ಬಸವನಬಾಗೇವಾಡಿ: ಪಟ್ಟಣದ ಬಸಜನ್ಮ ಸ್ಮಾರಕದ ಹತ್ತಿರದ ನಿವಾಸಿ, ಪುರಸಭೆ ಸದಸ್ಯ ಅಶೋಕ ಹಾರಿವಾಳ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಸೋಮವಾರ ತಮ್ಮ ಬೆಂಗಳೂರಿನ ಕಚೇರಿಯಲ್ಲಿ ನೇಮಕ ಪತ್ರವನ್ನು ಅಶೋಕ ಹಾರಿವಾಳ ಅವರಿಗೆ ನೀಡಿದರು.
ಅವರು ನೀಡಿದ ನೇಮಕ ಪತ್ರದಲ್ಲಿ ಕಳೆದ ಹದಿನೈದು ವರ್ಷಗಳಿಂದ ಕರವೇಯಲ್ಲಿ ಅಶೋಕ ಹಾರಿವಾಳ ದುಡಿಯುತ್ತಾ ಬಂದಿದ್ದಾರೆ. ಇವರ ಸಂಘಟನಾ ಶಕ್ತಿಯನ್ನು ಗುರುತಿಸಿ ಕರ್ನಾಟಕ ರಕ್ಷಣಾ ವೇದಿಕೆಯು ಇವರನ್ನು ರಾಜ್ಯ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಜೊತೆಗೆ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಉಸ್ತುವಾರಿಯನ್ನಾಗಿ ಸಹ ನೇಮಕ ಮಾಡಿದೆ. ಇವರು ಈ ಗುರುತರ ಜವಾಬ್ದಾರಿಯ್ನು ವಹಿಸಿಕೊಂಡು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಿ ಕಿತ್ತೂರು ಕರ್ನಾಟಕ ಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ತಿಳಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

