹೊಂದಿದ್ದು, ಬಾಗಲಕೋಟ ಜಿಲ್ಲೆಯ ಪ್ರತಿನಿಧಿಯಾಗಿ ಸ್ಪರ್ದಿಸಿದ್ದ ಶಂಕರ ಬಟಕುರ್ಕಿ ಅನಾಯಾಸವಾಗಿ ಆಯ್ಕೆಯಾಗಿದ್ದಾರೆಂದು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಕಾರ್ಯ ನಿರ್ವಾಹಕ ಅಧಿಕಾರಿ ಮುರಿಗೆಪ್ಪ ವಜ್ಜರಮಟ್ಟಿ ತಿಳಿಸಿದ್ದಾರೆ.
ಶಂಕರ ಬಟಕುರ್ಕಿ ಅವರನ್ನು ಸ್ಥಳಿಯ ಗ್ರಾಂ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಮೋಟಗಿ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಾ ಗೋವಿಂದಗೋಳ ಸೇರಿದಂತೆ ಸದಸ್ಯರು ಹಾಗೂ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.
ಸನ್ಮಾನ; ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾದ ಶಂಕರ ಬಟಕುರ್ಕಿ ಇಫ್ಕೋ ನವದೇಹಲಿಯ ಪ್ರಾದೇಶಿಕ ಸಾಮಾನ್ಯ ಮಂಡಳಿಯ (ಆರ್‌ಜಿಬಿ) ಸದಸ್ಯರಾಗಿ ಆಯ್ಕೆಯಾದ ಪ್ರಯುಕ್ತ ಸಂಘದ ಆಡಳಿತ ಮಂಡಳಿ ಹಾಗೂ ಸಿಬ್ಬಂದಿವರ್ಗದಿಂದ ಗುರುವಾರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಪಾಧ್ಯಕ್ಷರಾದ ವಿರುಪಾಕ್ಷ ಕುದರಿ, ನಿಂಗಪ್ಪ ಪೂಜಾರಿ, ಹಣಮಂತ ನೇಸೂರ, ಮಲ್ಲಪ್ಪ ಜಾಂಗನೂರ, ರಾಮಪ್ಪ ಜಗದಾಳ, ಚನ್ನಪ್ಪ ಬಿಳ್ಳೂರ, ಸಿದ್ರಾಮ ಮುನ್ನೋಳಿ, ಶ್ರೀಮತಿ ಅಣ್ಣಪೂರ್ಣ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

