Author: editor.udayarashmi@gmail.com

ವಿಜಯಪುರ: ಮಾ.೨೮ ರಿಂದ ೩೦ ರವರೆಗೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ನಗರದ ಕಲಾವಿದ ರಮೇಶ ಚವ್ಹಾಣ ಮತ್ತು ಛಾಯಾಗ್ರಾಹಕ ಸತೀಶ ಕಲಾಲ ಅವರ ಚಿತ್ರಕಲೆ ಮತ್ತು ಛಾಯಾಚಿತ್ರಗಳ ಪ್ರದರ್ಶನವನ್ನು ದೃಶ್ಯಕಲಾ ಮಹಾವಿದ್ಯಾಲಯ, ದಾವಣಗೆರೆ ಇದರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೧.೩೦ ಗಂಟೆಗೆ ಈ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮಕ್ಕೆ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜೈರಾಜ ಎಂ ಚಿಕ್ಕಪಾಟೀಲ ಇವರು ಅಧ್ಯಕ್ಷರಾಗಿಯೂ, ನಗರದ ಹಿರಿಯ ಪತ್ರಕರ್ತರು ಹಾಗೂ ಸಾಹಿತಿಗಳಾದ ಬಿ.ಎನ್.ಮಲ್ಲೇಶ್ರವರು ಉದ್ಘಾಟಕರಾಗಿಯೂ, ಬಾಲಾಜಿ ಪ್ರೇಮಿಂಗ್ ಬೆಂಗಳೂರು ಇದರ ಮುಖ್ಯಸ್ಥರಾದ ಡಾ. ಪ್ರಶಾಂತ ಹೆಗಡೆಯವರು ಮುಖ್ಯ ಅತಿಥಿಯಾಗಿಯೂ ಪಾಲ್ಗೊಳ್ಳಲಿದ್ದು, ಕಲಾ ವಿಮರ್ಶಕ ದತ್ತಾತ್ರೇಯ ಎನ್ ಭಟ್ ಇವರು ಕಲಾ ಪ್ರದರ್ಶನ ಕುರಿತು ಆಶಯ ನುಡಿಗಳನ್ನಾಡಲಿದ್ದಾರೆ. ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಸತೀಶಕುಮಾರ್ ಪಿ ವಲ್ಲೇಪುರೆಯವರು ಗೌರವ ಉಪಸ್ಥಿತರಿರುವರು. ಈ ಕಲಾ ಪ್ರದರ್ಶನದಲ್ಲಿ ಚಿತ್ರಕಲಾಕೃತಿಗಳು ಹಾಗೂ ಛಾಯಾಚಿತ್ರಗಳು ಸೇರಿ ಒಟ್ಟು ಸುಮಾರು ೫೦ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.ಕ್ಯಾನವಾಸಿನ ಮೇಲೆ…

Read More

ಢವಳಗಿ: ಸಮೀಪದ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಮಾಚ್೯ 29 ರಿಂದ ಎಪ್ರಿಲ್‌ 3ರ ವರೆಗೆ ಜರುಗಲಿದೆ. ಮಾರ್ಚ್ 29 ಮುಂಜಾನೆ 11ಗಂಟೆಗೆ ದೇವಸ್ಥಾನದ ಆವರಣದಲ್ಲಿದ್ದ ದೇವಿಗೆ ಉಡಿ ತುಂಬುವುದು. ಅಂದೆ ಸಂಜೆ 7 ಗಂಟೆಯಿಂದ ಎಪ್ರಿಲ್ 2ರ ವರೆಗೆ ಪ್ರತಿದಿನ ವೇದ ಮೂರ್ತಿ ಚೆನ್ನಮಲ್ಲಯ್ಯ ಹೀರೆಮಠ ಇವರಿಂದ ಮಹಾಪುರಾಣ ಜರುಗುವುದು. ಮಾರ್ಚ್ 2ರಂದು ಸಾಯಂಕಾಲ 4ಗಂಟೆಗೆ ಬ್ಯಾಕೋಡ ಗ್ರಾಮದ ಬಸನಗೌಡ ನರಸಲಗಿ ಮತ್ತು ಗ್ರಾಮಸ್ಥರಿಂದ ಅಗ್ನಿಪೂಜೆ ಕಾರ್ಯಕ್ರಮ ಜರುಗುವುದು. ಅಂದೆ ಸಂಜೆ 8 ಗಂಟೆಗೆ ಪುರಾಣ ಮಂಗಲೋತ್ಸವ ಮಾಡುವುದು. ನಂತರ ಕೊಡೆಕಲ್ ಬಸವೇಶ್ವರ ಪಲ್ಲಕ್ಕಿ, ಲಕ್ಕಮ್ಮ ದೇವಿ ಪಲ್ಲಕ್ಕಿ, ಕೆಂಚರಾಯ ಪಲ್ಲಕ್ಕಿ, ಲಗಮವ್ವದೇವಿ ಪಲ್ಲಕ್ಕಿ,ಹಾಗೂ ಯಲ್ಲಾಲಿಂಗೇಶ್ವರರ ಪಲ್ಲಕ್ಕಿಯು ಸೇರಿ ಗಂಗಾಸ್ಥಳ ಮಾಡಿಕೊಂಡು ಮರಳಿ ಮಠಕ್ಕೆ ಸಕಲ ವಾದ್ಯ ವೈಭವದೊಂದೆಗೆ ಬರಮಾಡಿಕೊಳ್ಳುವುದು. ಅಂದೇ ರಾತ್ರಿ 10 ಗಂಟೆಗೆ ಡೊಳ್ಳಿನ ಹಾಡಕಿ ಜರುಗುವುದು. ಎಪ್ರಿಲ್ 3 ಬುಧವಾರದಂದು ಮುಂಜಾನೆ 8 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಮತ್ತು ಯಲ್ಲಾಲಿಂಗೇಶ್ವರರ ಗದ್ದುಗೆಗೆ…

Read More

ವಿಜಯಪುರ: ಲೋಕಸಭೆ ಚುನಾವಣೆ ನಿಮಿತ್ತ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ದಿ.28 ಗುರುವಾರ ಮ.12ಗಂ. ನಗರದ ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಮಹತ್ವದ ಸಭೆ ಜರುಗಲಿದೆ.ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಜವಳಿ, ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ, ಶಾಸಕರಾದ ಅಪ್ಪಾಜಿ ನಾಡಗೌಡ, ಯಶವಂತರಾಯಗೌಡ ಪಾಟೀಲ, ವಿಠ್ಠಲ ಕಟಕದೊಂಡ, ಅಶೋಕ ಮನಗೂಳಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಪ್ರಕಾಶ ರಾಠೋಡ, ಸುನೀಲಗೌಡ ಪಾಟೀಲ, ಇವರ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ.ಈ ಸಭೆಯಲ್ಲಿ ವಿಜಯಪುರ ಲೋಕಸಭಾ ಚುನಾವಣಾ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸುವ ಚರ್ಚೆ ನಡೆಯಲಿದ್ದು, ಜಿಲ್ಲಾ ಕಾಂಗ್ರೆಸ್ ಸಮಿತಿಯ ಎಲ್ಲ ಪದಾಧಿಕಾರಿಗಳು, ಮಾಜಿ ಶಾಸಕರು, ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ವಿವಿಧ ಅಂಗಘಟಕದ ಪದಾಧಿಕಾರಿಗಳು ಕಡ್ಡಾಯವಾಗಿ ಈ ಸಭೆಯಲ್ಲಿ ಪಾಲ್ಗೊಳ್ಳಲು ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಒಂದು ಕ್ಷಣ ಕಣ್ಣು ಮುಚ್ಚಿಕೊಂಡು ಈ ಜಗತ್ತನ್ನು ಕಲ್ಪನೆ ಮಾಡಿಕೊಳ್ಳಿ ಎಲ್ಲವೂ ಕೇವಲ ಬಿಳಿ ಇಲ್ಲವೇ ಕೇವಲ ಕಪ್ಪು ಬಣ್ಣವನ್ನು ಹೊಂದಿದ್ದರೆ ಹೇಗಿರುತ್ತದೆ ಎಂದು???. ಬೆಳ್ಳನೆಯ ಮೋಡ, ಬೆಳ್ಳನೆಯ ವಿಶಾಲ ಸಮುದ್ರ, ಬೆಳ್ಳನೆಯ ಗಿಡ ಮರಗಳು, ಬೆಳ್ಳನೆಯ ರಸ್ತೆಗಳು, ಬೆಳ್ಳನೆಯ ದೇಹದ ಆಕೃತಿಗಳು ಅಬ್ಬಬ್ಬಾ ಯಾವುದೂ ಚೆನ್ನಾಗಿರುವುದಿಲ್ಲ. ಅಷ್ಟರಲ್ಲಿಯೇ ಕಪ್ಪು ಮತ್ತು ಬಿಳಿ ಎರಡು ಬಣ್ಣಗಳನ್ನು ಕೂಡಿಸಿದ ಬಣ್ಣ ತುಸು ಹೆಚ್ಚೇ ಮನಮೋಹಕ ಎನಿಸುತ್ತದೆ.ಆದರೆ ಹಲವಾರು ಬಣ್ಣಗಳನ್ನು ಹೊಂದಿರುವ ಈ ಪ್ರಕೃತಿ ಅತ್ಯಂತ ಸುಂದರ, ನಯನ ಮನೋಹರವಾಗಿರುತ್ತದೆ. ಬಣ್ಣವಿಲ್ಲದ ಬದುಕು ಬರಡು ಎನಿಸುತ್ತದೆ. ಆಕಾಶದಲ್ಲಿ ತಿಳಿ ನೀಲಿ ಮೋಡಗಳು ಮತ್ತು ಕಪ್ಪು ಮೋಡಗಳು, ಹಸಿರು ಹಾಸಿದ ಗಿಡಮರಗಳು, ಆಕಾಶದ ನೀಲಿಯನ್ನೇ ಹೊದ್ದ ತಿಳಿ ನೀಲ ಸಾಗರ, ಕಪ್ಪನೆಯ ಟಾರು ರಸ್ತೆಗಳು, ಬೆಳ್ಳನೆಯ ಬೆಳ್ಳಕ್ಕಿಗಳು, ವಿಧವಿಧ ಬಣ್ಣದ ಪಕ್ಷಿಗಳು, ಪ್ರಾಣಿಗಳು ಹೀಗೆ ಬಣ್ಣಮಯ ಲೋಕ ನಮ್ಮದು. ಈ ಬಣ್ಣ ಬಣ್ಣದ ಲೋಕವನ್ನು ಬಣ್ಣಿಸಲು ಪದಗಳು…

Read More

ಕೊಲ್ಹಾರ: ಸಂಸದ ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ, ಇದು ವಾಸ್ತವ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರು ಹೇಳಿದರು.ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎರಡು ಸಲ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ. ಜಿಲ್ಲೆಗಾಗಿ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳಿಲ್ಲ. ಇದು ಬದಲಾವಣೆ ಕಾಲವಾಗಿದ್ದು, ನನಗೆ ಅವಕಾಶ ನೀಡಿದರೆ ನನ್ನ ಅನುಭವ ಹಾಗೂ ಪ್ರಾಮಾಣಿಕ ಶ್ರಮದಿಂದ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದು ಹೇಳಿದರು.ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಾತನಾಡಿ, ಮೂರು ಸಲ ಅಧಿಕಾರದಲ್ಲಿರುವ ಸದ್ಯದ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಸದ್ಯದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು, ಅಭಿವೃದ್ಧಿ ಪರ ಚಿಂತಕರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ನಮಗೆಲ್ಲ ಅನಿವಾರ್ಯವಾಗಿದೆ. ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಸಾಮಾನ್ಯ ಜನರೂ ಜಿಗಜಿಣಗಿಯವರಿಂದ ಜುಗುಪ್ಸೆ ಹೊಂದಿದ್ದಾರೆ…

Read More

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ದಾಖಲೆ ಸಹಿತ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಬೆಂಗಳೂರು: ಗ್ಯಾರಂಟಿಗೆ ಕೇಂದ್ರ ಸರ್ಕಾರದ ನಯಾಪೈಸೆಯೂ ಬೇಕಾಗಿಲ್ಲ. ನಮ್ಮ ಗ್ಯಾರಂಟಿಗೆ ಬೇಕಾದ ಹಣವನ್ನು ನಾವೇ ಹೊಂದಿಸುತ್ತಿದ್ದೇವೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿದ್ದಾರೆ.ರಾಜ್ಯಕ್ಕೆ ಜಿಎಸ್‌ಟಿ ತೆರಿಗೆ ಹಂಚಿಕೆ ಬಾಕಿ ಬಗ್ಗೆ ಭಾನುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಸಚಿವೆ ನಿರ್ಮಲಾ ಸೀತಾರಾಮನ್, ಕರ್ನಾಟಕಕ್ಕೆ ನೀಡಬೇಕಿರುವ ತೆರಿಗೆ ಪಾಲಿನಲ್ಲಿ ಯಾವುದೇ ಹಣ ಬಾಕಿ ಇಲ್ಲ ಎಂದು ಹೇಳಿದ್ದರು. ಇದರ ಬೆನ್ನಿಗೆ ಸೋಮವಾರ ವಿಕಾಸಸೌಧದಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಸಚಿವ ಕೃಷ್ಣ ಬೈರೇಗೌಡ ಅವರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಾರೆ.ಕರ್ನಾಟದಿಂದ ರಾಜ್ಯಸಭೆಗೆ ಆಯ್ಕೆಯಾದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದಲೇ ರಾಜ್ಯಕ್ಕೆ ತೆರಿಗೆ ಹಂಚಿಕೆ ಅನುದಾನದಲ್ಲಿ ಅನ್ಯಾಯವಾಗುತ್ತಿದೆ. ಮಾರ್ಚ್‌ 31ಕ್ಕೆ ಅವರು ಮೈಸೂರಿಗೆ ಆಗಮಿಸುತ್ತಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಅವರು ಸಿದ್ದರಿದ್ದಾರ? ಯಾವುದೇ ರಾಜ್ಯಕ್ಕೆ 2019- 20ರಲ್ಲಿ ಕೊಟ್ಟಿದ್ದಕ್ಕಿಂತ ಕಡಿಮೆ ಅನುದಾನವನ್ನು ಕೊಡುವಂತಿಲ್ಲ ಎಂದು ಹಣಕಾಸು…

Read More

ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ಅಖಂಡ ತಾಲೂಕಿನಲ್ಲಿ ಸೋಮವಾರ ಎಸ್ಎಸ್ಎಲ್ಸಿ ಪರೀಕ್ಷೆಗಳು ಸೋಮವಾರ ಆರಂಭವಾದವು. ಅಖಂಡ ತಾಲೂಕಿನಲ್ಲಿ ಒಟ್ಟು ೧೮ ಪರೀಕ್ಷಾ ಕೇಂದ್ರಗಳಿದ್ದು. ಒಟ್ಟು ೫,೫೨೩ ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಇಂದು ೧೧೦ ವಿದ್ಯಾರ್ಥಿಗಳು ಗೈರು ಉಳಿಯುವ ಮೂಲಕ ಒಟ್ಟು ೫,೪೧೩ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆದರು.ನಿಡಗುಂದಿಯ ಜಿವಿವಿಎಸ್ ಪ್ರೌಢಶಾಲೆಯಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ೪೭೦ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ೧೮ ಪರೀಕ್ಷಾ ಕೇಂದ್ರಗಳಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳು ಇರುವ ಪರೀಕ್ಷಾ ಕೇಂದ್ರವಾಗಿದೆ. ಹುಣಶ್ಯಾಳ ಪಿಬಿ ಗ್ರಾಮದ ಹತ್ತಿರುವಿರುವ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಒಟ್ಟು ೧೭೭ ವಿದ್ಯಾರ್ಥಿಗಳು ಇರುವದರಿಂದಾಗಿ ಇದು ಅತಿ ಕಡಿಮೆ ಇರುವ ಪರೀಕ್ಷಾ ಕೇಂದ್ರವಾಗಿದೆ.ಪಟ್ಟಣದ ಬಾಲಕಿಯರು ಸರ್ಕಾರಿ ಪ್ರೌಢಶಾಲೆಯ ಸುತ್ತಮುತ್ತ ನಕಲು ಕೊಡಲು ಜನರು ಓಡಾಡುವ ದೃಶ್ಯಕಂಡುಬಂದಿತ್ತು. ಒಂದೆಡೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ನಕಲು ಮುಕ್ತ, ಪಾರದರ್ಶಕವಾಗಿ ನಡೆಯುವಂತೆ ಶಿಕ್ಷಣ ಇಲಾಖೆಯು ಕಟ್ಟುನಿಟ್ಟಾಗಿ ಕ್ರಮ ಕೈಗೊಂಡರೂ ಇದು ಸೋಮವಾರ ಕಂಡುಬಂದಿತ್ತು. ಅಧಿಕಾರಿಗಳು ಇದರ ಕಡೆಗೆ ಕಟ್ಟುನಿಟ್ಟಿನ ಕ್ರಮ…

Read More

ಬಸವನಬಾಗೇವಾಡಿ: ಪಟ್ಟಣದ ಬಸಜನ್ಮ ಸ್ಮಾರಕದ ಹತ್ತಿರದ ನಿವಾಸಿ, ಪುರಸಭೆ ಸದಸ್ಯ ಅಶೋಕ ಹಾರಿವಾಳ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸೋಮವಾರ ತಮ್ಮ ಬೆಂಗಳೂರಿನ ಕಚೇರಿಯಲ್ಲಿ ನೇಮಕ ಪತ್ರವನ್ನು ಅಶೋಕ ಹಾರಿವಾಳ ಅವರಿಗೆ ನೀಡಿದರು.ಅವರು ನೀಡಿದ ನೇಮಕ ಪತ್ರದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕರವೇಯಲ್ಲಿ ಅಶೋಕ ಹಾರಿವಾಳ ದುಡಿಯುತ್ತಾ ಬಂದಿದ್ದಾರೆ. ಇವರ ಸಂಘಟನಾ ಶಕ್ತಿಯನ್ನು ಗುರುತಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಜೊತೆಗೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಉಸ್ತುವಾರಿಯನ್ನಾಗಿ ಸಹ ನೇಮಕ ಮಾಡಿದೆ. ಇವರು ಈ ಗುರುತರ ಜವಾಬ್ದಾರಿಯ್ನು ವಹಿಸಿಕೊಂಡು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ತಿಳಿಸಲಾಗಿದೆ.

Read More

ಬಸವನ ಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಹೋಳಿ ಹಬ್ಬದಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.ಪಟ್ಟಣದಲ್ಲಿ ಸೋಮವಾರ ವಾರದ ಸಂತೆ ಇರುವದರಿಂದಾಗಿ ಬಹುತೇಕ ಬಣ್ಣದಾಟ ಕಳೆಗುಂದಿರವುದು ಕಂಡುಬಂದಿತ್ತು. ಎಂದಿನಂತೆ ಎಲ್ಲ ಅಂಗಡಿ-ಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಕಳೆದ ವಾರಕ್ಕಿಂತಲೂ ಇಂದು ಬಿಸಿಲು ಹೆಚ್ಚಾಗಿರುವುದು ಕಂಡುಬಂದಿತ್ತು. ಬಸವನಬಾಗೇವಾಡಿ ಪಟ್ಟಣದಲ್ಲಿ ಇಂದು ೩೭ ರಿಂದ ೩೮ ಡಿಗ್ರಿ ಸೆ. ಇತ್ತು. ವಿಪರೀತ ಬಿಸಿಲಿನ ಪರಿಣಾಮವಾಗಿ ವಿಪರೀತ ಸೆಕೆ ವಾತಾವರಣದಿಂದ ಜನರು ಬೇಸತ್ತು ಹೋದರು. ಬಿರು ಬಿಸಿಲಿನಿಂದಾಗಿ ಜನರು ಸುಸ್ತಾದರು. ಬಣ್ಣದ ಹಬ್ಬವಿರುವದರಿಂದಾಗಿ ವಿವಿಧೆಡೆಗಳಿಂದ ಕಡಿಮೆ ಪ್ರಮಾಣದಲ್ಲಿ ಜನರು ಬಂದಿದ್ದರು.ಕೆಲ ಯುವಕರು, ಚಿಣ್ಣರು ಮಾತ್ರ ಬಣ್ಣದಾಟದಲ್ಲಿ ಕೆಲ ಹೊತ್ತು ಮಾತ್ರ ತೊಡಗಿಕೊಂಡರು. ವಿಶೇಷವಾಗಿ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡುಬಂದಿತ್ತು. ಇಂದು ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ, ೫,೮,೯ ನೇ ತರಗತಿಯ ಮೌಲ್ಯಂಕನ ಪರೀಕ್ಷೆಗಳು ಬಣ್ಣದಾಟದ ಮೇಲೆ ಪರಿಣಾಮ ಬೀರಿತು. ಪಟ್ಟಣದ ಹಿರಿಯರು ಬಹುತೇಕ ಬಣ್ಣದಾಟದಿಂದ ದೂರ…

Read More

ಕೆಂಭಾವಿ: ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಸೋಮವಾರ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸಲಾಯಿತು.ಇದೇ ಸಂದರ್ಭದಲ್ಲಿ ಪುರಸಭೆ ನಾಮಿನೇಟ್ ಸದಸ್ಯರಾದ ಶ್ರೀಮತಿ ಸಂಗಮ್ಮ ರಾವುತಪ್ಪ ಯೆರಗಲ್, ಶಿವಶಂಕರ್ ಖಾನಾಪುರ್, ಪರಶುರಾಮ್ ಬಳಬಟ್ಟಿ, ದೌಲಸಾಬ್ ಖಾಜಿ, ದೇವೇಂದ್ರಪ್ಪ ಟಣಿಕೆದಾರ ಇವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಲಾಲಪ್ಪ ಆಲ್ಹಾಳ, ಶಿವಸರಣಪ್ಪ ವಾಡಿ, ಮಾಡಿವಾಳಪ್ಪ ಕಿರದಳಿ, ಮರೆಪ್ಪ ಮಾಲಹಳ್ಳಿ, ಶರಣಪ್ಪ ನಗನೂರ, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಸುಭಾಸ ಕಟ್ಟಿಮನಿ, ಯಲಪ್ಪ ಬಾವಿಮನಿ, ಬಂದೆನವಾಜ್, ಪ್ರಕಾಶ್ ಮಾಳಳ್ಳಿಕರ್, ಸಿದ್ದು ಬಸರಿಗೇಡ, ಮರೆಪ್ಪ ಇಂಗಳಗಿ, ಅರುಣ ಮಾಳಳ್ಳಿಕರ್, ಶರಣು ಕರಡ್ಕಲ್, ಸಚಿನ್ ಯತ್ನಾಳ್ ಸೇರಿದಂತೆ ಇತರರು ಇದ್ದರು.

Read More