Author: editor.udayarashmi@gmail.com

ವಿಜಯಪುರ: ಕ್ರೀಡೆ ಸದೃಢ ಸಮಾಜಕ್ಕೆ ಬೆಂಬಲವಾಗಿ ನಿಲ್ಲುತ್ತದೆ. ಕ್ರೀಡೆಯಿಂದ ಮಾನಸಿಕವಾಗಿ ದೈಹಿಕವಾಗಿ ವ್ಯಕ್ತಿಗಳ ನಿರ್ಮಾಣವಾಗುತ್ತದೆ. ಯುವಶಕ್ತಿ ಅತಿ ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಎಬಿವಿಪಿಯ ಉತ್ತರ ಪ್ರಾಂತ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಹೇಳಿದರು.ನಗರದ ಡಾ. ಬಿ ಆರ್ ಅಂಬೇಡ್ಕರ ಕ್ರೀಡಾಂಗಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಖೇಲೋ ಭಾರತ ವತಿಯಿಂದ ಸ್ವಾಮಿ ವಿವೇಕಾನಂದರ ಜಯಂತಿ ಅಂಗವಾಗಿ “ವಿವೇಕ ಟ್ರೋಫಿ” -೨೦೨೪ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯ ಚಟುವಟಿಕೆಗಳ ಜೊತೆಗೆ ವಿದ್ಯಾರ್ಥಿಗಳು ಕ್ರೀಡೆಯ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.ಬಿ.ಎಲ್.ಡಿ.ಇ. ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ, ಸಂಜಯ ಕಡ್ಲಿಮಟ್ಟಿ ಮಾತನಾಡಿದರು.ಖೇಲೋ ಭಾರತ ಪ್ರಮುಖ ಅಪ್ಪು ಹೂಗಾರ ಮಾತನಾಡಿ, ಎಬಿವಿಪಿಯು ಹೋರಾಟ, ಕಾರ್ಯಕ್ರಮಗಳ ಜೊತೆಗೆ ಈ ರೀತಿಯ ಕ್ರೀಡಾ ಚಟುವಟಿಕೆಗಳನ್ನು ಮಾಡುವ ದೃಷ್ಟಿಯಿಂದ ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲಾ ಕೇಂದ್ರಗಳಲ್ಲಿ ಆಯ್ಕೆಯಾದ ತಂಡಗಳು ಮುಂದೆ ರಾಜ್ಯಮಟ್ಟದಲ್ಲಿ ಆಡಲಿವೆ ಎಂದರು.ಎಬಿವಿಪಿಯ ಪ್ರಮುಖರಾದ ಅಮಿತಕುಮಾರ ಬಿರಾದಾರ, ಎಮ್ ಎಸ್ ಬಿರಾದಾರ, ಎಸ್ ಎಸ್ ಹೀರೆಮಠ,…

Read More

ಕೊಲ್ಹಾರ: ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ವಿಜಯಪುರ -ಬಾಗಲಕೋಟ ಜಿಲ್ಲೆಯ ಜನರ ತ್ಯಾಗ ಬಹು ದೊಡ್ಡದು ಎನ್ನುವುದನ್ನು ಸರಕಾರ ಮರೆತಂತೆ ಕಾಣುತ್ತದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡ ಟಿ.ಟಿ.ಹಗೇದಾಳ ಆರೋಪಿಸಿದರು.ಈ ಕುರಿತು ಬುಧವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಯ ರೈತರ ಕೂಗಿಗೆ ಸರಕಾರ ಸ್ಪಂದಿಸಿ ಕಾಲುವೆಗಳಿಗೆ ನೀರು ಹರಿಸಿರುವದು ಆ ಬಾಗದಲ್ಲಿ ಬರುವ ರೈತರಿಗೆ ಅನುಕೂಲಕರವಾಗಿರುವದು ಸ್ವಾಗತಾರ್ಹ ವಿಷಯ ಅದರಂತೆ ಅವಳಿ ಜಿಲ್ಲೆಯ ರೈತ ಬಾಂಧವರು ಮಳೆ ಸರಿಯಾಗಿ ಬಾರದೇ ಕೃಷಿ ಅವಲಂಬಿತ ನೀರಾವರಿ ಕ್ಷೇತ್ರದವರಿಗೆ ಕಾಲುವೆಗಳಿಗೆ ನೀರು ಹರಿಸುವುದರಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ ಅದ್ದರಿಂದ ತಕ್ಷಣವೇ ಸರಕಾರವು ತನ್ನ ಜವಾನ್ದಾರಿಯನ್ನು ಅರಿತು ಮುಳವಾಡ ಏತ ನೀರಾವರಿಯ ಆಲಮಟ್ಟಿ ಆಣೆಕಟ್ಟಿನ ಎಡ ಮತ್ತು ಬಲದಂಡೆಯ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.ಕಾರಣ ಈ ಭಾಗದ ರೈತರ ಬೆಳೆಗಳಾದ ಜೋಳ, ಈರುಳ್ಳಿ, ತೊಗರಿ, ಮೆನಸಿನಕಾಯಿ,ಗೋದಿ ಇನ್ನೂ ಹಲವಾರು ಬೆಳೆಗಳನ್ನು ಬೆಳೆಯುವ ಸಲುವಾಗಿ ಬಿತ್ತನೆ ಮಾಡಿದ್ದು ಅವುಗಳು ಸರಿಯಾಗಿ ಬೆಳೆಯಲು…

Read More

ಬಸವನಬಾಗೇವಾಡಿ: ಜಗತ್ತಿನಲ್ಲಿ ಯಾರಲ್ಲಿ ತ್ಯಾಗ ಭಾವವಿರುವದೋ ಅವರು ಜಗತ್ತಿನಲ್ಲಿ ಅವರು ಅಮರರಾಗಿ ಇರಲು ಸಾಧ್ಯ. ನಾವು ಗಳಿಸಿದ ಸಂಪತ್ತು ನಮ್ಮ ವಂಶಜರಿಗೆ ಆಗುತ್ತದೆ. ಅದೇ ಸಂಪತ್ತು ಸಮಾಜಕ್ಕೆ ಆದರೆ ಅದು ಅಮರವಾಗಿರುತ್ತದೆ. ಈ ಸಾಲಿನಲ್ಲಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಅಮರರಾಗಿದ್ದಾರೆ ಎಂದು ಕವಲಗಿ ಮಠದ ಡಾ. ಅಭಿನವ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಬುಧವಾರ ನಡೆದ ಶಿರಸಂಗಿ ಲಿಂಗರಾಜ ದೇಸಾಯಿ ಅವರ 163ನೇ ಜಯಂತಿ ಮತ್ತು ಶಿರಸಂಗಿ ಲಿಂಗರಾಜ ವೃತ್ತ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ತ್ಯಾಗವೀರ, ಜ್ಞಾನ ದಾಸೋಹಿ ಶಿರಸಂಗಿ ಲಿಂಗರಾಜ ದೇಸಾಯಿ ಅವರು ಸಮಾಜಮುಖಿ ಕೆಲಸಗಳಿಗಾಗಿ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ. ಶಿರಸಂಗಿ ಲಿಂಗರಾಜ ದೇಸಾಯಿ ಅವರು ಅಂದಿನ ಕಾಲದಲ್ಲಿ ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶ್ರಮಿಸಿದ್ದಾರೆ. ಜನಸೇವೆಗೆ ಹೆಸರಾದ ಅವರು, ತಮ್ಮ ತನು-ಮನ-ಧನದಿಂದ ಸಮಾಜ ಸೇವೆ ಮಾಡಿದ್ದಾರೆ. ಅವರ ಆದರ್ಶ ನಮಗೆ ಆದರ್ಶಪ್ರಾಯವಾಗಿದೆ ಎಂದು ಹೇಳಿದರು.1904 ರಲ್ಲಿ ಹಾನಗಲ್ಲ…

Read More

ಬಸವನಬಾಗೇವಾಡಿ: ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಣಕಾಸು ಕ್ಷೇತ್ರದಲ್ಲಿ ಉದಯೋನ್ಮುಖ ಪ್ರವೃತ್ತಿಗಳು ಮತ್ತು ಅವಕಾಶಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಹಮ್ಮಿಕೊಳ್ಳಲಾಗಿತ್ತು.ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಮಾಯ್ ಲಾಜಿಕ್ ಕಂಪನಿಯ ಸಿಇಓ ವಿನೋದಚಂದ್ರನ್ ಅವರು ವಾಣಿಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ದುಡಿಮೆಗೆ ಸಂಬಂಧಿಸಿದ ಕೌಶಲ್ಯಗಳನ್ನು ರೂಢಿಸಿಕೊಂಡು ಹೊರಗೆ ಬಂದಾಗ ಮಾತ್ರ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಉದ್ಯೋಗಾಧಾರಿತ ತರಬೇತಿ, ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಕಂಪನಿಗಳಲ್ಲಿ ಅಲ್ಪಾವಧಿಯಲ್ಲಿಯೇ ಉನ್ನತಮಟ್ಟಕ್ಕೇರುವ ಎಲ್ಲ ಮಾರ್ಗಗಳನ್ನು ಅರಿತುಕೊಳ್ಳಬೇಕು. ಜಗತ್ತು ಇಂದು ಎಲ್ಪಿಜಿಗೆ ಒಳಪಟ್ಟಿರುವುದರಿಂದಾಗಿ ವಾಣಿಜ್ಯ ವಿಭಾಗದಲ್ಲಿ ಸಾಕಷ್ಟು ಅವಕಾಶಗಳು ಇರುವುದರಿಂದಾಗಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದ ಅವರು, ಬಿಕಾಂ ಪದವಿ ನಂತರ ಇರುವ ವಿಪುಲ ಅವಕಾಶಗಳ ಕುರಿತು ಮಾಹಿತಿ ನೀಡಿದರು.ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದರು.ಕಾರ್ಯಾಗಾರದಲ್ಲಿ ಐಕ್ಯೂಎಸಿ ಹಾಗೂ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ದಿಲೀಪಕುಮಾರ ಕೆ.,…

Read More

ಬಸವನಬಾಗೇವಾಡಿ: ನಮ್ಮ ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಅಧ್ಯಯನದಲ್ಲಿ ಉತ್ಸಾಹ ಇಮ್ಮಡಿಗೊಳ್ಳುತ್ತದೆ ಎಂದು ವಿಜಯಪುರ ಸೌಖ್ಯದಾ ಆಸ್ಪತ್ರೆಯ ಡಾ.ಅಂಬಿಕಾ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿಜಯಪುರದ ಸೌಖ್ಯದಾ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನಾರೋಗ್ಯದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಸಣ್ಣ ಪುಟ್ಟ ಕಾಯಿಲೆ ಎಂದು ನಿಷ್ಕಾಳಜಿ ಮಾಡಬಾರದು. ಪ್ರತಿದಿನ ನಿಯಮಿತ ವ್ಯಾಯಾಮ ರೂಢಿಸಿಕೊಳ್ಳಬೇಕು. ಪೌಷ್ಟಿಕ ಆಹಾರದೊಂದಿಗೆ ಹಾಲು, ಹಣ್ಣು ಸೇವಿಸಬೇಕು ಎಂದು ಹೇಳಿದರು.ಪ್ರಾಚಾರ್ಯ ಎಸ್.ಡಿ.ಪಾಟೀಲ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಆರೋಗ್ಯ ಮುಖ್ಯವಾಗಿದೆ. ವಿದ್ಯಾರ್ಥಿಗಳು ಇಂತಹ ಶಿಬಿರಗಳ ಸದುಪಯೋಗ ಪಡೆದುಕೊಂಡು ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.ಡಾ.ಸುಶ್ಮಿತಾ ಪಾಟೀಲ, ಅಸ್ಪತ್ರೆಯ ಸಿಬ್ಬಂದಿ ಭಾಗೇಶ, ರಮೇಶ, ಅರುಣ, ಸಾವಿತ್ರಿ, ಪವಿತ್ರಾ, ಜ್ಯೋತಿ, ಸಚೀನ, ಉಪ ಪ್ರಾಚಾರ್ಯ ರಮೇಶ ಪೂಜಾರಿ, ಉಪನ್ಯಾಸಕರಾದ, ಜಿ.ಎಸ್.ಡೊಮನಾಳ,…

Read More

ಬಸವನಬಾಗೇವಾಡಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜ. ೧೨ ರಂದು ಬೆಳಗ್ಗೆ ೧೧ ಗಂಟೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ.ಕೃಷ್ಣಪ್ಪ ಬಣ) ಪದಾಧಿಕಾರಿಗಳ, ಸದಸ್ಯರ ಪೂರ್ವಸಭೆ ಕರೆಯಲಾಗಿದೆ.ಸಭೆಯಲ್ಲಿ ಸಮಿತಿಯ ಸುವರ್ಣ ಸಂಭ್ರಮ ಸಮಾವೇಶ, ಕಾಂತರಾಜ ವರದಿ ಜಾರಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಲಾಗುವುದು.ಪೂರ್ವಭಾವಿ ಸಭೆಗೆ ಸಮಿತಿಯ ರಾಜ್ಯ ಸಮಿತಿ ಸದಸ್ಯ ಭೀಮರಾಯ ಜಿಗಜಿಣಗಿ, ವೈ.ಎಸ್.ಮ್ಯಾಗೇರಿ, ಹರೀಶ ಮ್ಯಾಗೇರಿ, ರಾಯಪ್ಪ ದೊಡಮನಿ, ಏಕನಾಥ ದಾಶ್ಯಾಳ, ಕನಕೇಶ ಬಾಗೇವಾಡಿ ಇತರರು ಆಗಮಿಸುತ್ತಾರೆ. ಪೂರ್ವಭಾವಿ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಆಗಮಿಸಬೇಕೆಂದು ಸಂಚಾಲಕ ತಮ್ಮಣ್ಣ ಕಾನಾಗಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಹಾಗೂ ರಾಜ್ಯ ಸಂಜೀವಿನಿ ಯೋಜನೆಯ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಆಗ್ರಹಿಸಿ ಜ. ೧೩ ರಂದು ಮಧ್ಯಾನ್ಹ ೧ ಗಂಟೆಗೆ ಸಚಿವ ಶಿವಾನಂದ ಪಾಟೀಲರಿಗೆ ಬಸವನಬಾಗೇವಾಡಿಯಲ್ಲಿ ಮನವಿ ಸಲ್ಲಿಸಲಾಗುವುದು. ತಾಲೂಕಿನ ಸಮಸ್ತ ಸರ್ಕಾರಿ ನೌಕರ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮುದ್ದೇಬಿಹಾಳ: ಜ.೨೨ರಂದು ಅಯೋದ್ಯೆಯ ಐತಿಹಾಸಿಕ ಮರ್ಯಾದಾ ಪುರುಶೋತ್ತಮರ ದೇವಸ್ಥಾನದಲ್ಲಿ ಶ್ರೀ ರಾಮರ ನೂತನ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು ಅವತ್ತಿನ ದಿನ ಪ್ರತಿಯೊಬ್ಬರು ಬೆಳಿಗ್ಗೆ ೧೧ ಗಂಟೆಯಿಂದ ಮದ್ಯಾಹ್ನ ೧ಗಂಟೆಯವರೆಗೆ ೧೦೮ ಬಾರಿ ಶ್ರೀ ರಾಮ್ ಜಯ ರಾಮ್, ಜಯ್ ಜಯ ರಾಮ್ ಎಂದು ಮಹಾ ಮಂತ್ರ ಪಠಿಸಬೇಕು ಎಂದು ಜಿಲ್ಲಾ ಪಂಚಾಯತ ನ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಕರೆ ನೀಡಿದರು.ತಾಲೂಕಿನ ಗೆದ್ದಲಮರಿ ಗ್ರಾಮದ ಹನುಮಾನ್ ದೇವಸ್ಥಾನದಲ್ಲಿ ಅಯೋಧ್ಯೆಯಿಂದ ಬಂದಿರುವ ರಾಮಮಂದಿದ ಅಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಅಂದು ದೇಶದಲ್ಲಿ ಎಲ್ಲೆಡೆ ಶ್ರೀ ರಾಮರ ಭಜನೆ, ಪೂಜಾ ವಿಧಿ ವಿಧಾನಗಳು ಜರುಗಲಿದ್ದು ಸಾಯಂಕಾಲ ಸೂರ್ಯಾಸ್ತದ ನಂತರ ಎಲ್ಲರೂ ತಮ್ಮ ತಮ್ಮ ಮನೆಗಳ ಮುಂದೆ ದೀಪ ಹಚ್ಚಬೇಕು. ನಾವು ನೀಡಿದ ಅಕ್ಷತೆಯನ್ನು ಪೂಜಿಸಿ ಅವುಗಳನ್ನು ಬಳಸಿ ನ್ನ ತಯಾರಿಸಿ ಇತತರಿಗೆ ಉಣಬಡಿಸುವಂತೆ ತಿಳಿಸಿದರು.ಈ ವೇಳೆ ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪ್ರಭು ಕಡಿ, ಶಿವಯೋಗಪ್ಪ ರಾಂಪೂರ, ರವಿ…

Read More

ವಿಜಯಪುರ: ಜನವರಿ ೨೬ರಂದು ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಜನವರಿ ೧೧ರ ಬೆಳಿಗ್ಗೆ ೧೧ ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಯಲಿದೆ.ಸಂಬಂಧಿಸಿದ ಅಧಿಕಾರಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಸಭೆಗೆ ಹಾಜರಾಗಿ, ಅಗತ್ಯ ಸಲಹೆ ಅಭಿಪ್ರಾಯ ನೀಡುವಂತೆ ಅಪರ ಜಿಲ್ಲಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಹಲವು ಜಿಲ್ಲೆಗಳಲ್ಲಿ ಕೋವಿಡ್-೧೯ ಉಪತಳಿಯ ಜೆಎನ್೧ ಪ್ರಕರಣ ವರದಿಯಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆಯಾಗಿ ಕೋವಿಡ್-೧೯ ಮೂರನೇ ಡೋಸ್ ಪಡೆಯದೆ ಉಳಿದಿರುವ ೬೦ ವರ್ಷ ಮೇಲ್ಪಟ್ಟವರು, ಮಧುಮೇಹ, ಅಧೀಕ ರಕ್ತ ಒತ್ತಡ ಇತ್ಯಾದಿ ಕಾಯಿಲೆಯುಳ್ಳ, ಕಡಿಮೆ ರೋಗ ನಿರೋಧಕ ಶಕ್ತಿ ಉಳ್ಳವರು ಬೂಸ್ಟರ್ ಡೋಸ್ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲಿ ಕೋವಿಡ್-೧೯ ಲಸಿಕಾರಣವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದ್ದು, ಈ ಹಿಂದೆ ಕೋವಿಡ್-೧೯ ಲಸಿಕೆಯನ್ನು ಪಡೆಯದೆ ಇರುವವರು ಹಾಗೂ ಆರೋಗ್ಯ ಕಾರ್ಯಕರ್ತೆಯರು ಕೋವಿಡ್-೧೯ ಸೋಂಕಿಗೆ ತುತ್ತಾಗುವ ಹೆಚ್ಚಿನ ಅಪಾಯದಂಚಿನಲ್ಲಿರುತ್ತಾರೆ. ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಬೂಸ್ಟರ್ ೩ನೇ ಡೋಸ್ ಲಸಿಕೆಯನ್ನು ಮುನ್ನೆಚ್ಚರಿಕೆ ಡೋಸ್ ನೀಡುವ ಅಭಿಯಾನ ಪ್ರಾರಂಭವಾಗಿದ್ದು, ಕೋವಿಶೀಲ್ಡ್ ಅಥವಾ ಕೋವಾಕ್ಸಿನ್ ಲಸಿಕೆಯ ೨ನೇ ಡೋಸ್ ಪಡೆದು ೬ ತಿಂಗಳುಗಳು ಅಥವಾ ೨೬ ವಾರಗಳನ್ನು ಪೂರೈಸಿದ ೧೮ ವರ್ಷ ಮೇಲ್ಪಟ್ಟು ಮುನ್ನೆಚ್ಚರಿಕೆ (ಬೂಸ್ಟರ್) ಡೋಸ್ ಲಸಿಕಾಕರಣಕ್ಕೆ ಹೋಗಿ ಲಸಿಕೆ ಹಾಕಿಸಿ ಕೊಳ್ಳಬೇಕು. ಈಗಾಗಲೇ ಕೋವಿಡ್ ಬೂಸ್ಟರ್…

Read More