Author: editor.udayarashmi@gmail.com

ಮುದ್ದೇಬಿಹಾಳ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಖಾಸ್ಗತೇಶ್ವರ ಮಠದಲ್ಲಿ ಸಂಜೀವಿನಿ ಯುವಕ ಸಂಘದ ವತಿಯಿಂದ ಪ್ರಸಾದ ಸೇವೆ ಕಲ್ಪಿಸಲಾಗಿತ್ತು.ಈ ವೇಳೆ ಸಂಘದ ಪ್ರಮುಖರಾದ ರಾಜೇಂದ್ರಗೌಡ ರಾಯಗೊಂಡ, ಪಿಡಿಓ ಮುತ್ತು ಗಣಾಚಾರಿ, ಶರಣು ಪಡದಾಳಿ, ಹರೀಶ ಬೆವೂರ ಮತ್ತೀತರರು ಮಾತನಾಡಿ, ಕಳೆದ ಮೂವತ್ತು ವರ್ಷದಿಂದ ಮಂತ್ರಾಲಯಕ್ಕೆ ತೆರಳುವ ಪಾದಯಾತ್ರಿಗಳಿಗೆ ಕುಶಲೋಪರಿ ವಿಚಾರಿಸಿ ರಾತ್ರಿಯ ಊಟ ಹಾಗೂ ಬೆಳಿಗ್ಗೆ ಉಪಹಾರ ಸೇವೆ ಕಲ್ಪಿಸುವ ಸೇವಾ ಕಾರ್ಯವನ್ನು ಸಂಜೀವಿನಿ ಯುವಕ ಸಂಘ ಮಾಡುತ್ತ ಬಂದಿದೆ. ನಮ್ಮೆಲ್ಲರ ಸ್ನೇಹಿತ ದಿ.ಶರಣು ಬೂದಿಹಾಳಮಠ ಅವರ ಮಾರ್ಗದರ್ಶನದಂತೆ ಈ ಸೇವೆಯಲ್ಲಿ ಪ್ರತಿಯೊಬ್ಬರೂ ಕಾಯಾ ವಾಚಾ ಮನಸಾ ತೊಡಗಿಕೊಳ್ಳುತ್ತೇವೆ ಎಂದರು.ಸೇವೆಯಲ್ಲಿ ರಮೇಶ ಕೆಂಧೂಳಿ, ಶಿವು ಬಿಜಾಪೂರ, ಅಶೋಕ ವನಹಳ್ಳಿ, ಶೇಖರ ಪತ್ತಾರ, ಮಹಾಂತೇಶ ಮಡಿವಾಳರ, ಸಂತು ಬಾವೂರ, ರಾಜು ಬಳ್ಳೊಳ್ಳಿ, ರಾಜು ಹೊಳಿ, ಮಹಾಂತೇಶ ಬೂದಿಹಾಳಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Read More

ವಿಜಯಪುರ: ೨೦೨೩-೨೪ನೇ ಸಾಲಿಗೆ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ, ಟಾಕಿಂಗ್ ಲ್ಯಾಪ್ಟಾಫ್ ಯೋಜನೆ, ಸಾಧನೆ ಸಲಕರಣೆಗಳ, ಶ್ರವಣದೋಷವುಳ್ಳವರಿಗೆ ಹೊಲಿಗೆ ಯಂತ್ರ, ದೃಷ್ಟಿದೋಷ ಹೊಂದಿರುವ ವಿಕಲಚೇನರಿಗೆ ಬ್ರೈಲ್ ಕಿಟ್ ಗಳಿಗಾಗಿ ಸುವಿಧಾ ವೆಬ್ ಸೈಟ್ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಈ ಯೋಜನೆಯನ್ನು ಡಿ.ಬಿ.ಟಿ ಒಳಪಡಿಸಿ, ಅರ್ಹ ವಿಕಲಚೇತನರು ಆನ್‌ಲೈನ್ ಮೂಲಕ ಹಾಗೂ ಭೌತಿಕವಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ೩೦-೦೧-೨೦೨೪ ಕಡೆಯ ದಿನವಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ – ರವಿ ರಾಠೋಡ ( ಮೊ.೯೦೦೩೫೫೫೩೩೩೭), ಇಂಡಿ – ಪರಶುರಾಮ ಭೋಸಲೆ (ಮೊ.೯೯೭೨೪೪೧೪೬೪), ಸಿಂದಗಿ – ಮುತ್ತುರಾಜ ಸಾತಿಹಾಳ (ಮೊ.೯೯೮೦೦೧೯೬೩೫), ಬಸವನ ಬಾಗೇವಾಡಿ – ಎಸ್. ಡಿ ಬಿರಾದಾರ (ಮೊ.೮೭೨೨೧೩೫೬೬೦) ಹಾಗೂ ಮುದ್ದೇಬಿಹಾಳ – ಎಸ್.ಕೆ. ಘಾಟಿ (ಮೊ.೯೭೪೦೬೮೨೯೭೯) ಕಚೇರಿ ದೂರವಾಣಿ ಸಂಖ್ಯೆ೦೮೩೫೨-೭೯೬೦೬೦ಗೆ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ರಾಜಶೇಖರ ದೈವಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಾನುವಾರ ಜಾತ್ರೆಯ ಹಿನ್ನೆಲೆಯಲ್ಲಿ ನಗರದ ತೊರವಿಗೆ ಮಂಗಳವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.ಮೂರು ವರ್ಷಗಳ ನಂತರ ಜಾನುವಾರಗಳ ಜಾತ್ರೆ ನಡೆಯುತ್ತಿರುವುದರಿಂದ ಸುಮಾರು ೨೦-೨೫ ಎಕರೆಯಲ್ಲಿ ಬಹಳ ವಿಜೃಂಭಣೆಯಿಂದ ಜಾತ್ರೆ ಆಯೋಜಿಸಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ಮಾಡಿದರು.ಜಾನುವಾರ ಜಾತ್ರೆಯ ಸಂದರ್ಭ ಯಾವುದೇ ಸಮಸ್ಯೆಯುಂಟಾಗದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.ಜಾತ್ರೆಗೆ ಬರಲು ಅನುಕೂಲವಾಗುವ ನಿಟ್ಟಿನಲ್ಲಿ ಸುಗಮ ರಸ್ತೆ ಹಾಗೂ ಬಸ್‌ಗಳ ವ್ಯವಸ್ಥೆ, ಜಾನುವಾರಗಳಿಗೆ ಕುಡಿಯುವ ನೀರು ಒದಗಿಸುವುದು, ಮೇವಿನ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಪಶುವೈದ್ಯರು ಮುಂಜಾಗ್ರತಾ ಕ್ರಮವಾಗಿ ಜಾತ್ರೆಯ ಸಂದರ್ಭದಲ್ಲಿ ಆಂಬ್ಯಲೆನ್ಸ್ ವೈದ್ಯಕೀಯ ಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು. ಯಾವುದೇ ಕೊರತೆ ಉಂಟಾಗದಂತೆ ಅಚ್ಚುಕಟ್ಟಾಗಿ ಜಾನುವಾರ ಜಾತ್ರೆ ವ್ಯವಸ್ಥಿತವಾಗಿ ಆಯೋಜನೆಗೆ ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭ ವಿಜಯಪುರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ಶಿಂಧೆ, ವಿಜಯಪುರ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೈಲಜಾ. ಎಂ.ವಿ ಹಾಗೂ…

Read More

ವಿಜಯಪುರ: ಇಂದು ನರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆಯ ಕುರಿತು ಭಾಗಿದಾರೊಂದಿಗೆ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಮಾತನಾಡಿ, ಅಪ್ರಾಪ್ತರು ಗರ್ಭಿಣಿ ಕುರಿತು ಫೋಕ್ಸೋ ಅದೇಶದಂತೆ ಪೋಲಿಸರ ಗಮನಕ್ಕೆ ತಂದು ಪ್ರಕರಣ ದಾಖಲಿಸಿಕೊಳ್ಳುವತ್ತ ಆರೋಗ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.ಸಶಕ್ತ ಸಧೃಢ ಉತ್ತಮ ಸಮಾಜದ ಬೆಳವಣಿಗೆ ಗರ್ಭಿಣಿಯರ ಹಾಗೂ ತಾಯಂದಿರುಗಳು ಮಗುವಿನ ಉತ್ತಮ ಬೆಳೆವಣಿಗೆಗಾಗಿ ಆರೋಗ್ಯ ಕಡೆ ಹೆಚ್ಚು ನಿಗಾ ವಹಿಸಬೇಕು. ಸಮತೋಲನ ಹಾಗೂ ಪೌಷ್ಟಿಕ ಆಹಾರ ಅತ್ಯವಶ್ಯವಾಗಿದ್ದು ತಪ್ಪದೆ ಉತ್ತಮ ಶಕ್ತಿಭರಿತ ಆಹಾರ ಒದಗಿಸಬೇಕು ಎಂದು ಅವರು ಹೇಳಿದರು.ರಕ್ತ ಹೀನತೆ ಮಕ್ಕಳಿಗಾಗಿ ಅನಿಯಾ ಮುಕ್ತ ಕರ್ನಾಟಕ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಪ್ರಥಮ ಹಂತದಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ನಂತರ ಹೈಸ್ಕೂಲ…

Read More

ಸಿಂದಗಿ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಸಿಂದಗಿ ಘಟಕದ ವತಿಯಿಂದ ಇದೇ ತಿಂಗಳು ಕೊನೆಯ ವಾರದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದ್ದು ಕವಿಗೋಷ್ಠಿಯಲ್ಲಿ ಭಾಗವಹಿಸಲು ಇಚ್ಚಿಸುವವರು ಜ. ೧೫ರೊಳಗಾಗಿ ಕನ್ನಡ ಸಾಹಿತ್ಯ ಪರಿಷತ್ತು, ಸಂಘಟನಾ ಕಾರ್ಯದರ್ಶಿ ರಮೇಶ ಪೂಜಾರಿ ದೂ. ೯೪೪೮೬೪೪೨೨೮, ಗೌರವ ಕಾರ್ಯದರ್ಶಿ ಶಿವಕುಮಾರ ಕಲ್ಲೂರ ೮೮೮೪೪೪೬೬೪೮ ಇವರಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬೇಕು. ಮತ್ತು ಬಾಗವಹಿಸುವ ಎಲ್ಲ ಕವಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು ಎಂದು ತಾಲೂಕು ಮಾದ್ಯಮ ಪ್ರತಿನಿಧಿ ಪಂಡಿತ ಯಂಪೂರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಮಹಿಳೆಯರು ಬದುಕು ಸ್ವಾವಲಂಬನೆಯಾಗಿರಬೇಕು ಎಂದು ಧರ್ಮಸ್ಥಳ ಸಂಘವು ಮಹಿಳೆಯರಿಗೆ ಉತ್ತೇಜನ ನೀಡುತ್ತಿದೆ ಎಂದು ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಉಪನ್ಯಾಸಕ ದ್ಯಾಮಣ್ಣ ಹೇಳಿದರು.ಪಟ್ಟಣದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನಾ ಕಛೇರಿಯ ವತಿಯಿಂದ ಸ್ವ-ಸಹಾಯ ಸಂಘಗಳಿಗೆ ಸ್ವ-ಉದ್ಯೋಗ ಅಧ್ಯಯನ ಪ್ರವಾಸ ಕೈಗೊಂಡು ವಿಜಯಪುರ ನಗರದ ಲೋಯಲ್ ಕೈಗಾರಿಕಾ ತರಬೇತಿ ಸಂಸ್ಥೆಗೆ ಬೇಟಿ ನೀಡದ ಸಂದರ್ಭದಲ್ಲಿ ಅಲ್ಲಿನ ಉಪನ್ಯಾಸಕ ದ್ಯಾಮಣ್ಣ ಮಾಹಿತಿ ನೀಡಿದರು.ಗೃಹ ಬಳಕೆಯ ಸ್ವ ಉದ್ಯೋಗಗಳಾದ ರೊಟ್ಟಿ ತಯಾರಿಕೆ, ಹಗ್ಗ ತಯಾರಿಕೆ, ಹಾಲು ಕರೆಯುವ ಮಿಲ್ಕಿಂಗ್ ಯಂತ್ರ, ಕುಂಬಾರಿಕೆ ಸೇರಿದಂತೆ ವಿವಿಧ ಸ್ವ-ಉದ್ಯೋಗಗಳ ಕುರಿತಾಗಿ ಮಾಹಿತಿ ನೀಡದರು.ತದನಂತರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ರುಡ್‌ಸೆಟ್ ಸಂಸ್ಥೆಗೆ ಬೇಟಿ ನೀಡಿ ಜಗದೀಶ ಅವರಿಂದ ಟೈಲರಿಂಗ್ ಮತ್ತು ಕೃಷಿಯೇತರ ಮತ್ತು ಕೃಷಿಗೆ ಪೂರಕವಾದಂತ ಹಲವಾರು ಸ್ವ ಉದ್ಯೋಗಗಳ ಕುರಿತು ಮಾಹಿತಿ ಪಡೆದುಕೊಂಡರು. ಆರ್ಥಿಕವಾಗಿ ಅಭಿವೃದ್ಧಿಯಾಗುವಲ್ಲಿ ಹೆಣ್ಣು ಮಕ್ಕಳ ಪಾತ್ರದ ಬಹಲ ಮುಖ್ಯ. ಮಹಿಳೆಯರು ಸೌ-ಉದ್ಯೋಗಿಗಳಾಗುವ ಮೂಲಕ ಸ್ವಾವಲಂಬನೆಯ ಬದುಕು ಸಾಗಿಸಿರಿ ಎಂದರು.ಈ ವೇಳೆ ಕೃಷಿ…

Read More

ಸಿಂದಗಿ: ಮಹಿಳೆಯರ ಮತ್ತು ಗರ್ಭಿಣಿಯರ ಅನುಕೂಲಕ್ಕಾಗಿ ಸರಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಆರೋಗ್ಯ ಸಮಸ್ಯೆಯಿಂದ ಯಾವುದೇ ಗರ್ಭಿಣಿ, ತಾಯಂದಿರು ಮತ್ತು ಶಿಶು ಮರಣವಾಗದಂತೆ ವಿಶೇಷ ಕಾರ್ಯಕ್ರಮ ಹಾಕಿಕೊಂಡಿದೆ. ಇದರ ಸದ್ಬಳಕೆಯನ್ನು ಮಾಡಿಕೊಳ್ಳಬೇಕು ಎಂದು ಡಾ.ನಾಗರಾಜ ಹೇಳಿದರು.ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ, ಪ್ರತಿಬಂಧಕ ಘಟಕ, ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ತಾಲೂಕ ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ/ಎಆರ್‌ಟಿ ಕೇಂದ್ರಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಗರ್ಭಿಣಿ ಮಹಿಳೆಯರ ಸೀಮಂತ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಅವರು, ಮಹಿಳೆಯರು ತರಕಾರಿ, ಹಣ್ಣು ಸೇರಿದಂತೆ ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಒಂದು ವೇಳೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸದೇ ಹೋದರೆ ಅನೇಕ ರೋಗಗಳಿಗೆ ಬಲಿಯಾಗುತ್ತಿದ್ದಾರೆ. ಹಾಗಾಗಿ ಆರೋಗ್ಯವಾಗಿರಲು ಪೌಷ್ಟಿಕಾಂಶದ ಆಹಾರವನ್ನು ಮನೆಯಲ್ಲಿಯೇ ತಯಾರಿಸಿ ಸೇವನೆ ಮಾಡಬೇಕು. ಮತ್ತು ಆರೋಗ್ಯ ತಪಾಸಣೆ ಮಾಡಿಸಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸಲಹೆ ನೀಡಿದರು.ಈ ವೇಳೆ ಐಸಿಟಿಸಿ ಘಟಕದ…

Read More

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ, ವಿಜಯಪುರ ಜಿಲ್ಲಾ ತೋಟಗಾರಿಕೆ ಸಂಘ (ರಿ), ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ ಹಾಗೂ ಜಿಲ್ಲಾ ಹಾಪ್ ಕಾಮ್ಸ್ ವಿಜಯಪುರ ಇವರ ಸಹಯೋದಲ್ಲಿ, ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದ ಬಸವ ವನದಲ್ಲಿ ಜನವರಿ ೧೩ರಿಂದ ೧೫ರವರೆಗೆ ೨೦೨೩-೨೪ನೇ ಸಾಲಿನ ಫಲ-ಪುಷ್ಪ ಪ್ರದರ್ಶನ ಹಾಗೂ ತೋಟಗಾರಿಕೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ಜನವರಿ ೧೩ರಂದು ಮಧ್ಯಾಹ್ನ ೪ ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಫಲ-ಪುಷ್ಪ ಪ್ರದರ್ಶನದ ಕಾರ್ಯಕ್ರಮದ ಉದ್ಘಾಟನೆಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ. ಪಾಟೀಲ ಅವರು ನೇರವೇರಿಸಲಿದ್ದಾರೆ.ಹಣ್ಣು ಮತ್ತು ತರಕಾರಿ ಪ್ರದರ್ಶನ ಕಾರ್ಯಕ್ರಮವನ್ನು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರು, ವಿಧಾನ ಪರಿಷತ್ತು ಹಾಗೂ ಸರ್ಕಾರದ…

Read More

ವಿಜಯಪುರ: ೨೦೨೪ನೇ ಸಾಲಿಗೆ ವಿಕಲಚೇತನ ರಿಯಾಯತಿ ಬಸ್ ಪಾಸುಗಳನ್ನು ನವಿಕರಿಸಿಕೊಳ್ಳುವಂತೆ ವಿಜಯಪುರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿಯನ್ನು ನೋಂದಾಯಿಸಿ, ನಿಗದಿತ ಅವಧಿಯೊಳಗೆ ತಮ್ಮ ತಾಲೂಕಿನ ವ್ಯಾಪ್ತಿಯ ಬಸ್ ನಿಲ್ದಾಣದ ಕಚೇರಿಯಲ್ಲಿ ರೂ.೬೬೦ ಶುಲ್ಕವನ್ನು ಭರಿಸಿ ಬಸ್ ಪಾಸ್ ನವೀಕರಿಸಿಕೊಳ್ಳಬಹುದಾಗಿದೆ. ಪಾಸು ನವೀಕರಣಗೊಳ್ಳುವವರೆಗೂ ೨೦೨೩ನೇ ಸಾಲಿನ ಹಳೆಯ ಬಸ್ ಪಾಸ್‌ನ್ನು ದಿನಾಂಕ ೨೯-೦೨-೨೦೨೪ರವರೆಗೆ ಬಳಸಲು ಮಾನ್ಯತೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ದೇವರಹಿಪ್ಪರಗಿ: ಕೋರವಾರ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸತತ ಮೂರನೇ ಬಾರಿಗೆ ಅವಿರೋಧವಾಗಿ ಸಂಗಮೇಶ್ ಛಾಯಾಗೊಳ್ ಆಯ್ಕೆಯಾದರು.ಮಂಗಳವಾರ ಜರುಗಿದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷರಾಗಿ ಶರಣಪ್ಪ ತಾಳಿಕೋಟಿ ನೂತನ ಸದಸ್ಯರಾಗಿ ಸುಬ್ಬನಗೌಡ ಪೊಲೀಸ್ ಪಾಟೀಲ್, ನಾನಾಗೌಡ ಬೋರಾವತ್, ಶರಣಬಸವ ಸುಂಬಡ, ಗುರಣ್ಣ ಅಂಗಡಿ, ಸೋಮಶೇಖರ್ ಹಿರೇಮಠ, ಬಾಬಾಸಾಹೇಬ್ ಕೋಟಗಿ, ಇಸ್ಮಾಯಿಲ್ ವಡಗೇರಿ, ಚಿದಾನಂದ ಚವ್ಹಾಣ್, ಭೀಮರಾಯ ತಳವಾರ್ ಆಯ್ಕೆಯಾದರು. ನಂತರ ಇವರನ್ನು ಸನ್ಮಾನಿಸಲಾಯಿತು. ಚುನಾವಣಾಧಿಕಾರಿಗಳಾಗಿ ಲೀಲಾವತಿಗೌಡ ಕಾರ್ಯನಿರ್ವಹಿಸಿದರು.ಗ್ರಾಮದ ಪ್ರಮುಖರಾದ ಮಲ್ಲನಗೌಡ ಬಿರಾದರ್, ಅಪ್ಪುಗೌಡ ಪಾಟೀಲ್, ಶ್ರೀನಾಥ್‌ಗೌಡ ಪಾಟೀಲ, ಹನುಮಂತರಾಯ ಪಾಟೀಲ, ಭೋಜಪ್ಪಗೌಡ ಬಿರಾದಾರ, ಬಸನಗೌಡ ಬಿರಾದಾರ, ಶರಣಗೌಡ ಪಾಟೀಲ, ಸಂಗಮೇಶ ಮ್ಯಾಗೇರಿ, ಬಿ.ಸಿ.ಹೊನಮಟ್ಟಿ, ಪ್ರಭುಲಿಂಗಯ್ಯ ಮೇಲಿನಮಠ, ಮತ್ತು ರೈತ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವಸದಸ್ಯರು ಭಾಗವಹಿಸಿದ್ದರು.

Read More