ವಿಜಯಪುರ: ಪಸಕ್ತ ಸನ್ ೨೦೨೪-೨೫ ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ ೩೦ ರ ಒಳಗಾಗಿ ಪಾವತಿಸುವ ಕರದಾತರಿಗೆ ಶೇ ೫% ರಿಯಾಯಿತಿಯನ್ನು ನೀಡಲಾಗುವುದು ಆದ್ದರಿಂದ ತೆರಿಗೆ ಪಾವತಿಸಿ ಇದರ ಲಾಭ ಪಡೆಯಬಹುದು. ಜೂನ್ ಒಳಗಾಗಿ ಪಾವತಿಸಿದಿದ್ದರೆ ಜೂಲೈ ತಿಂಗಳಿನಿಂದ ಪ್ರತಿ ತಿಂಗಳಿಗೆ ಶೇ ೨% ದಂಡದೊಂದಿಗೆ ಪಾವತಿಸಬೇಕಾಗುತ್ತದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನು ಸಕಾಲದಲ್ಲಿ ಪಾವತಿಸಲು ವಿಫಲರಾದ ಆಸ್ತಿ ಮಾಲೀಕರುಗಳ ವಿರುದ್ಧ ಕೆ.ಎಮ್.ಸಿ. ಕಾಯ್ದೆ ೧೯೭೬ ರ ಅಧಿನಿಯಮಗಳನ್ವಯ ಬಾಕಿ ಇರುವ ಮೊತ್ತಗಳನ್ನು ವಸೂಲಿ ಮಾಡಲು, ಆಸ್ತಿ ಕರ ಬಾಕಿ ಉಳಿಸಿಕೊಂಡವರ ವಿರುದ್ದ ನ್ಯಾಯಾಲಯದಲ್ಲಿ ದಾವೆ ದಾಖಲಿಸಲು, ಮತ್ತು ಆಸ್ತಿ ತೆರಿಗೆ ಬಾಕಿ ಇರುವ ಮೊತ್ತವನ್ನು ಜಪ್ತಿ ಮೂಲಕ ವಸೂಲಿ ಮಾಡಲು ಮಹಾನಗರ ಪಾಲಿಕೆ ಅಧಿಕಾರ ಹೊಂದಿರುತ್ತದೆ. ಕಾರಣ ಆಸ್ತಿ ಕರದಾತರು ಅವರ ವೈಯಕ್ತಿಕ ಆರ್ಥಿಕ ನಷ್ಟ, ಯಾವುದೇ ಅಹಿತಕರ ಸನ್ನಿವೇಶಗಳಿಗೆ ಅವಕಾಶ ನೀಡದೇ ಸಕಾಲದಲ್ಲಿ ಆಸ್ತಿ ತೆರಿಗೆ ಪಾವತಿಸಲು ಕೋರಿದೆ.
ಉಪನೋಂದಣಾಧಿಕಾರಿಗಳ ಮಾರುಕಟ್ಟೆ ಮಾರ್ಗಸೂಚಿ ಬೆಲೆಗಳು ಪರಿಷ್ಕೃತಗೊಂಡಿದ್ದು ಅವುಗಳಂತೆ ವಿಜಯಪುರ ಮಹಾನಗರಪಾಲಿಕೆಯ ಆಸ್ತಿ ತೆರಿಗೆಯನ್ನು ಸನ್ ೨೦೨೪-೨೫ ನೇ ಸಾಲಿಗೆ ಅನ್ವಯವಾಗುವಂತೆ ಆಸ್ತಿ ತೆರಿಗೆಯಲ್ಲಿ ಹೆಚ್ಚಳವಾಗುವುದು ಕಾರಣ ಇದಕ್ಕೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಿದೆ.
ಆಸ್ತಿ ತೆರಿಗೆಯನ್ನು ಪಾವತಿಸಲು ಕರದಾತರಿಗೆ ಮಹಾನಗರಪಾಲಿಕೆ ವಲಯ ಕಛೇರಿಗಳಾದ ಗಾಂಧಿಚೌಕ, ಬಡಿಕಮಾನ, ಜಲನಗರ, ಕಛೇರಿಗಳಲ್ಲಿರುವ ಕರ್ನಾಟಕ ಒನ್ ಕೇಂದ್ರಗಳಲ್ಲಿ ಪಾವತಿಸಬಹುದಾಗಿದ್ದು ಇವುಗಳಲ್ಲದೇ ಈ ಕೆಳಕಾಣಿಸಿದ ನಗರವ ವಿವಿಧ ಪ್ರದೇಶಗಳಲ್ಲಿರುವ ಕರ್ನಾಟಕ ಒನ್ ಫ್ರಾಂಚೈಸಿ ಕೇಂದ್ರಗಳಲ್ಲಿಯೂ ಆಸ್ತಿ ತೆರಿಗೆ ಪಾವತಿಸಲು ಅವಕಾಶವಿರುತ್ತದೆ.
ಮಹಾನಗರಪಾಲಿಕೆ ವ್ಯಾಪ್ತಿಗೆ ಬರುವ ತೆರಿಗೆದಾರರು ಈ ಕೆಳಕಂಡ ಕರ್ನಾಟಕ ಒನ್ ಪ್ರಾಂಚೈಸಿ ಕೇಂದ್ರಗಳಲ್ಲೂ ಸಹ ತೆರಿಗೆ ಪಾವತಿಸಬಹುದಾಗಿದೆ.
ಕರ್ನಾಟಕ ಒನ್, ಶಾಹುನಗರ ಗಚ್ಚಿನಕಟ್ಟಿ ಬಿಲ್ಡಿಂಗ್, ಕರ್ನಾಟಕ ಒನ್, ಬಿ.ಎಲ್.ಡಿ.ಇ. ನಂದಿನಿ ಪಾರ್ಲರ ಅಂಬಾ ಭವಾನಿ ಗುಡಿ ಹತ್ತಿರ ಗಚ್ಚಿನಕಟ್ಟಿ ಕಾಲೋನಿ, ಕರ್ನಾಟಕ ಒನ್,ಸಿಂದಗಿ ರೋಡ, ಹನುಮಾನ ಗುಡಿ ಹತ್ತಿರ, ಯೋಗಾಪೂರ ಕಾಲನಿ, ಕರ್ನಾಟಕ ಒನ್, ಹೊಸ ತಹಸಿಲ್ದಾರ ಆಫೀಸ್ ಎದುರಿಗೆ ಝಡ್.ಪಿ.ಕಾಂಪ್ಲೇಕ್ಸ್ ಮನಗೂಳಿ ರೋಡ, ಕರ್ನಾಟಕ ಒನ್, ಪ್ಲಾಟ ನಂ: ೨೮೮ ಎಸ್.ಆರ್.ಕಾಲೋನಿ, ಜಲನಗರ ಮೇನ ರೋಡ ,ನಿಡೋಣಿ ಮೇಡಿಕಲ್ ಹತ್ತಿರ, ಕರ್ನಾಟಕ ಒನ್, ಅಂಗಡಿ ನಂ: ೦೭ ಮೀನಾಕ್ಷಿ ಚೌಕ್, ಕರ್ನಾಟಕ ಒನ್, ಗಾಂಧಿ ಸ್ಕೂಲ, ಗ್ಯಾಂಗ ಬಾವಡಿ ದರ್ಗಾ ರೋಡ, ವಾರ್ಡ ನಂ:೩,. ಕರ್ನಾಟಕ ಒನ್, ಬಸ್ ಸ್ಟಾö್ಯಂಡ ಹತ್ತಿರ ಕೆ.ಸಿ.ಮಾರ್ಕೇಟ್ ರೋಡ, ಮೀನಾಕ್ಷಿ ಚೌಕ ಇಲ್ಲಿ ತೆರಿಗೆಯನ್ನು ಪಾವತಿಸಬಹುದಾಗಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
ವಿಜಯಪುರ: ಏ.೩೦ರೊಳಗೆ ತೆರಿಗೆ ಪಾವತಿಸಿ ರಿಯಾಯತಿ ಪಡೆಯಲು ಮನಪಾ ಕೋರಿಕೆ
Related Posts
Add A Comment
