ಬಸವನ ಬಾಗೇವಾಡಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರ ಹೋಳಿ ಹಬ್ಬದಂಗವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಚಿಣ್ಣರು ಪರಸ್ಪರ ಬಣ್ಣ ಎರಚಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.
ಪಟ್ಟಣದಲ್ಲಿ ಸೋಮವಾರ ವಾರದ ಸಂತೆ ಇರುವದರಿಂದಾಗಿ ಬಹುತೇಕ ಬಣ್ಣದಾಟ ಕಳೆಗುಂದಿರವುದು ಕಂಡುಬಂದಿತ್ತು. ಎಂದಿನಂತೆ ಎಲ್ಲ ಅಂಗಡಿ-ಮುಂಗಟ್ಟುಗಳು ತೆರೆಯಲ್ಪಟ್ಟಿದ್ದವು. ಕಳೆದ ವಾರಕ್ಕಿಂತಲೂ ಇಂದು ಬಿಸಿಲು ಹೆಚ್ಚಾಗಿರುವುದು ಕಂಡುಬಂದಿತ್ತು. ಬಸವನಬಾಗೇವಾಡಿ ಪಟ್ಟಣದಲ್ಲಿ ಇಂದು ೩೭ ರಿಂದ ೩೮ ಡಿಗ್ರಿ ಸೆ. ಇತ್ತು. ವಿಪರೀತ ಬಿಸಿಲಿನ ಪರಿಣಾಮವಾಗಿ ವಿಪರೀತ ಸೆಕೆ ವಾತಾವರಣದಿಂದ ಜನರು ಬೇಸತ್ತು ಹೋದರು. ಬಿರು ಬಿಸಿಲಿನಿಂದಾಗಿ ಜನರು ಸುಸ್ತಾದರು. ಬಣ್ಣದ ಹಬ್ಬವಿರುವದರಿಂದಾಗಿ ವಿವಿಧೆಡೆಗಳಿಂದ ಕಡಿಮೆ ಪ್ರಮಾಣದಲ್ಲಿ ಜನರು ಬಂದಿದ್ದರು.
ಕೆಲ ಯುವಕರು, ಚಿಣ್ಣರು ಮಾತ್ರ ಬಣ್ಣದಾಟದಲ್ಲಿ ಕೆಲ ಹೊತ್ತು ಮಾತ್ರ ತೊಡಗಿಕೊಂಡರು. ವಿಶೇಷವಾಗಿ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಬಣ್ಣದಾಟದಲ್ಲಿ ತೊಡಗಿರುವುದು ಕಂಡುಬಂದಿತ್ತು. ಇಂದು ಆರಂಭವಾದ ಎಸ್ಎಸ್ಎಲ್ಸಿ ಪರೀಕ್ಷೆ, ೫,೮,೯ ನೇ ತರಗತಿಯ ಮೌಲ್ಯಂಕನ ಪರೀಕ್ಷೆಗಳು ಬಣ್ಣದಾಟದ ಮೇಲೆ ಪರಿಣಾಮ ಬೀರಿತು. ಪಟ್ಟಣದ ಹಿರಿಯರು ಬಹುತೇಕ ಬಣ್ಣದಾಟದಿಂದ ದೂರ ಉಳಿದುಕೊಂಡಿದ್ದರು. ಶುಕ್ರವಾರ ನಡೆಯಲಿರುವ ರಂಗಪಂಚಮಿಯಂದು ಬಣ್ಣದಾಟ ರಂಗೇರುವ ಸಾಧ್ಯತೆಯಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಬಣ್ಣದಾಟದಲ್ಲಿ ಹಿರಿಯರು ಸೇರಿದಂತೆ ಯುವಕರು, ಮಕ್ಕಳು ಭಾಗವಹಿಸುವ ಮೂಲಕ ಸಂಭ್ರಮ ಪಟ್ಟರು.
Subscribe to Updates
Get the latest creative news from FooBar about art, design and business.
Related Posts
Add A Comment

