ಢವಳಗಿ: ಸಮೀಪದ ರೂಡಗಿ ಗ್ರಾಮದ ಶ್ರೀ ಯಲ್ಲಾಲಿಂಗ ಮಹಾರಾಜರ ಜಾತ್ರಾ ಮಹೋತ್ಸವ ಮಾಚ್೯ 29 ರಿಂದ ಎಪ್ರಿಲ್ 3ರ ವರೆಗೆ ಜರುಗಲಿದೆ. ಮಾರ್ಚ್ 29 ಮುಂಜಾನೆ 11ಗಂಟೆಗೆ ದೇವಸ್ಥಾನದ ಆವರಣದಲ್ಲಿದ್ದ ದೇವಿಗೆ ಉಡಿ ತುಂಬುವುದು. ಅಂದೆ ಸಂಜೆ 7 ಗಂಟೆಯಿಂದ ಎಪ್ರಿಲ್ 2ರ ವರೆಗೆ ಪ್ರತಿದಿನ ವೇದ ಮೂರ್ತಿ ಚೆನ್ನಮಲ್ಲಯ್ಯ ಹೀರೆಮಠ ಇವರಿಂದ ಮಹಾಪುರಾಣ ಜರುಗುವುದು. ಮಾರ್ಚ್ 2ರಂದು ಸಾಯಂಕಾಲ 4ಗಂಟೆಗೆ ಬ್ಯಾಕೋಡ ಗ್ರಾಮದ ಬಸನಗೌಡ ನರಸಲಗಿ ಮತ್ತು ಗ್ರಾಮಸ್ಥರಿಂದ ಅಗ್ನಿಪೂಜೆ ಕಾರ್ಯಕ್ರಮ ಜರುಗುವುದು. ಅಂದೆ ಸಂಜೆ 8 ಗಂಟೆಗೆ ಪುರಾಣ ಮಂಗಲೋತ್ಸವ ಮಾಡುವುದು. ನಂತರ ಕೊಡೆಕಲ್ ಬಸವೇಶ್ವರ ಪಲ್ಲಕ್ಕಿ, ಲಕ್ಕಮ್ಮ ದೇವಿ ಪಲ್ಲಕ್ಕಿ, ಕೆಂಚರಾಯ ಪಲ್ಲಕ್ಕಿ, ಲಗಮವ್ವದೇವಿ ಪಲ್ಲಕ್ಕಿ,ಹಾಗೂ ಯಲ್ಲಾಲಿಂಗೇಶ್ವರರ ಪಲ್ಲಕ್ಕಿಯು ಸೇರಿ ಗಂಗಾಸ್ಥಳ ಮಾಡಿಕೊಂಡು ಮರಳಿ ಮಠಕ್ಕೆ ಸಕಲ ವಾದ್ಯ ವೈಭವದೊಂದೆಗೆ ಬರಮಾಡಿಕೊಳ್ಳುವುದು. ಅಂದೇ ರಾತ್ರಿ 10 ಗಂಟೆಗೆ ಡೊಳ್ಳಿನ ಹಾಡಕಿ ಜರುಗುವುದು. ಎಪ್ರಿಲ್ 3 ಬುಧವಾರದಂದು ಮುಂಜಾನೆ 8 ಗಂಟೆಗೆ ಶ್ರೀ ಸಿದ್ಧಲಿಂಗೇಶ್ವರ ಮತ್ತು ಯಲ್ಲಾಲಿಂಗೇಶ್ವರರ ಗದ್ದುಗೆಗೆ ರುದ್ರಾಭಿಷೇಕ್ ಮಾಡುವುದು. ನಂತರ ನಂತರ ರೂಡಗಿ ಗ್ರಾಮದ ಅಕ್ಕಮಹಾದೇವಿ ಮಹಿಳಾ ಸಂಘದಿಂದ ಪಂಚಮೂಖಿ ಪಲ್ಲಕ್ಕಿಗಳಿಗೆ ಮಹಾಪೂಜೆ ಸಲ್ಲಿಸುವುದು. ನಂತರ 10 ಗಂಟೆಗೆ ಶ್ರೀ ಸಿದ್ಧಲಿಂಗ ದೇವರ ಸಮ್ಮುಖದಲ್ಲಿ ಶ್ರೀ ಯಲ್ಲಾಲಿಂಗ ಮಹಾರಾಜರು ರೂಡಗಿ, ಮತ್ತು ಶ್ರೀ ತಿಪ್ಪಣ್ಣ ಪೂಜಾರಿ ಹಳ್ಳೂರ ಅವರಿಂದ ಅಗ್ನಿ ಪ್ರವೇಶ ಆರಂಭಗೊಳ್ಳುವುದು. ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಜರುಗುವುದು. ಅಂದೇ ರಾತ್ರಿ 10 ಗಂಟೆಗೆ ದೈಗೊಂಡ ಗೌಡರ ಹಬ್ಬ ಅರ್ಥಾತ್ ಬಂಡಾರದ ಮಹಿಮೆ ಎಂಬ ಭಕ್ತಿ ಪ್ರಧಾನ ನಾಟಕ ಜರುಗುವುದು. ಎಂದು ಜಾತ್ರಾ ಕಮೀಟಿ ಹಾಗೂ ಮಠದ ಆರಾಧಕರಾದ ಶ್ರೀ ಯಲ್ಲಾಲಿಂಗ ಮಹಾರಾಜರು ಪ್ರಕಟಣೆಗೆ ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment
