ವಿಜಯಪುರ: ಹಿಂದುಳಿದವರ, ಶೋಷಿತರ ಪರ ಯಾವತ್ತೂ ನಿಲ್ಲುವೆ ಎಂದು ಲೋಕಸಭೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಭರವಸೆ ನೀಡಿದರು.
ನಗರದ ಹೊರವಲಯದಲ್ಲಿ ಭಾನುವಾರ ತಳವಾರ ಸಮುದಾಯದ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನೊಂದಿರುವ ಜನರ ಪರ ಯಾವತ್ತೂ ಕಾಂಗ್ರೆಸ್ ಪಕ್ಷ ಮಿಡಿದಿದೆ. ಎಲ್ಲ ಸಮಾಜ, ಸಮುದಾಯದ ಪರ ನಿಂತಿದೆ. ನೆಹರೂ, ಇಂದಿರಾಗಾಂಧಿಯವರ ಕಾಲದಿಂದಲೂ ಹಿಂದುಳಿದವರ ಕಣ್ಣೀರು ಒರೆಸಲು ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಕ್ಷ ಹಾಕಿಕೊಂಡಿದೆ. ತಮಗೆ ಮತ ನೀಡಿ ಸಂಸದನಾಗಿಸಿದರೆ ಶೋಷಿತ ಸಮುದಾಯದವರ ಪರವಾಗಿ ತಾವು ಅಭಿವೃದ್ಧಿ ಕಾರ್ಯಕ್ಕೆ ಯಾವತ್ತೂ ಶ್ರಮಿಸುವುದಾಗಿ ಹೇಳಿದರು.
ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ಯೋಗ್ಯ ಅಭ್ಯರ್ಥಿಯಾದ ಆಲಗೂರರಿಗೆ ನಮ್ಮ ಸಮುದಾಯದ ಜನ ಟೊಂಕ ಕಟ್ಟಿ ನಿಲ್ಲಬೇಕು. ಪ್ರಬುದ್ಧ ಹಾಗೂ ಸ್ನೇಹ ಜೀವಿಯಾದ ಇವರು ಗೆಲ್ಲುವ ವಾತಾವರಣವಿದೆ. ಇಂತಹ ಸುಸಂದರ್ಭವನ್ನು ಬಳಸಿಕೊಳ್ಳಬೇಕು. ಮೋದಿ ಬಂದರೆ ದೇಶ ಉಳಿಯುತ್ತದೆ ಎನ್ಬುವ ಭ್ರಮೆಯಿಂದ ನಾವೆಲ್ಲ ಹೊರಗೆ ಬರಬೇಕು ಎಂದು ಹೇಳಿದರು.
ಸಭೆಯಲ್ಲಿ ಸುರೇಶಗೌಡ ಪಾಟೀಲ, ಭೀಮಣ್ಣ ಕೌಲಗಿ, ಹನುಮಂತ ಸುಣಗಾರ, ಶಂಕರ ನಾಟೀಕಾರ, ಸಾಹೇಬಗೌಡ ಬಿರಾದಾರ, ಶ್ರೀಮಂತ ಝಳಕಿ, ಸದ್ಣಪ್ಪ ಝಳಕಿ, ಕಾಶೀನಾಥ ಅಸ್ಕಿ, ಸೋಮನಗೌಡ ಪಾಟೀಲ, ದಯಾನಂದ ಪಾಟೀಲ, ಧರ್ಮರಾಜ ವಾಲೀಕಾರ, ರಾಮಪ್ಪ ಕಟ್ಡಿಮನಿ ನ್ಯಾಯವಾದಿ, ರಾಜು ವಾಲೀಕಾರ, ಕವಿತಾ ತಟಗಾರ, ಗಂಗಾಬಾಯಿ ದುಂಬಾಳೆ, ಅಂಬಣ್ಣ ಕಲಮನಿ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

