ಮುದ್ದೇಬಿಹಾಳ: ಖಾಸಗಿ ಶಾಲೆಗಳ ಶಿಕ್ಷಕರಿಗೆ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯ ಕರ್ತವ್ಯಕ್ಕೆ ತೆಗೆದುಕೊಳ್ಳಲು ಸರಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಹೇಳಿದರು.
ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಖಾಸಗಿ ಅನುದಾನ ರಹಿತ ಶಾಲೆಯ ಶಿಕ್ಷಕರುಗಳಿಗೆ ಸರಕಾರಿ ಮತ್ತು ಅನುದಾನಿತ ಶಾಲೆಯ ಶಿಕ್ಷಕರಿಗೆ ನೀಡುವ ಜವಾಬ್ದಾರಿಯನ್ನು ನೀಡಿಲ್ಲವೆಂದು ೫,೮ ಮತ್ತು ೯ನೇ ತರಗತಿ ಬಾಹ್ಯ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಹಾಜರಾಗುವುದಿಲ್ಲವೆಂದು ಹಠ ಹಿಡಿದು ಬೇಡಿಕೆ ಈಡೇರಿಸುವಂತೆ ನೀಡಿದ ಮನವಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಖಾಸಗಿ ಶಾಲೆಯ ಶಿಕ್ಷಕರ ನೋವಿನ ಸಮಸ್ಯೆ ಅರಿವಾಗಿದೆ. ತಕ್ಷಣ ಮೇಲಿನ ಅಧಿಕಾರಿಗಳಿಗೆ ಅರ್ಜಿಯನ್ನು ರವಾನೆಮಾಡಿ ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತೇನೆ. ತ್ವರಿತವಾಗಿ ಮೌಲ್ಯಮಾಪನ ಕಾರ್ಯಕ್ಕೆ ಮುಂದಾಗುವಂತೆ ತಿಳಿಸಿದರು.
ಇದೇ ವೇಳೆ ಅನುದಾನ ರಹಿತ ಸಹ ಶಿಕ್ಷಕರುಗಳ ಸಂಘದ ಅಧ್ಯಕ್ಷ ಬಸವರಾಜ ಭಜಂತ್ರಿ ಮಾತನಾಡಿ ೧೫-೨೦ ವರ್ಷಗಳ ಸೇವಾ ಅನುಭವ ಹೊಂದಿದ ಖಾಸಗಿ ಶಾಲೆಯ ಶಿಕ್ಷಕರನ್ನು ಗುರುತಿಸದಿರುವದು ಬೇಸರ ತಂದಿದೆ. ಎಸ್.ಎಸ್.ಎಲ್.ಸಿ ಆಂತರಿಕ ಅಂಕ ಪರಿಶೀಲನಾ ಸಮಿತಿಯಲ್ಲಿ ಓರ್ವ ಸದಸ್ಯನನ್ನಾಗಿ ಅಲ್ಲದೆ ಪರೀಕ್ಷಾ ಕೊಠಡಿ ಮೇಲ್ವಿಚಾರಕ ಕೆಲಸಗಳಲ್ಲಿ ಅವಕಾಶ ನೀಡದೆ ಕೇವಲ ಬಾಹ್ಯ ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ಕಡ್ಡಾಯ ಹೇರಿ ಇಲಾಖೆ ನಮಗೆ ಮಲತಾಯಿ ಧೋರಣೆ ತೋರುತ್ತಿದೆ. ನಮ್ಮ ಸೇವೆಯನ್ನೂ ಪರಿಗಣಿಸುವಂತಾಗಬೇಕು ಎಂದರು.
ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಒಕ್ಕೂಟದ ಅಧ್ಯಕ್ಷ ಶಿವುಕುಮಾರ ಬಿರಾದಾರ ಮಾತನಾಡಿದರು.
ಈ ವೇಳೆ ತಾಲೂಕು ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಗೌರವಾಧ್ಯಕ್ಷರಾದ ಅಶೋಕ ನಾಡಗೌಡ, ಉಪಾಧ್ಯಕ್ಷರಾದ ರವಿ ಬೆನಕಟಗಿ, ಪದಾಧಿಕಾರಿಗಳಾದ ರವಿ ಜಗಲಿ, ಡಾ.ಯಾಸೀನ್ ಮುಲ್ಲಾ ಸಹ ಶಿಕ್ಷಕರುಗಳಾದ ಬಿ.ಎಸ್.ಪಣೇದಕಟ್ಟಿ, ವಿನೋದ ಪಟಗಾರ, ನವೀದ ಡೋಂಗರಗಾವ, ಆನಂದ ಓಗಿ, ರಾಮಚಂದ್ರ ಹೆಗಡೆ, ವಿಶ್ವನಾಥ ಬನ್ನೆಟ್ಟಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

