ಮುದ್ದೇಬಿಹಾಳ: ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪದ್ಮಾವತಿದೇವಿಯ ಜಾತ್ರಾ ಮಹೋತ್ಸವ ಮಾ.೩೦ ರಿಂದ ಪ್ರಾರಂಭಗೊಳ್ಳಲಿದೆ.
ಮಾ.೩೦ ರಂದು ಬೆಳಿಗ್ಗೆ ೮ಕ್ಕೆ ಪ್ರಾರ್ಥನೆ, ೧೧-೨೧ ಕ್ಕೆ ನಾಗದೇವರ ವಿಗ್ರಹ ಪ್ರತಿಷ್ಠಾಪನೆ ನೆರವೇರಲಿದೆ. ನಂತರ ಕಲಾರೂಪಣ, ನಾಗಶಾಂತಿ, ಅಷ್ಠಕುಲ ನಾಗರ ಪೂಜೆ ನಂತರ ಮಹಾ ಪ್ರಸಾದ ಇರಲಿದೆ.
ಮಾ.೩೧ ರಂದು ಮಂಗಲವಾದ್ಯ ಘೋಷ, ಪ್ರಾರ್ಥನೆ, ಧ್ವಜಾರೋಹಣ, ತೋರಣ ಮುಹೂರ್ತ, ಶುದ್ಧಿ ಹವನ, ಶ್ರೀಬಲಿ, ಕಂಕಣ ಬಂಧನ, ಭಗವಾನ್ ಶ್ರೀ ೧೦೦೮ ಪಾರ್ಶ್ವನಾಥ ತೀರ್ಥಂಕರರಿಗೆ ನವಕಳಸಾಭಿಷೇಕ, ಪಂಚಾಮೃತ ಅಭಿಷೇಕ, ಕಲಿಕುಂಡ ಆರಾಧನಾ ಪೂಜೆ ಪ್ರಾರಂಭ, ಅಲಂಕಾರ, ನೈವೇದ್ಯ ಪೂಜೆ ಹಾಗೂ ಆರತಿ, ಸಂಜೆ ಆರಾಧನೆ, ನೂತನ ಭೋಜನ ಶಾಲೆಯಲ್ಲಿ ವಾಸ್ತು ವಿಧಾನ, ಶ್ರೀ ವಾಸ್ತು ರಾಕ್ಷೆÆÃಘ್ನ ಹವನ, ನವಗ್ರಹ ಶಾಂತಿ ಪೂಜೆ, ಮಂಗಳಾರುತಿ, ಮುತ್ತೆöÊದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನೆರವೇರಲಿವೆ.
ಏ.೧ ರಂದು ಮಂಗಲವಾದ್ಯಘೋಷ, ಕಳಸ, ಪಲ್ಲಕ್ಕಿ ಮತ್ತು ಮಹಾ ರಥದ ಹಗ್ಗದ ಮೆರವಣಿಗೆ, ಚಡಾವು ಸವಾಲು ಮಧ್ಯಾಹ್ನ ೨ಕ್ಕೆ ಧರ್ಮಸಭೆ ಮತ್ತು ಸನ್ಮಾನ ಸಮಾರಂಭ, ಸಂಜೆ ೫ ಗಂಟೆಗೆ ಮಹಾ ರಥೋತ್ಸವ ನಂತರ ಅಷ್ಟಾವಧಾನ ಪೂಜೆ, ಚಾಮರಸೇವೆ, ಶೋಡಶೋಪಚಾರ ಪೂಜೆ, ಮಹಾ ಮಂಗಳಾರುತಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಏ.೨ ರಂದು ನಿತ್ಯವಿಧದಿ, ಪಂಚಾಮೃತ ಅಭಿಷೇಕ ಪೂಜೆ, ಕುಂಕುಮೋತ್ಸವ, ಮಹಾಮಂಗಳಾರುತಿ, ಧ್ವಜ-ಅವರೋಹಣ ಮತ್ತು ವಿಸರ್ಜನೆ ಕಾರ್ಯಕ್ರಮಗಳು ಜರುಗಲಿದ್ದು, ಎಲ್ಲ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಆಗಮಿಸಿ ಮಾತೆಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

