ಸಿಂದಗಿ: ಆಧುನಿಕತೆಯ ಭರಾಟೆಗೆ ಪರಿಸರ ವಿನಾಶವಾಗುತ್ತಿದೆ.! ಪರಿಸರ ಚಕ್ರ ತಲೆಕೆಳಗಾಗಿ ಮಾರಕ ರೋಗಗಳು, ಪ್ರಕೃತಿ ವಿಕೋಪಗಳು ಘಟಿಸುತ್ತಿವೆ. ಈ ಮಧ್ಯೆ ನಮ್ಮ ನಡುವೆ ಚಿಲಿಪಿಲಿಯೆಂದು ಉಲಿಯುತ್ತಿದ್ದ ಪಕ್ಷಿಗಳು ಕಣ್ಮರೆಯಾಗುತ್ತಿವೆ ಎಂದು ಶಿಕ್ಷಕ ಸಿದ್ದಲಿಂಗ ಚೌದರಿ ಹೇಳಿದರು
ಲಿಟಲ್ ವಿಂಗ್ಸ್ ಪ್ರಿ ಸ್ಕೂಲನಲ್ಲಿ ಸೋಮವಾರ ಏಪ್ರಿಲ್ ಇಂದು ಹಮ್ಮಿಕೊಂಡ ಏಪ್ರಿಲ್ 1 ಕೂಲ್ ಡೇ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿ ಮಾತನಾಡಿದ ಅವರು ಗಿರಮರಗಳು ನಾಶವಾದ ಪರಿಣಾಮ ಅಲ್ಲಿದ್ದ ಅನೇಕ ಪಕ್ಷಿಗಳು ಇಂದು ಮರೆಯಾಗಿವೆ. ಇನ್ನು ಮಳೆ ಸಮರ್ಪಕವಾಗಿ ಬಾರದೆ ಪ್ರಾಣಿಪಕ್ಷಿಗಳಿಗೆ ಕಾಡಿನಲ್ಲಿ ನೀರು ಸಿಗುವುದು ಕಷ್ಟವಾಗಿದೆ. ಹೀಗೆ ಆಹಾರ, ನೀರು, ಪ್ರಾಕೃತಿಕ ವೆಪರೀತ್ಯದಿಂದ ದಿನದಿಂದ ದಿನಕ್ಕೆ ಪಕ್ಷಿಗಳ ಸಂಕುಲ ನಶಿಸುತ್ತಿದೆ. ಇಂದಿನ ಮಕ್ಕಳು ಅನೇಕ ಪಕ್ಷಿಗಳನ್ನು ಚಿತ್ರಗಳ ಮೂಲಕ ಹಾಗೂ ಪಕ್ಷಿ ಸಂಗ್ರಹಾಲಯಗಳಲ್ಲಿ ವೀಕ್ಷಿಸುವಂತಹ ಸ್ಥಿತಿ ತಲೆದೋರಿದೆ. ಆದರೆ ನಮ್ಮ ಸರ್ಕಾರಗಳು ಮಾತ್ರ ಪ್ರಕೃತಿಯಲ್ಲಿ ಉಂಟಾಗುತ್ತಿರುವ ಅಸಮತೋಲನಕ್ಕೆ ಕಾರಣ ಹುಡುಕುವ ಅಥವಾ ಪ್ರಾಣಿ ಪಕ್ಷಿ ಸಂಕುಲ ವಿನಾಶ ತಪ್ಪಿಸುವತ್ತ ಗಮನ ಹರಿಸುತ್ತಿಲ್ಲ ಎಂದು ವಿಷಾದಿಸಿದರು.
ಇದೆ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ವ್ಯವಸ್ಥಾಪಕ ಅವದೂತ ಜೋಶಿ ಪರಿಸರ ಜೊತೆ ಪಕ್ಷಿ ಸಂಕುಲನ ರಕ್ಷಸಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಎಲ್ಲ ಮಕ್ಕಳಿಗೂ ಸಸಿಗಳನ್ನು ವಿತರಿಸಲಾಯಿತು. ಅಲ್ಲದೇ ತಟ್ಟೆಯಲ್ಲಿ ನೀರು ಮತ್ತು ದಾನ್ಯಗಳನ್ನು ಇಟ್ಟು ಪ್ರತಿ ಮನೆಯಲ್ಲಿ ಈ ಕಾರ್ಯ ನಡೆಯಲೆಂದು ಪ್ರತಿಜ್ಞೆಗೈಯಲಾಯಿತು.
ಈ ಸಂದರ್ಭದಲ್ಲಿ ಭಾರತಿ ಚೌಧರಿ, ಕಾವೇರಿ ಬಿರಾದಾರ ಪೂಜಾ, ಸುರಭಿ, ನಗ್ಮಾ, ಅಭಿಷೇಕ, ಐಶ್ವರ್ಯ, ನಿಖಿತಾ, ನಾಗರೇಕಾ ಪ್ರಿಯಾಂಕಾ, ಅಶ್ವಿನಿ,ಸಂತೋಷ ಕಾಂಬಳೆ, ಎಸ್ ಎಸ್ ಪಾಟೀಲ, ಧರು ಕುಂಬಾರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

