ಕೊಲ್ಹಾರ: ಸಂಸದ ರಮೇಶ ಜಿಗಜಿಣಗಿಯವರಿಂದ ಏನೂ ಲಾಭವಾಗಿಲ್ಲ ಎನ್ನುವುದು ನಮ್ಮ ಟೀಕೆಯಲ್ಲ, ಇದು ವಾಸ್ತವ ಎಂದು ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ರಾಜು ಆಲಗೂರ ಅವರು ಹೇಳಿದರು.
ಪಟ್ಟಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಎರಡು ಸಲ ಚಿಕ್ಕೋಡಿ, ಮೂರು ಸಲ ವಿಜಯಪುರ ಎಂಪಿಯಾಗಿ ಅವರ ಸಾಧನೆ ಶೂನ್ಯ. ಜಿಲ್ಲೆಗಾಗಿ ಒಂದೇ ಒಂದು ಪ್ರಶ್ನೆಯನ್ನೂ ಅವರು ಕೇಳಿಲ್ಲ. ಇದು ಬದಲಾವಣೆ ಕಾಲವಾಗಿದ್ದು, ನನಗೆ ಅವಕಾಶ ನೀಡಿದರೆ ನನ್ನ ಅನುಭವ ಹಾಗೂ ಪ್ರಾಮಾಣಿಕ ಶ್ರಮದಿಂದ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುತ್ತೇನೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಕಲ್ಲು ದೇಸಾಯಿ ಮಾತನಾಡಿ, ಮೂರು ಸಲ ಅಧಿಕಾರದಲ್ಲಿರುವ ಸದ್ಯದ ಸಂಸದರಿಂದ ಕೊಲ್ಹಾರ ಪಟ್ಟಣಕ್ಕೆ ಯಾವುದೇ ಉಪಯೋಗವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸದ್ಯದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಉತ್ತಮ ಸಂಘಟಕರು, ಅಭಿವೃದ್ಧಿ ಪರ ಚಿಂತಕರಾಗಿರುವುದರಿಂದ ಇವರನ್ನು ಗೆಲ್ಲಿಸುವುದು ನಮಗೆಲ್ಲ ಅನಿವಾರ್ಯವಾಗಿದೆ. ಜಿಲ್ಲೆ ಮತ್ತು ನಮ್ಮ ಪಟ್ಟಣದ ಪ್ರಗತಿಗೆ ಆಲಗೂರರು ಶ್ರಮಿಸಲಿದ್ದಾರೆ. ಸಾಮಾನ್ಯ ಜನರೂ ಜಿಗಜಿಣಗಿಯವರಿಂದ ಜುಗುಪ್ಸೆ ಹೊಂದಿದ್ದಾರೆ ಎಂದು ಹೇಳಿದರು.
ಮಲ್ಲು ದೇಸಾಯಿ, ಅಧ್ಯಕ್ಷ ಮುಸ್ಕಾನ್ ಶಿರಬೂರ, ರಫೀಕ್ ಪಕಾಲಿ, ಮುಖಂಡರಾದ ಬಿಎಸ್. ಪತಂಗಿ, ಕಮಲವ್ವ ಮಾಕಾಳಿ, ಗಂಗಾಧರ ಸಂಬಣ್ಣಿ, ಉಸ್ಮಾನ್ ಪಟೇಲ, ದಸ್ತೀಗರಸಾಬ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

